ಜಿಲ್ಲೆಯಲ್ಲಿ ‌ಹೀಟ್ ಸ್ಟ್ರೋಕ್ ಸಮಸ್ಯೆ

Published on

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ವಿಪರೀತಿ ಬಿಸಿಲಿನಿಂದ ಕಿಡ್ನಿ‌ ಸ್ಟೋನ್‌ ಹಾಗೂ ಹೀಟ್ ಸ್ಟ್ರೋಕ್ ಸಮಸ್ಯೆ ಗೆ ಹೆಚ್ಚು ಮಂದಿ ತುತ್ತಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ತಾಪಮಾನ ದಾಖಲಾಗಿದೆ. ಉರಿ ಬಿಸಲಿನಿಂದ ಜನರು ತಪ್ಪಿಸಕೊಳ್ಳಲು ಪರಾದಡುತ್ತಿದ್ದಾರೆ. ಹೀಟ್ ಸ್ಟ್ರೋಕ್ ಪ್ರಕರಣಗಳು ಕಾಣಸಿಕೊಂಡರೆ ತಕ್ಷಣವೇ ಸ್ಪಂದಿಸಲು ಆಸ್ಪತ್ರೆಗಳಲ್ಲಿ ತಯಾರಿ‌ ಮಾಡಿಕೊಳ್ಳಲಾಗಿದೆ. ಸುಸ್ತು, ತಲೆ ಸುತ್ತು ಬರುವುದು, ಕೆಲಸ ಮಾಡಲು ಆಗದಿರುವುದು, ಸ್ನಾಯು ಸೆಳೆತ ಸೇರಿದಂತೆ ಇತರೆ ಸಮಸ್ಯೆಗಳು ಹೀಟ್ ಸ್ಟ್ರೋಕ್ ದ ಲಕ್ಷಣಗಳಾಗಿವೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಐದು ಹಾಗೂ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಪ್ರತ್ಯೇಕ ‌ಹಾಸಿಗೆ ಕಾಯ್ದಿರಿಸಲಾಗಿದೆ. ಹೆಚ್ಚಿದ ಬಿಸಿಲಿನಿಂದ ಜನರ ಆರೋಗ್ಯವು ಹದಗಟ್ಟಿದೆ. ಸರ್ಕಾರಿ ‌ಆಸ್ಪತ್ರೆಗಳಲ್ಲಿ ರಕ್ತದೊತ್ತಡ ಸೇರಿದಂತೆ ‌ನಾನಾ ಕಾಯಿಲೆಗಳ ಮುಂದೆ ಜನರು‌ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದಲ್ಲದೇ ಟ್ರಾಮ್ ಕೇರ್ ಸೆಂಟರ್ ನಲ್ಲಿ ಕಳೆದ ಕೆಲ‌ ದಿನಗಳ ಹಿಂದೆಯೇ ಯುರಾಲಾಜಿ ಡಿಪಾರ್ಟ್ಮೆಂಟ್ ತೆಗೆಯಲಾಗಿದೆ. ಕಿಡ್ನಿ ಸ್ಟೋನ್ , ಮೂತ್ರ ಊರಿ‌ ಸೇರಿದಂತೆ ಹಲವು ಜನರು ಚಿಕಿತ್ಸೆ ‌ಪಡೆಯುತ್ತಿದ್ದಾರೆ. ಆದರೆ, ಇನ್ನೂ ಟ್ರಾಮ್ ‌ಕೇರ್ ಸೆಂಟರ್ ನಲ್ಲಿ ಯೂರಾಲಜಿ ವಿಭಾಗದ ಅಗತ್ಯವಾದ ಸೌಕರ್ಯಗಳ ‌ಇಲ್ಲದೆ ಕಾರಣ ಕಿಡ್ನಿ ಸ್ಟೋನ್ ಚಿಕಿತ್ಸೆಗೆ ಖಾಸಗಿ‌ ಆಸ್ಪತ್ರೆಗಳಿಗೆ‌ ಮೊರೆ ಹೋಗುತ್ತಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆಗೆ ಐವತ್ತ ರಿಂದ ಅರವತ್ತು ಸಾವಿರ ರೂ.‌ ನಿಗದಿ ಪಡಿಸಲಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಯೂರಲಾಜಿ ವಿಭಾಗಕ್ಕೆ ಅಗತ್ಯ ಸೌಲಭ್ಯ ಒದಗಿಸಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ವಿಪರೀತ ಬಿಸಲಿನಿಂದ ಹಲವರಲ್ಲಿ ರಕ್ತದೊತ್ತಡದ ಸಮಸ್ಯೆ‌ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಚುನಾವಣೆಗೆ‌ ನಿಯೋಜಿಸಿದ ಹಲವರಿಗೆ ಆರೋಗ್ಯ ಸಮಸ್ಯೆಯಾಗಿ ಆಸ್ವಸ್ತರಾಗಿದ್ದರು. ಕೂಡಲೇ ವೈದ್ಯಕೀಯ ಸಿಬ್ಬಂದಿ ‌ನೆರವುನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದರಂತೆ ‌ನಿತ್ಯ ನಾನಾ ಕಡೆ ಹಲವರು ಬಿಸಲಿನಿಂದ ತುತ್ತಾಗುತ್ತಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆಗಳು ನಡೆದಿವೆ. ಇತ್ತೀಚಗೆ ಬಿಸಲಿನಿಂದ ಪ್ರತಿಯೊಬ್ಬರೂ ಬೆವರನಿಂದ ನೀರಿನ ಅಂಶ ಕಡಿಮೆಯಾಗುತ್ತಿದೆ, ಆದ್ದರಿಂದ ನಿತ್ಯ ‌ಕುಡಿಯುವ ನೀರಿನಲ್ಲಿ ಒಆರ ಎಸ್ ನ್ನು‌ ಬಳಸಬೇಕು. ಇದರಿಂದ ‌ನೀರಿನಾಂಶ ಹೆಚ್ಚಾಗಿ ಕಿಡ್ನಿ ಸ್ಟೋನ್ ‌ಹಾಗೂ ಹೀಟ್ ಸ್ಟೋಕ್‌ ಕಾಣಿಸಿಕೊಳ್ಳುವುದಿಲ್ಲ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net