

ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಹಾವಳಿ ವ್ಯಾಪಕವಾಗಿದ್ದು, ಶನಿವಾರ ಬರೋಬ್ಬರಿ 82 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆಯಾದಂತಾಗಿದೆ.
ಮುಂಡರಗಿ ಕೆ.ಇ.ಬಿ. ಕಚೇರಿ ಹತ್ತಿರ ನಿವಾಸಿ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲದ ಪತ್ತೆ ಕಾರ್ಯ ನಡೆದಿದೆ. ಗದಗ ಶಿವಾನಂದ ನಗರ ನಿವಾಸಿ 42 ವರ್ಷದ ಪುರುಷನಿಗೆ (ಪಿ-44849) ಸಂಪರ್ಕದಿಂದಾಗಿ, ಗದಗ ನಗರದ ವಕ್ಕಲಗೇರಿ ಓಣಿಯ ಎಲೆಗಾರ ಪ್ಲಾಟ್ ನಿವಾಸಿ 70 ವರ್ಷದ ಮಹಿಳೆಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಮುಳಗುಂದ ನಿವಾಸಿ 25 ವರ್ಷದ ಮಹಿಳೆಗೆ (ಪಿ-28944) ಸಂಪರ್ಕದಿಂದಾಗಿ, ಅಡವಿಸೋಮಾಪುರ ಬೀರದೇವರ ದೇವಸ್ಥಾನದ ಹತ್ತಿರ ನಿವಾಸಿ 53 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ಮುಳಗುಂದ ನಿವಾಸಿ 52 ವರ್ಷದ ಪುರುಷನಿಗೆ (ಪಿ-44198) ಸಂಪರ್ಕದಿಂದಾಗಿ, ಗಜೇಂದ್ರಗಡದ ಹಿರೇಮಠ ಪ್ಲಾಟ್ ನಿವಾಸಿ 34 ವರ್ಷದ ಪುರುಷ, 27 ವರ್ಷದ ಮಹಿಳೆಗೆ (ಪಿ-35054) ಸಂಪರ್ಕದಿಂದಾಗಿ, ಶಿರೋಳ ಗ್ರಾಮದ ನಿವಾಸಿ 24 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ನರಗುಂದದ ಹೊರಕೇರಿ ಓಣಿ ನಿವಾಸಿ 28 ವರ್ಷದ ಮಹಿಳೆ ಹಾಗೂ 50 ವರ್ಷದ ಮಹಿಳೆಗೆ (ಪಿ-36666) ಸಂಪರ್ಕದಿಂದಾಗಿ, ನಗರದ ಟ್ಯಾಗೋರ ರಸ್ತೆಯ ನಿವಾಸಿ 73 ವರ್ಷದ ಪುರುಷನಿಗೆ ಉಸಿರಾಟದ ತೊಂದರೆಯಿಂದ, ಬಡ್ನಿ ಗ್ರಾಮದ ನಿವಾಸಿ 36 ವರ್ಷದ ಮಹಿಳೆಗೆ ಕೆಮ್ಮು, ಜ್ವರದ ಲಕ್ಷಣದಿಂದಾಗಿ, ಕಣಗಿನಹಾಳ ಗ್ರಾಮದ ನಿವಾಸಿ 44 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದಾಗಿ, ಮುಳಗುಂದ ನಿವಾಸಿ 41 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದಾಗಿ, ಕಣಗಿನಹಾಳ ನಿವಾಸಿ 28 ವರ್ಷದ ಪುರುಷ, 55 ವರ್ಷದ ಪುರುಷ, 55 ವರ್ಷದ ಪುರುಷ, 45 ವರ್ಷದ ಮಹಿಳೆ, 60 ವರ್ಷದ ಪುರುಷನಿಗೆ (ಪಿ-31109) ಸಂಪರ್ಕದಿಂದಾಗಿ, ಕಣಗಿನಹಾಳ ನಿವಾಸಿಗಳಾದ 72 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ. ಕಣಗಿನಹಾಳದ ನಿವಾಸಿಗಳಾದ 68 ವರ್ಷದ ಮಹಿಳೆ, 68 ವರ್ಷದ ಪುರುಷನಿಗೆ (ಪಿ-31109) ಸಂರ್ಪತರಿಂದ, 65 ವರ್ಷದ ಪುರುಷ, 60 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ಕಣಗಿನಹಾಳ ಗ್ರಾಮದ ನಿವಾಸಿ 54 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, 41 ವರ್ಷದ ಪುರುಷ, 28 ವರ್ಷದ ಪುರುಷ, 30 ವರ್ಷದ ಪುರುಷ, 50 ವರ್ಷದ ಪುರುಷನಿಗೆ (ಪಿ-31109) ಸಂರ್ಪತರಿಂದ, ಗುಡ್ಡದ ಬೂದಿಹಾಳ ನಿವಾಸಿ 33 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ಲಕ್ಷ್ಮೇಶ್ವರ ನಿವಾಸಿ 38 ವರ್ಷದ ಪುರುಷನಿಗೆ (ಪಿ-36463) ಸಂಪರ್ಕದಿಂದಾಗಿ, ಮಾಗಡಿ ನಿವಾಸಿ 36 ವರ್ಷದ ಪುರುಷನಿಗೆ (ಪಿ-31130) ಸಂರ್ಪದಿಂದಾಗಿ, ಮುಂಡರಗಿ ಭಜಂತ್ರಿ ಓಣಿ ನಿವಾಸಿ 20 ವರ್ಷದ ಪುರುಷ, ಮುಂಡರಗಿ ಬಸವೇಶ್ವರ ನಗರ ನಿವಾಸಿ 20 ವರ್ಷದ ಪುರುಷ, ಮುಂಡರಗಿ ಹಳೇ ಮಠದ ಓಣಿ ನಿವಾಸಿ 30 ವರ್ಷದ ಪುರುಷ, ಚಿಕ್ಕವಡ್ಡಟ್ಟಿ ನಿವಾಸಿ 34 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ಶಿರಹಟ್ಟಿ ವಿದ್ಯಾನಗರ ನಿವಾಸಿ 65 ವರ್ಷದ ಪುರುಷ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಗೋಗೇರಿ ನಿವಾಸಿ 32 ವರ್ಷದ ಮಹಿಳೆ, ಗೋಗೇರಿ ನಿವಾಸಿ 44 ವರ್ಷದ ಪುರುಷ, ಕರಿಯಮ್ಮನ ದೇವಸ್ಥಾನದ ಹತ್ತಿರದ ನಿವಾಸಿ 40 ವರ್ಷದ ಪುರುಷ, ನಿಡಗುಂದಿ ನಿವಾಸಿ 37 ವರ್ಷದ ಪುರುಷ, ಹುಲ್ಲೂರ ನಿವಾಸಿಗಳಾದ 15 ವರ್ಷದ ಪುರುಷ, 30 ವರ್ಷದ ಮಹಿಳೆ, 42 ವರ್ಷದ ಪುರುಷ, ರೋಣ ನಿವಾಸಿ 9 ಬಾಲಕಿಗೆ ಪ್ರಯಾಣದ ಹಿನ್ನಲೆಯಲ್ಲಿ, ಹಿರೇಮಣ್ಣೂರ ನಿವಾಸಿ 39 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಕುರಹಟ್ಟಿ ನಿವಾಸಿ 41 ವರ್ಷದ ಪುರುಷ, ಸಂದಿಗವಾಡ ನಿವಾಸಿ 23 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನಲೆಯಲ್ಲಿ, ಕಬಲಾಯತಕಟ್ಟಿ ನಿವಾಸಿ 50 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದಾಗಿ, ನಗರದ ವೀರೇಶ್ವರ ಗ್ರಂಥಾಲಯದ ಹತ್ತಿರ ನಿವಾಸಿ 44 ವರ್ಷದ ಪುರುಷ, 38 ವರ್ಷದ ಮಹಿಳೆಗೆ ಪ್ರಯಾಣದ ಹಿನ್ನೆಲೆಯಲ್ಲಿ, ಶ್ಯಾಗೋಟಿ ನಿವಾಸಿ 32 ವರ್ಷದ ಮಹಿಳೆಗೆ (ಪಿ-38894) ಸಂಪರ್ಕದಿಂದಾಗಿ, ಬಾಗೇವಾಡಿ ನಿವಾಸಿ 40 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ನಾಗರಳ್ಳಿ ನಿವಾಸಿ 23 ವರ್ಷದ ಮಹಿಳೆಗೆ (ಪಿ-38894) ಸೋಂಕಿತರ ಸಂಪರ್ಕದಿಂದ, ಸವಡಿ ನಿವಾಸಿ 22 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ, ನಗರದ ದಾಸರ ಓಣಿ ನಿವಾಸಿಗಳಾದ 5 ವರ್ಷದ ಮಹಿಳೆ, 24 ವರ್ಷದ ಪುರುಷನಿಗೆ (ಪಿ-41732) ಸೋಂಕಿತರ ಸಂಪರ್ಕದಿಂದಾಗಿ, ತೋಟಗಂಟಿ ನಿವಾಸಿ 25 ವರ್ಷದ ಪುರುಷ ಪ್ರಯಾಣದ ಹಿನ್ನೆಲೆ, ನಗರದ ದಾಸರ ಓಣಿ ನಿವಾಸಿ 30 ವರ್ಷದ ಪುರುಷನಿಗೆ (ಪಿ-41732) ಸೋಂಕಿತರ ಸಂಪರ್ಕದಿಂದ, ಮುಂಡರಗಿ ನಿವಾಸಿ 42 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ, ಬೆಟಗೇರಿ ಹೆಲ್ತ್ ಕ್ಯಾಂಪ್ ನಿವಾಸಿ 33 ವರ್ಷದ ಪುರುಷನಿಗೆ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ನಗರದ ದಾಸರ ಓಣಿ ನಿವಾಸಿ 65 ವರ್ಷದ ಪುರುಷನಿಗೆ (ಪಿ-41732)ರ ಸಂಪರ್ಕದಿಂದಾಗಿ, ಬೆಳ್ಳಟ್ಟಿ ನಿವಾಸಿ 36 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ, ರಣತೂರ ನಿವಾಸಿ 50 ವರ್ಷದ ಮಹಿಳೆಗೆ (ಪಿ-47603) ಸಂಪರ್ಕದಿಂದಾಗಿ, ಕಡಕೋಳ ನಿವಾಸಿ 35 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ, ಗಜೇಂದ್ರಗಡ ನಿವಾಸಿ 37 ವರ್ಷದ ಪುರುಷ, ಹೆಬ್ಬಾಳ ನಿವಾಸಿ 45 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಸವಡಿ ನಿವಾಸಿ 22 ವರ್ಷದ ಮಹಿಳೆಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ನರಗುಂದ ನಿವಾಸಿ 72 ವರ್ಷದ ಮಹಿಳೆಗೆ (ಪಿ-44163) ಸಂಪರ್ಕದಿಂದ, ಹೆಸರೂರ ನಿವಾಸಿ 35 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.
ನಗರದ ಶಾನಬಾಗ ಹೋಟೆಲ್ ಬಳಿ ನಿವಾಸಿ 34 ವರ್ಷದ ಪುರುಷನಿಗೆ (ಪಿ-51582) ಸಂಪರ್ಕದಿಂದಾಗಿ, ನಗರದ ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ 40 ವರ್ಷದ ಮಹಿಳೆಗೆ (ಪಿ-35048) ಸಂಪರ್ಕದಿಂದಾಗಿ, ನಗರದ ದಾಸರ ಓಣಿ ನಿವಾಸಿ 31 ವರ್ಷದ ಪುರುಷನಿಗೆ (ಪಿ-41732) ಸಂಪರ್ಕದಿಂದಾಗಿ, ಸವಡಿ ನಿವಾಸಿ 25 ವರ್ಷದ ಮಹಿಳೆಗೆ ಪ್ರಯಾಣದ ಹಿನ್ನೆಲೆಯಲ್ಲಿ, ಸವಡಿ ನಿವಾಸಿ 22 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ, ನಗರದ ದಾಸರ ಓಣಿ ನಿವಾಸಿ 5 ವರ್ಷದ ಪುರುಷನಿಗೆ (ಪಿ-41732) ಸಂಪರ್ಕದಿಂದ, ಸವಡಿ ನಿವಾಸಿ 24 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ದಾಸರ ಓಣಿ ನಿವಾಸಿ 23 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದ, ಕಡಕೋಳ ಗ್ರಾಮದ ನಿವಾಸಿಗಳಾದ 51 ವರ್ಷದ ಪುರುಷ ಹಾಗೂ 35 ವರ್ಷದ ಪುರುಷನಿಗೆ ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿದರೆ ಜೋಕೆ!
ಗದಗ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿತ್ಯ ಅರ್ಧ ದಿನದ ನಿಷೇಧಾಜ್ಞೆ ಆದೇಶದ ಹಿನ್ನೆಲೆಯಲ್ಲಿ ಶನಿವಾರ ಗದಗ ಬೆಟಗೇರಿ ಸೇರಿ ಜಿಲ್ಲೆ ಸ್ತಬ್ಧಗೊಂಡಿತ್ತು.
ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಥಾಪ್ರಕಾರ ವ್ಯಾಪಾರ-ವಹಿವಾಟು ನಡೆಯಿತು. ಮಧ್ಯಾಹ್ನ 2 ರ ನಂತರ ನಿಷೇಧಾಜ್ಞೆ ಆದೇಶವನ್ನು ಜಾರಿಗೊಳಿಸಲಾಯಿತು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲಾರಂಭಿಸಿದರು. 2 ಗಂಟೆಯೊಳಗೆ ಅಂಗಡಿ ಮುಂಗಟ್ಟು ಬಂದ್ ಮಾಡಬೇಕು ಎಂಬ ಸೂಚನೆಗೆ ಜನರು ಸ್ಪಂದಿಸಿದರು.
ಅವಳಿ ನಗರದಲ್ಲಿ ಅನೇಕ ವ್ಯಾಪಾರಸ್ಥರು 1 ಗಂಟೆಯಿಂದಲೇ ತಮ್ಮ ಅಂಗಡಿಗಳನ್ನು ಮುಚ್ಚಲಾರಂಭಿಸಿದರು. 2 ಗಂಟೆಗೆ ಸಂಪೂರ್ಣ ಸ್ತಬ್ಧಗೊಂಡಿತು. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಎಚ್ಚರಿಕೆ ನೀಡಿದ್ದರಿಂದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಯಿತು. ಅಲ್ಲದೆ, ಬೈಕ್ ಸೇರಿ ಇತರೆ ವಾಹನಗಳಲ್ಲಿ ಸಂಚರಿಸುವವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿರುವುದು ಕಂಡುಬಂದಿತು. ಅಗತ್ಯ ಸೇವೆಗಳಾದ ಹಾಲು, ಔಷಧ ಅಂಗಡಿಗಳು ತೆರೆದಿದ್ದವು.
ವಾಹನ ಸವಾರರಿಗೆ ಪೊಲೀಸರಿಂದ ತಿಳಿವಳಿಕೆ
ಮುಂಡರಗಿ: ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದ ನಂತರ ಪಟ್ಟಣದ ಬಹುತೇಕ ವ್ಯಾಪಾರ ವಹಿವಾಟು ಬಂದ್ ಆಗಿದ್ದವು. ಆದರೆ, ಕೆಲವೆಡೆ ಸಾರ್ವಜನಿಕ ನಗತ್ಯವಾಗಿ ಸಂಚರಿಸುತ್ತಿದ್ದಾಗ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.
ನಿಷೇಧಾಜ್ಞೆಯಿಂದಾಗಿ ಮುಖ್ಯ ಬಜಾರ್ನಲ್ಲಿ ಅಂಗಡಿ ಬಂದ್ ಆಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ನಿಷೇದಾಜ್ಞೆ ಜಾರಿಗೊಳಿಸಿದ ಮೊದಲನೇ ದಿನವಾಗಿದ್ದರಿಂದ ಬಹುತೇಕ ಕಡೆಗಳಲ್ಲಿ ಸಂಜೆ 4ಗಂಟೆವರೆಗೆ ಕೆಲವೊಂದು ಅಂಗಡಿಗಳು ತೆರೆದಿದ್ದು ಕಂಡುಬಂತು. ಬಸ್ ಸಂಚಾರ, ಹಾಲು, ಔಷಧ, ಆಸ್ಪತ್ರೆಗಳು, ರಸಗೊಬ್ಬರ ಅಂಗಡಿಗಳು ಅಗತ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.