

ಚಿತ್ರದುರ್ಗ: ದ್ವಿತೀಯ ಪಿಯುಸಿ ಪರೀಕ್ಷೆ-2 ಏ. 29ರಿಂದ ಮೇ. 16ರವರೆಗೆ ನಡೆದಿದ್ದು, ಈ ಸಂಬಂಧ ಜಿಲ್ಲೆಗೆ ಶೇ. 27.07 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲಿ ಹಾಜರಾದ 1,852 ವಿದ್ಯಾರ್ಥಿಗಳ ಪೈಕಿ 385 ಮಂದಿ, ವಾಣಿಜ್ಯ ವಿಭಾಗದಲ್ಲಿ 1,012ರ ಪೈಕಿ 191, ವಿಜ್ಞಾನ ವಿಭಾಗದಲ್ಲಿ 1,735ರ ಪೈಕಿ 669 ಮಂದಿ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 3,590 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 1,095 ಮಂದಿ ತೇರ್ಗಡೆಯಾಗಿದ್ದಾರೆ. 829 ಪುನಾರಾವರ್ತಿತ ವಿದ್ಯಾರ್ಥಿಗಳ ಪೈಕಿ 118, 180 ಖಾಸಗಿ ಪೈಕಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 3,293 ವಿದ್ಯಾರ್ಥಿಗಳ ಪೈಕಿ 946, ಗ್ರಾಮೀಣ ಭಾಗದ 1,306 ವಿದ್ಯಾರ್ಥಿಗಳ ಪೈಕಿ 299 ಮಂದಿ ಪಾಸಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದ್ದಾರೆ.