ಜಿಲ್ಲೆಯಲ್ಲಿ ಮುಂದುವರಿದ ಕರೊನಾ ಓಟ

Seal Down...
Published on

ಗದಗ: ಜಿಲ್ಲೆಯಲ್ಲಿ ಶನಿವಾರ 99 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟದಟು ಸೋಂಕಿತರ ಸಂಖ್ಯೆ 1480ಕ್ಕೆ ಏರಿದ್ದು, ಶನಿವಾರ 43 ಜನರು ಸೇರಿ ಇಲ್ಲಿಯವರೆಗೆ 534 ಜನರು ಗುಣವಾಗಿದ್ದಾರೆ.

ಕರೊನಾ ಸೋಂಕಿನಿಂದ ಶನಿವಾರ ಮತ್ತೆ ಇಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 34ಕ್ಕೇರಿದೆ.

ಪಾಸಿಟಿವ್ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಅಂಜುಮನ್ ಕಾಲೇಜ್ ಹತ್ತಿರ, ವಿವೇಕಾನಂದ ನಗರ, ಜನತಾ ಕಾಲನಿ, ಜಿಮ್ಸ್, ಕಳಸಾಪುರ ರಸ್ತೆ, ಟ್ಯಾಗೋರ್ ರೋಡ್, ಕೇಶವ ನಗರ, ಖಾನತೋಟ, ಯಲಿಗಾರ ಪ್ಲಾಟ್, ಸೇವಾಲಾಲ ನಗರ ಹತ್ತಿರ, ಗಂಗಿಮಡಿ, ಕರಿಸಿದ್ಧಮಠ ಓಣಿ, ಶಿವಾನಂದ ನಗರ, ಗಾಂಧಿ ವೃತ್ತದ ಹತ್ತಿರ, ರಾಜೀವಗಾಂಧಿ ನಗರ, ಹೆಲ್ತ್ ಕ್ಯಾಂಪ್, ಕಿಲ್ಲಾ ಓಣಿ, ಶಾಂತಿ ಟಾಕೀಸ್ ಹಿಂಭಾಗ, ಹುಡ್ಕೋ ಕಾಲನಿ ಮೊದಲನೇ ತಿರುವು, ಸುರಪುರ ಆಸ್ಪತ್ರೆ ಹತ್ತಿರ.

ಗದಗ ತಾಲೂಕಿನ ಲಕ್ಕುಂಡಿ, ಬಿಂಕದಕಟ್ಟಿ, ಹುಲಕೋಟಿ, ಅಂತೂರ-ಬೆಂತೂರ, ಮಲ್ಲಸಮುದ್ರ, ಹುಲಕೋಟಿ, ಕುರ್ತಕೋಟಿ,

ಶಿರಹಟ್ಟಿ ಪಟ್ಟಣದ ದ್ಯಾಮವ್ವ ದೇವಸ್ಥಾನದ ಹತ್ತಿರ, ಹಳ್ಳದಕೇರಿ ನಗರ, ಒಂದನೇ ಬಸ್ ನಿಲ್ದಾಣ ಹತ್ತಿರ, ಶಿರಹಟ್ಟಿ ತಾಲೂಕಿನ ಯಳವತ್ತಿ, ಶಿಗ್ಲಿ, ಬಾಳೆಹೊಸೂರ, ಬೆಳ್ಳಟ್ಟಿ, ರಾಮಗೇರಿ, ಮಾಗಡಿ, ಸುವರ್ಣಗಿರಿ ತಾಂಡಾ, ಗೊಜನೂರ.

ಲಕ್ಷ್ಮೇಶ್ವರದ ಬಸಾಪುರ ಓಣಿ, ಗಜೇಂದ್ರಗಡದ ಬಸವೇಶ್ವರ ನಗರ, ಮುಂಡರಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ, ಹೇಮರೆಡ್ಡಿ ಮಲ್ಲಮ್ಮ ನಗರ, ಟಿ.ಎಲ್.ಎಚ್. ಸ್ಟಾಫ್ ಕ್ವಾರ್ಟರ್ಸ್, ಭಜಂತ್ರಿ ಓಣಿ, ಅನ್ನದಾನೇಶ್ವರ ನಗರ, ಕಡಲಿಪೇಟೆ, ಅಂಬಾಭವಾನಿ ನಗರ, ಸಿದ್ದಲಿಂಗನಗರ, ಮುಂಡರಗಿ ತಾಲೂಕಿನ ಡಂಬಳ, ಬಾಗೇವಾಡಿ, ಕಕ್ಕೂರ ತಾಂಡಾ, ರಾಮೇನಹಳ್ಳಿ, ಹೆಸರೂರ, ಬರದೂರ, ಹಮ್ಮಿಗಿ, ಹಿರೇವಡ್ಡಟ್ಟಿ. ನರಗುಂದ ತಾಲೂಕಿನ ಕೊಣ್ಣೂರ, ಹುಣಶಿಕಟ್ಟಿ, ರೋಣ ತಾಲೂಕಿನ ನಾಗರಸಕೊಪ್ಪ, ನಿಡಗುಂದಿ.

ನವಲಗುಂದ ತಾಲೂಕಿನ ನಾಗರಹಳ್ಳಿ ಗ್ರಾಮದವರಲ್ಲಿ ಸೋಂಕು ಪತ್ತೆಯಾಗಿದೆ.

ಮೃತರ ವಿವರ: ಬೆಟಗೇರಿ ನಿವಾಸಿ 62 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಜಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 25ರಂದು ಕೋವಿಡ್- 19 ದೃಢಪಟ್ಟಿತ್ತು. ತೀವ್ರ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾದಿಂದಾಗಿ ಜುಲೈ 30ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕುರ್ತಕೋಟಿ ನಿವಾಸಿ 70 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 27ರಂದು ಅವರಿಗೆ ಕೋವಿಡ್- 19 ದೃಢಪಟ್ಟಿತ್ತು. ನ್ಯುಮೋನಿಯಾ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಜುಲೈ 27ರಂದೇ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.

ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್- 19 ಮಾರ್ಗಸೂಚಿ ಅನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net