ಜಿಲ್ಲೆಯಲ್ಲಿ ರಕ್ಷಾಬಂಧನದ ಸಡಗರ

11 ckm 2 web
Published on

ಚಿಕ್ಕಮಗಳೂರು: ಜಿಲ್ಲಾದ್ಯಂತ ರಕ್ಷಾಬಂಧನದ ಸಡಗರದಲ್ಲಿದ್ದ ಸಹೋದರಿಯರು ಸಹೋದರರಿಗೆ ತಿಲಕವಿಟ್ಟು, ರಾಖಿ ಕಟ್ಟಿ ಸಂಭ್ರಮಿಸಿದರು. ಸಿಹಿಹಂಚಿ ಉಡುಗೊರೆ ಪಡೆದರು. ಸಾರ್ವಜನಿಕ ಸ್ಥಳಗಳು, ವಿವಿಧ ಕಚೇರಿಗಳಿಗೆ ತೆರಳಿದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಜನಪ್ರತಿನಿಧಿಗಳು, ನಾಗರಿಕರು, ಅಧಿಕಾರಿ ಸಿಬ್ಬಂದಿಗೆ ರಾಖಿ ಕಟ್ಟಿದರು. </p><p>ಆರ್​ಎಸ್​ಎಸ್ ಕಾರ್ಯಕರ್ತರು ನಗರದ ವಿವಿಧೆಡೆ ಪರಸ್ಪರ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದರು.

ಎಬಿವಿಪಿ ಕಾರ್ಯಕರ್ತರು ಜಿಲ್ಲಾದ್ಯಂತ ರಕ್ಷಾಬಂಧನ ಆಚರಿಸಿದರು. ಶಾಲಾ, ಕಾಲೇಜು, ವಿವಿಧ ಕಚೇರಿ, ಸಾರ್ವಜನಿಕ ಸ್ಥಳಗಳಿಗೆ ತೆರಳಿ ಸಹೋದರ ಸಮಾನರಿಗೆ ಹಾಗೂ ನಗರಸಭೆ ಆವರಣದಲ್ಲಿ ಹೋಮ್ಾರ್ಡ್, ಪೊಲೀಸ್ ಸಿಬ್ಬಂದಿ, ಪೌರಕಾರ್ವಿುಕರಿಗೆ ರಾಖಿ ಕಟ್ಟಿದರು. ದೀವಿತ್, ಲೆಖನ್, ಚೈತ್ರಾ ಇದ್ದರು.

ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಸದಸ್ಯರು ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ತಹಸೀಲ್ದಾರ್ ವಿನಾಯಕ್ ಸಾಗರ್ ಮತ್ತಿತರರಿಗೆ ರಾಖಿ ಕಟ್ಟಿ ಸಿಹಿ ಹಂಚಿದರು. ಸದಸ್ಯರಾದ ಕಿಶೋರ್, ಜ್ಞಾನಮೂರ್ತಿ, ಸತೀಶ್, ಮಹಾಲಕ್ಷ್ಮೀ, ಪ್ರಿಯಾ, ದೇವಿಕಾ ಇದ್ದರು.</p><p>ನಗರದ ಎಂ.ಜಿ ರಸ್ತೆ ಸೇರಿದಂತೆ ವಿವಿಧೆಡೆ ಅಂಗಡಿಗಳಲ್ಲಿ 5 ರೂ.ನಿಂದ ಸಾವಿರಾರು ರೂ. ಮೌಲ್ಯದ ತರಾವರಿ ರಾಖಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು, ಯುವತಿಯರು ಬೆಳಗಿನಿಂದಲೇ ಖರೀದಿಗೆ ಮುಗಿಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net