ಜಿಲ್ಲೆಯಲ್ಲಿ ೨೦೨೪ರಲ್ಲಿ ಅಪರಾಧಗಳ ಪ್ರಮಾಣ ಗಣನೀಯ ಇಳಿಕೆ

2 ckm 9
ಚಿಕ್ಕಮಗಳೂರಿನ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‌ಪಿ ವಿಕ್ರಮ ಅಮಟೆ ಸುದ್ದಿಗೋಷ್ಠಿ ನಡೆಸಿದರು. ಎಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್‌ಪಿಗಳಾದ ಶೈಲೇಂದ್ರ, ಹಾಲಮೂರ್ತಿ ರಾವ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ೨೦೨೩ಕ್ಕೆ ಹೋಲಿಸಿದಲ್ಲಿ ಕಳೆದ ೨೦೨೪ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಒಂದು ವರ್ಷದಲ್ಲಿ ಒಟ್ಟು ೫,೯೦೪ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಮ ಅಮಟೆ ತಿಳಿಸಿದರು.

ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩ರಲ್ಲಿ ಜಿಲ್ಲೆಯಲ್ಲಿ ೬,೨೪೧ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ೫೯೦೪ ಪ್ರಕರಣಗಳು ದಾಖಲಾಗಿವೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷ ೭೭೫ ಅಸ್ವಾಭಾವಿಕ ಸಾವುಗಳು ಸಂಭವಿಸಿದ್ದು, ೫೫ ವಂಚನೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ೨೮ ಕೊಲೆ, ೫೧ ಕೊಲೆಗೆ ಯತ್ನ, ೪೪ ದೊಂಬಿ ಹಾಗೂ ೫೨೧ ಹಲ್ಲೆ ಪ್ರಕರಣಗಳು ನಡೆದಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೊಲೆ ಪ್ರಕರಣಗಳು ಸಂಭವಿಸಲು ಪ್ರಮುಖವಾದ ಕಾರಣ ಅನೈತಿಕ ಸಂಬAಧ, ಕುಟುಂಬ ಸದಸ್ಯರ ನಡುವಿನ ಕಲಹ, ಆಸ್ತಿ ವಿವಾದ, ಕ್ಷುಲ್ಲಕ ಕಾರಣವಾಗಿವೆ. ಇದಕ್ಕೆ ಹೊರತಾಗಿ ಹಳೆ ದ್ವೇಷ, ಗ್ಯಾಂಗ್‌ವಾರ್‌ಗಳಿAದ ಕೊಲೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ವತ್ತು ಕಳವು ಪ್ರಕರಣಗಳಿಗೆ ಸಂಬAಧಿಸಿದAತೆ ಕಳೆದ ವರ್ಷ ೪ ಡಕಾಯತಿ, ೪ ಸುಲಿಗೆ, ೫ ಸರ ಅಪಹರಣ, ೨೨ ಹಗಲು ಕಳ್ಳತನ, ೭೪ ರಾತ್ರಿ ಮನೆ ಕಳ್ಳತನ, ೧೬ ಮನೆ ಕಳುವು, ೧೯೪ ಸಾಮಾನ್ಯ ಕಳವು ಪ್ರಕರಣಗಳೂರು ದಾಖಲಾಗಿವೆ. ೨೦೨೩ಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ ಎಂದರು.

ಕಳವು ಪ್ರಕರಣಗಳು ಇಳಿಮುಖವಾಗಲು ಕಾರಣ ರಾತ್ರಿ ವೇಳೆಯಲ್ಲಿ ಓಡಾಡುವವರ ಮೇಲೆ ನಿಗಾ ಇಡಲಾಗಿರುವುದು. ಸ್ಥಳದಲ್ಲೇ ಅವರ ಕೈ ಬೆರಳಚ್ಚು ಪಡೆದು, ಈ ಹಿಂದೆ ಕಳವು ಆಗಿರುವ ಪ್ರಕರಣಗಳಲ್ಲಿ ಪಡೆದಿರುವ ಬೆರಳುಗಳ ಗುರುತು ಒಂದಕ್ಕೊAದು ಹೋಲಿಕೆಯಾದರೆ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ೨೦೨೩ರಲ್ಲಿ ೮,೩೦೦ ವ್ಯಕ್ತಿಗಳನ್ನು ಈ ಮಾದರಿಯಲ್ಲಿ ಪರಿಶೀಲನೆ ನಡೆಸಿದಾಗ ೧೦೭ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಈ ವರ್ಷದಲ್ಲಿ ೨೬,೬೮೪ ಮಂದಿಯನ್ನು ಪರಿಶೀಲಿಸಲಾಗಿದ್ದು ಈ ಪೈಕಿ ೪೨೬ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

೨೦೨೩ರಲ್ಲಿ ೬.೨೬ ಕೋಟಿ ರೂ. ಗಳ ಸ್ವತ್ತು ಕಳುವಾಗಿದ್ದು, ಈ ಪೈಕಿ ೨.೧೬ ಕೋಟಿ ರೂ.ಗಳ ಸ್ವತ್ತನ್ನು ವಶಕ್ಕೆ ಪಡೆದು, ಇವುಗಳಲ್ಲಿ ೧.೯೭ ಕೋಟಿ ರೂ.ಗಳ ಸ್ವತ್ತನ್ನು ಹಿಂದಿರುಗಿಸಲಾಗಿದೆ. ೨೦೨೪ರಲ್ಲಿ ೪.೧೮ ಕೋಟಿ ರು.ಗಳ ಸ್ವತ್ತುಗಳು ಕಳುವಾಗಿದ್ದು, ಈ ಪೈಕಿ ೨.೫೧ ಕೋಟಿ ರೂ. ಸ್ವತ್ತು ವಶಕ್ಕೆ ಪಡೆದು, ಸಂಬAಧಪಟ್ಟ ಮಾಲೀಕರಿಗೆ ೧.೫೪ ಕೋಟಿ ರು.ಗಳ ಸ್ವತ್ತನ್ನು ನೀಡಲಾಗಿದೆ ಎಂದು ಹೇಳಿದರು.

ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಸಂಬAಧಪಟ್ಟ ೨೯ ವಿವಿಧ ಪ್ರಕರಣಗಳಲ್ಲಿ ೨೯.೫೩ ಲಕ್ಷ ರೂ.ಗಳ ಸ್ವತ್ತನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ಸಂಬAಧಪಟ್ಟ ಪೊಲೀಸ್ ಠಾಣೆಗಳಿಗೆ ಹಸ್ತಾಂತರ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ, ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್ ಉಪಸ್ಥಿತರಿದ್ದರು.

ವರದಕ್ಷಿಣೆ ಕಿರುಕುಳ

ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ವರದಕ್ಷಿಣಿ ಸಾವು ಸಂಭವಿಸಿದ್ದು, ೯ ಅತ್ಯಾಚಾರ, ೬ ವರದಕ್ಷಿಣಿ ಕಿರುಕುಳ, ೭೭ ಪತಿ ಮತ್ತು ಸಂಬAಧಿಕರಿAದ ಕಿರುಕುಳ, ೧೫೨ ಪ್ರಕರಣಗಳು ಮಹಿಳೆಯ ಶೀಲಭಂಗ ಮಾಡುವ ಉz್ದೆÃಶದಿಂದ ಅಪರಾಧಿಕ ಬಲ ಪ್ರಯೋಗ ಮಾಡುವ ಕೇಸುಗಳು ದಾಖಲಾಗಿವೆ ಎಂದು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದರು.

ಜಿಲ್ಲೆಯಲ್ಲಿ ಮಹಿಳಾ ಮಕ್ಕು ಮಕ್ಕಲ ದೌರ್ಜನ್ಯಕ್ಕೆ ಸಂಬAಧಿಸಿದAತೆ ಒಂದು ಕೊಲೆ, ೬೯ ಅಪಹರಣ, ೧೨೧ ಪೋಕ್ಸೋ, ೨ ಬಾಲ್ಯ ವಿವಾಹ ತಡೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ನಕ್ಸಲರ ಶರಣಾಗತಿಗೆ ಕರೆ

ಜಿಲ್ಲೆಯಲ್ಲಿ ಕಳೆದ ವರ್ಷ ನಕ್ಸಲ್ ಚಟುವಟಿಕೆ ಕಂಡು ಬಂದಿತ್ತು. ಹೀಗಾಗಿ ನಕ್ಸಲರ ಶರಣಾಗತಿ ಪ್ಯಾಕೇಜ್ ಅನ್ನು ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ನಕ್ಸಲರು ಶರಣಾಗತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಮುಂದಾಗಬೇಕು. ಅವರಿಗೆ ಶರಣಾಗತಿ ಪ್ಯಾಕೇಜ್ ಅನ್ವಯ ಎಲ್ಲ ರೀತಿಯ ಅನುಕೂಲ ಒದಗಿಸಲಾಗುವುದು ಎಂದು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದರು.

ನಕ್ಸಲರನ್ನು ಎ,ಬಿ, ಸಿ ಎಂಬ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕ ಮೂಲದ ನಕ್ಸಲರನ್ನು ಎ ವಿಭಾಗ ಎಂದು ಪರಿಗಣಿಸಲಾಗಿದ್ದು, ಅವರು ಶರಣಾಗತರಾದಲ್ಲಿ ಅವರಿಗೆ ೭.೫೦ ಲಕ್ಷ ರೂ. ಪರಿಹಾರ ನೀಡಲಾಗುವುದು. ಬೇರೆ ರಾಜ್ಯದ ಮೂಲದ ನಕ್ಸಲರನ್ನು ಬಿ ಕೆಟಗರಿಗೆ ಸೇರಿಸಲಾಗಿದ್ದು, ಅವರು ಶರಣಾಗತರಾದರೆ ಅವರಿಗೆ ೪.೫೦ ಲಕ್ಷ ರೂ. ಪರಿಹಾರ ನೀಡಲಾಗುವುದು. ನಕ್ಸಲ್ ಸಿಂಪಥೈಸರ್‌ಗಳು ಶರಣಾದಲ್ಲಿ ಅವರಿಗೆ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net