ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಘಿ ಪ್ರಕರಣಗಳು

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಘಿ ಪ್ರಕರಣಗಳು
Published on

ಹಾಸನ: ಮಳೆಗಾಲ ಆರಂಭವಾದಾಗ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ. ರಾಜ್ಯದಲ್ಲಿ ಇದೀಗ ಡೆಂೆ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿಯೂ ಕೂಡ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುವಂತಹ ರೋಗದಿಂದ ಜಿಲ್ಲೆಯಲ್ಲಿ ಸಾವಿರಾರು ಜನ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಡೆಂೆ ರೋಗದಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು ಅವುಗಳ ಪರೀಕ್ಷೆ ನಡೆಸಿ ರಾಜ್ಯಮಟ್ಟಕ್ಕೆ ಕಳಿಸಿಕೊಡಲಾಗಿದೆ. ಅಂತಿಮ ವರದಿ ಇನ್ನು ಬಂದಿಲ್ಲ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸದ್ಯ 165 ಜನರಲ್ಲಿ ಡೆಂೆ ಪತ್ತೆಯಾಗಿದೆ. ಆದರೆ, ಖಾಸಗಿ ಕ್ಲಿನಿಕ್,ಆಸ್ಪತ್ರೆ ಚಿಕಿತ್ಸೆ ಪಡೆದು ಹೋಂ ಐಸೋಲೇಷನ್ ಆಗಿರುವವರ ಸಂಖ್ಯೆ ಸಾವಿರ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಚನ್ನರಾಯಪಟ್ಟಣ, ಅರಸೀಕೆರೆ ಮತ್ತು ಹೊಳೆನರಸೀಪುರದ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದರ ಜತೆಗೆ ಹವಾಮಾನ ಬದಲಾವಣೆಯಿಂದ ನಿತ್ಯವೂ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬುತ್ತಿವೆ.
ಡೆಂೆನಂತಹ ಸಾಂಕ್ರಾಮಿಕ ರೋಗಗಳು ಸದ್ದು ಮಾಡಲು ಪ್ರಾರಂಭಿಸಿದ್ದರಿಂದ ಲ್ಯಾಬ್‌ಗಳಲ್ಲಿ ರಕ್ತ ಮತ್ತಿತರ ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಚಳಿ, ಜ್ವರ ಎನ್ನುತ್ತಲೇ ಬರುವ ರೋಗಿಗಳಿಗೆ ಮೊದಲು ರಕ್ತ ಪರೀಕ್ಷೆ ಮಾಡಿಸಿ ಎಂದು ವೈದ್ಯರು ಸಲಹೆ ನೀಡುತ್ತಿರುವುದರಿಂದ ಪ್ರಯೋಗಾಲಯದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬರುತ್ತಿದ್ದಾರೆ. ಮೆಡಿಕಲ್ ಶಾಪ್‌ಗಳ ಎದುರು ಜನರು ಮಾತ್ರೆ, ಔಷಧ ಪಡೆಯಲು ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಜನರಲ್ಲಿ ಜಾಗೃತಿ:
ಈಡಿಸ್ ಸೊಳ್ಳೆಗಳು ಡೆಂೆಗೆ ಕಾರಣವಾಗುತ್ತಿದ್ದು, ಈ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆರೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ಹೇಗೆ ತಡೆಯಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಸೊಳ್ಳೆಯಿಂದ ಜಿಕಾ, ಚಿಕೂನ್ ಗುನ್ಯಾ ಮತ್ತು ಇತರೆ ವೈರಸ್‌ಗಳು ಸಹ ಹರಡುತ್ತಿವೆ. ಡೆಂೆ ಜತೆಗೆ ವೈರಲ್ ಫೀವರ್, ಟೈಫಾಯಿಡ್, ತೀವ್ರವಾದ ಅತಿಸಾರ ರೋಗ ಮತ್ತು ನ್ಯುಮೋನಿಯಾ ಪ್ರಕರಣಗಳಲ್ಲೂ ಕೂಡ ಏರಿಕೆ ಕಂಡುಬಂದಿದೆ.
ಡೆಂೆನಿಂದ ದೂರ ಉಳಿಯಲು ಮನೆಗಳ ಒಳಗೆ ಮತ್ತು ಸುತ್ತಮುತ್ತ ಸಂಗ್ರಹವಾಗಿರುವ ನೀರನ್ನು ಹೊರಹಾಕಬೇಕು. ಸೋಂಕನ್ನು ತಪ್ಪಿಸಲು ಸೊಳ್ಳೆ ನಿವಾರಕಗಳು, ಸೊಳ್ಳೆ ಪರದೆಗಳನ್ನು ಬಳಸಬೇಕು ಮತ್ತು ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸಬೇಕು. ಜ್ವರ, ಮೂಗು ಸೋರುವುದು, ತಲೆನೋವು ಅಥವಾ ದೇಹದ ನೋವು ಮುಂತಾದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದೆ.

ಪ್ಲೇಟ್ಲೆಟ್‌ಗೆ ಬಾರಿ ಬೇಡಿಕೆ:
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಗಳಲ್ಲಿ ಬೆಡ್‌ಗೂ ಕೂಡ ತೀವ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡೆಂೆ ಬಂದಿರುವ ರೋಗಿಗಳಿಗೆ ಪ್ಲೇಟ್ಲೆಟ್ ಕಡಿಮೆಯಾಗುತ್ತದೆ. ಆದ್ದರಿಂದ ಬ್ಲಡ್ ಬ್ಯಾಂಕ್‌ಗಳಿಗೆ ಈಗ ಪ್ಲೇಟ್ಲೆಟ್‌ಗೆ ಬೇಡಿಕೆ ಹೆಚ್ಚಾಗತೊಡಗಿದೆ. ಡೆಂೆ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ತಕ್ಷಣ ವೈದ್ಯರು ಪ್ಲೇಟ್ಲೆಟ್ ಬೇಕಾಗಬಹುದು. ಆದ್ದರಿಂದ ಅದನ್ನು ಸಿದ್ಧಪಡಿಸಿಕೊಳ್ಳಿ ಎಂದು ಸೂಚನೆ ನೀಡುತ್ತಾರೆ. ನಂತರ ರೋಗಿಯ ಸಂಬಂಧಿಕರು ಬ್ಲಡ್ ಬ್ಯಾಂಕ್‌ಗಳಲ್ಲಿ ಪ್ಲೇಟ್ಲೆಟ್‌ಗಳನ್ನ ಮುಂಗಡವಾಗಿಯೇ ಬುಕ್ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ 171 ಡೆಂಘಿ ಪ್ರಕರಣ
ಜಿಲ್ಲೆಯಲ್ಲಿ ಈಗಾಗಲೇ 4782 ಜನ ಸೋಂಕಿತರು ಇದ್ದಾರೆ ಎಂದು ಶಂಕಿಸಲಾಗಿದೆ. ಅವರಲ್ಲಿ 1,575 ಜನರನ್ನ ರಕ್ತದ ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ 171 ಜನರಿಗೆ ಡೆಂೆ ಇರುವುದಾಗಿ ತಿಳಿದು ಬಂದಿದೆ. ಇದರಲ್ಲಿ ಹಾಸನ ಮತ್ತು ಅರಸೀಕೆರೆಯಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಇನ್ನುಳಿದಂತೆ ಸಕಲೇಶಪುರದಲ್ಲಿ ಕಡಿಮೆ ಪ್ರಕರಣ ದಾಖಲಾಗಿದೆ. ಹಾಸನ 39, ಅರಸೀಕೆರೆ 37, ಅರಕಲಗೂಡು 24, ಚನ್ನರಾಯಪಟ್ಟಣ 24, ಬೇಲೂರು 17, ಆಲೂರು 15, ಹೊಳೆನರಸೀಪುರ 11, ಸಕಲೇಶಪುರ 4 ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದೆ.

ಆಸ್ಪತ್ರೆಯಲ್ಲಿ 438 ಜನ ದಾಖಲು
ಜಿಲ್ಲೆಯಲ್ಲಿ ಡೆಂೆ ರೋಗ ವ್ಯಾಪಕವಾಗಿ ಹರಡುತ್ತಿದ್ದು ಇದಕ್ಕೆ ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆದಾಗ್ಯೂ ಡೆಂೆ ರೋಗ ಬಂದಿರುವವರು ಮತ್ತು ಶಂಕಿತರು ಸೇರಿ ಒಟ್ಟು 438 ಜನರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡಿನಲ್ಲಿ 346 ಜನ ಐಸಿಯುನಲ್ಲಿ 26 ಜನ ಹಾಗೂ ಐಸಿಯು ವಿತ್ ವೆಂಟಿಲೇಟರ್‌ನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡಿನಲ್ಲಿ 63 ಜನ ಐಸಿಯುನಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

2020ರಲ್ಲಿ 78
2021ರಲ್ಲಿ 45
2022ರಲ್ಲಿ 224
2023ರಲ್ಲಿ265
2024ರಲ್ಲಿ 171

ರೋಗ ಲಕ್ಷಣಗಳು

  • ಇದ್ದಕ್ಕಿದ್ದಂತೆ ತೀವ್ರ ಜ್ವರ
  • ಮೈ-ಕೈ ನೋವು ಮತ್ತು ಕೀಲುನೋವು
  • ಕಣ್ಣಿನ ನೋವು
  • ವಾಕರಿಕೆ ಮತ್ತು ವಾಂತಿ
  • ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು
  • ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ

ಮುಂಜಾಗ್ರತಾ ಕ್ರಮ

  • ನೀರಿನ ತೊಟ್ಟಿ, ಡ್ರಮ್, ಬ್ಯಾರಲ್ ಮತ್ತು ಟ್ಯಾಂಕ್‌ಗಳನ್ನು ಕನಿಷ್ಠ ವಾರಕ್ಕೆ ಒಮ್ಮೆ ಸ್ವಚ್ಛಗೊಳಿಸಬೇಕು.
  • ಮಳೆ ನೀರು ಸಂಗ್ರಹವಾಗುವ ಟೈರ್, ತೆಂಗಿನ ಚಿಪ್ಪು ವಿಲೇವಾರಿ ಮಾಡಿ
  • ಏರ್‌ಕೂಲರ್, ಹೂವಿನ ಕುಂಡ ಇತ್ಯಾದಿಗಳಲ್ಲಿ ನೀರನ್ನು ಪ್ರತಿವಾರ ಖಾಲಿ ಮಾಡಿ, ಒಣಗಿಸಿ ಭರ್ತಿಮಾಡಿ.
  • ಹಗಲಲ್ಲಿ ನಿದ್ರೆ ಮಾಡುವವರು, ವಿಶ್ರಾಂತಿ ಪಡೆಯುವವರು ಸೊಳ್ಳೆ ಪರದೆ ಹಾಗು ಸೊಳ್ಳೆ ನಿರೋಧಕ ಬಳಸಿ.

ಸಾರ್ವಜನಿಕರಲ್ಲಿ ಡೆಂೆ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಮನೆ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಲು ಈಗಾಗಲೇ ಆಶಾ ಕಾರ್ಯಕರ್ತೆಯರು ಮತ್ತು ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚ್ಚಾಗುತ್ತಿದೆ.
-ಡಾ. ನಾಗಪ್ಪ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ.

ಡೆಂೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಸಹಕಾರದಿಂದ ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ರೋಗವನ್ನು ನಿಯಂತ್ರಿಸಲು ಎಲ್ಲಾ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ. ನಮ್ಮ ಇಲಾಖೆಯಿಂದ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಡಾ.ಶಿವಸ್ವಾಮಿ ಡಿಎಚ್‌ಒ ಹಾಸನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net