ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ

ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ
Published on

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದೆ. ಬೇಲೂರು ತಾಲ್ಲೂಕಿನ ಮಂಗಳವಾರ ರಾತ್ರಿ ಹಾಗೂ ಬುಧವಾರ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಆನೆಗಳು ರೈತರ ಜಮೀನಿಗೆ ನುದ್ದಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಬೇಲೂರು ತಾಲ್ಲೂಕಿನ, ಅಂಕಿಹಳ್ಳಿಪೇಟೆ ಗ್ರಾಮದ ಬಳಿ ಕಾಫಿ ತೋಟವೊಂದರಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳಿರುವ ಗುಂಪು ಕಾಫಿಯ ಜತೆಗೆ ಇತರೆ ಬೆಳೆಗಳನ್ನೆಲ್ಲಾ ತುಳಿದು ಹಾಳು ಮಾಡಿದೆ. ಗಜಪಡೆ ಗುಂಪುನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಗ್ರಾಮಸ್ಥರಿಗೆ ಕಾಡಾನೆಗಳ ಚಲನವಲಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಒಂಟಿ ಸಲಗದ ಹಾವಳಿ

ಒಂಟಿ ಸಲಗವೊಂದು ಮನೆಯ ಸಮೀಪವೇ ಬಂದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ, ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡರ ಮನೆಯ ಸಮೀಪ ಬಂದಿರುವ ಒಂಟಿಸಲಗ ಮನೆಯ ಹಿಂಬದಿಯ ತೋಟದಲ್ಲಿ ಬೆಳೆದಿದ್ದ ಅಡಿಕೆ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಅಷ್ಟೇ ಅಲ್ಲದೆ ಮನೆಯ ಹಿಂದಿನ ಕೋಣೆಯಲ್ಲಿಟ್ಟಿದ್ದ ಬಾಳೆಗೊನೆಗಳನ್ನು ಹೊರ ಎಳೆದು ತಿಂದು ಹಾಕಿದೆ. ಕಾಡಾನೆ ಕಂಡ ಕೃಷ್ಣೇಗೌಡ ಕುಟುಂಬಸ್ಥರು ಕೆಲ ಕಾಲ ಆತಂಕಗೊಂಡಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕೃಷ್ಣೇಗೌಡ ಮನೆಯ ಆವರಣದಲ್ಲಿದ್ದ ಒಂಟಿ ಸಲಗದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಒಂಟಿ ಸಲಗವನ್ನು ಕಾಡಿಗೆ ಓಡಿಸಬೇಕೆಂದು ಕೃಷ್ಣೇಗೌಡ ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net