

ಚಾಮರಾಜನಗರ: ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ 41 ಲಕ್ಷ ರೂ., ನಕಲಿ ಲೋನ್ ಆ್ಯಪ್‌ನಲ್ಲಿ ವ್ಯವಹರಿಸಿ 2 ಲಕ್ಷ ರೂ., ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ 49 ಲಕ್ಷ ರೂ., ಡಿಜಿಟಲ್ ಅರೆಸ್ಟ್ ಎಂಬ ಮೋಸದ ಜಾಲದಲ್ಲಿ ಸಿಲುಕಿ 27 ಲಕ್ಷ ರೂ., ಆನ್ಲೈನ್ ಶಾಪಿಂಗ್ ಕಂಪನಿ ಹೆಸರಿನಲ್ಲಿ 3 ಲಕ್ಷ ರೂ. ವಂಚನೆಯಾಗಿದೆ.
ಈ ಸೈಬರ್ ಅಪರಾಧ ಪ್ರಕರಣಗಳೆಲ್ಲವೂ ನಡೆದಿರುವುದು ಗಡಿಜಿಲ್ಲೆ ಚಾಮರಾಜನಗದಲ್ಲಿ..! ಜಿಲ್ಲಾ ಪೊಲೀಸ್ ಇಲಾಖೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ನೀಡಿರುವ ಮಾಹಿತಿಯಲ್ಲಿ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ತಾಲೂಕುಗಳಲ್ಲಿ ಕೆಲವರು ಯಾವ್ಯಾವ ರೀತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.
ಪಾರ್ಟ್ ಟೈಂ ಕೆಲ್ಸ ಬೇಕಾ?: ಮನೆಯಲ್ಲೇ ಕುಳಿತು ಕೆಲಸ ಮಾಡಿ..ನಿಮಗೆ ಪಾರ್ಟ್ ಟೈಮ್ ಕೆಲಸ ಬೇಕಾ..ಎಂಬ ಜಾಹೀರಾತು ಇತ್ತೀಚೆಗೆ ವಂಚನೆಯ ಮುಖವಾಡ ಧರಿಸಿದೆ. ವಿದ್ಯಾವಂತ ನಿರುದ್ಯೋಗಿಗಳನ್ನು ನಂಬಿಸಿ ಟೆಲಿಗ್ರಾಂ, ವಾಟ್ಸಾಪ್, ಇನ್‌ಸ್ಟಾಗ್ರಾಂ, ೇಸ್‌ಬುಕ್ ಮೂಲಕ ಲಿಂಕ್ ಕಳುಹಿಸಿ ವಂಚನೆ ಮಾಡಲಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಕೆ.ಎಂ.ಪರಶಿವಮೂರ್ತಿ 23,23,639 ರೂ. ತೃಪ್ತಿ ಎಂಬುವವರು 4,87,000 ರೂ., ಚಾಮರಾಜನಗರ ತಾಲೂಕಿನ ಗಣೇಶ್‌ಪ್ರಸಾದ್ 12,91,868 ರೂ., ಕಳೆದುಕೊಂಡಿದ್ದಾರೆ.
ಲೋನ್ ಆ್ಯಪ್‌ಗಳೇ ಶೂಲ: ನಕಲಿ ಲೋನ್ ಆ್ಯಪ್‌ಗಳು ಸಾಲದ ಶೂಲಕ್ಕೆ ಸಿಲುಕಿಸುವುದರಲ್ಲಿ ಎತ್ತಿದ ಕೈ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಲೋನ್ ಆ್ಯಪ್‌ಗಳಲ್ಲಿ ತಕ್ಷಣ ಸಾಲ ಸಿಗುತ್ತದೆ. ಹಾಗೆಂದು ಈ ಆ್ಯಪ್‌ಗಳಿಂದ ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು. ಅಧಿಕ ಬಡ್ಡಿ ವಿಧಿಸುವುದು, ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆ, ಪೋಟೋಗಳನ್ನು ತೆಗೆದುಕೊಂಡು ಅವರಿಗೆ ಕರೆ ಮಾಡಿ ಸಾಲ ಮಾಡಿರುವ ಬಗ್ಗೆ ತಿಳಿಸಿ ಕಾಟ ಕೊಡುವುದು ಇತ್ಯಾದಿ ರೀತಿಗಳಲ್ಲಿ ಕಿರುಕುಳಗಳು ನಡೆಯುತ್ತವೆ. ಗುಂಡ್ಲುಪೇಟೆಯಲ್ಲಿ ಭವಾನಿ ಎಂಬುವವರು 2,18,000 ರೂ.ಗಳನ್ನು ಮೋಸದ ಲೋನ್ ಆ್ಯಪ್‌ನಿಂದ ಕಳೆದುಕೊಂಡಿರುವ ಉದಾಹರಣೆ ಇದೆ.
ದಿಢೀರ್ ಶ್ರೀಮಂತರಾಗಬೇಕೇ?: ನಕಲಿ ಷೇರು ಮಾರುಕಟ್ಟೆ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಜನರಲ್ಲಿ ದಿಢೀರ್ ಶ್ರೀಮಂತರಾಗುವ ಆಸೆ ತೋರಿಸಿ ಮೋಸ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಜಾಹೀರಾತು ನೀಡಿ ದಿಢೀರ್ ಶ್ರೀಮಂತರಾಗುವ ನಂಬಿಕೆ ಹುಟ್ಟಿಸಲಾಗುತ್ತಿದೆ. ಇದನ್ನು ನಂಬಿ ಹಣ ಹೂಡಿಕೆ ಮಾಡುವವರಿಗೆ ಪ್ರಾರಂಭದಲ್ಲಿ ಒಂದಿಷ್ಟು ಹಣ ವಾಪಸ್ ಕೊಡಲಾಗುತ್ತದೆ. ಬಳಿಕ ಅಧಿಕ ಹೂಡಿಕೆ ಮಾಡಿಸಿ, ಲಾಭಾಂಶ ಆ್ಯಪ್‌ನಲ್ಲಿ ಬಂದಿರುವಂತೆ ತೋರಿಸುತ್ತಾ ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನೇ ಡಿಲೀಟ್ ಮಾಡಿ ವಿಳಾಸ ಸಿಗದಂತೆ ವಂಚನೆ ಮಾಡಲಾಗುತ್ತಿದೆ. ಈ ರೀತಿಯಾಗಿ ಕೊಳ್ಳೇಗಾಲದ ಅರುಣ್‌ಕುಮಾರ್ 47,48,197 ರೂ. ಮತ್ತು ಯಧುಗಿರಿ 2,04,0999 ರೂ. ಕಳೆದುಕೊಂಡಿದ್ದಾರೆ.
ಚಾ.ನಗರದಲ್ಲಿ ಹೊರರಾಜ್ಯದ ವ್ಯಕ್ತಿ ಡಿಜಿಟಲ್ ಅರೆಸ್ಟ್:
ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹೆಚ್ಚಾಗಿ ಕೇಳಿ ಬರುತ್ತಿದೆ. ವಂಚಕರ ಈ ತಂತ್ರದಲ್ಲಿ ಮೊದಲೇ ಬ್ಯಾಂಕ್ ಖಾತೆದಾರರ ವಿವರ, ಅಕೌಂಟ್‌ನಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳಲಾಗುತ್ತದೆ. ಬಳಿಕ ಪೊಲೀಸ್ ಕಚೇರಿ ಮಾದರಿಯ ಕೊಠಡಿಯಲ್ಲಿ ಕುಳಿತು ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವಂಚನೆ ನಡೆದಿದೆ. ಡ್ರಗ್ಸ್ ಮಾಫಿಯಾ, ಭಯೋತ್ಪಾದನೆ ಎಂಬಿತ್ಯಾದಿ ಪ್ರಕರಣಗಳಲ್ಲಿ ನೀವು ಸಿಲುಕಿರುವುದಾಗಿ ಬೆದರಿಕೆ ಹಾಕಲಾಗುತ್ತದೆ. ಮಾನಸಿಕವಾಗಿ ಹಿಂಸೆ ಕೊಟ್ಟು ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ವಂಚನೆ ಮಾಡಲಾಗುತ್ತದೆ. ಚಾಮರಾಜನಗರದಲ್ಲಿರುವ ಹರಿಯಾಣದ ದಿವೇ ರಿಷಿ ಡಿಜಿಟಲ್ ಅರೆಸ್ಟ್‌ನಿಂದ 27,60,070 ರೂ. ಕಳೆದುಕೊಂಡಿದ್ದಾರೆ.
ಆನ್ಲೈನ್ ಶಾಪಿಂಗ್‌ನಲ್ಲಿ ಇರಲಿ ಎಚ್ಚರ:
ಪ್ರಸಿದ್ಧ ಆನ್ಲೈನ್ ಶಾಪಿಂಗ್‌ಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದು, ಆನ್ಲೈನ್ ಶಾಪಿಂಗ್‌ನಲ್ಲಿ ಹೆಚ್ಚಾಗಿ ತೊಡಗುವವರು ಎಚ್ಚರಿಕೆ ವಹಿಸಬೇಕಾಗಿದೆ. ಮೊಬೈಲ್ ಸಂಖ್ಯೆಗೆ ಗ್‌ಟಿ ಓಚರ್ ಬಂದಿರುವುದಾಗಿ ತಿಳಿಸಿ ಜಿಎಸ್‌ಟಿ, ಇತರೆ ಶುಲ್ಕ ಪಾವತಿ ಮಾಡಬೇಕೆಂದು ಹಣ ಕಟ್ಟಿಸಿಕೊಂಡು ಮೋಸ ಮಾಡಲಾಗುತ್ತಿದೆ. ಹನೂರಿನ ಶಿವಣ್ಣ ಎಂಬುವವರು ಇದೇ ರೀತಿಯ ವಂಚನೆಯಲ್ಲಿ 3 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಲ್ಲದೇ, ಮೊಬೈಲ್‌ಗೆ ಬರುವ ಸಂದೇಶಗಳನ್ನು ಕ್ಲಿಕ್ ಮಾಡಬಾರದು. ಎಪಿಕೆ ೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು. ೇಸ್‌ಬುಕ್‌ನಲ್ಲಿ ಅಪರಿಚಿತರಿಂದ ಬರುವ ್ರೆಂಡ್ ರಿಕ್ವೆಸ್ಟ್‌ಗಳಿಗೆ ಅನುಮತಿ ನೀಡಬಾರದು, ಕರೆ ಮಾಡಿದವರಿಗೆ ಒಟಿಪಿ ಹೇಳಬಾರದು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಟೋಲ್ ಫ್ರೀಂ ನಂಬರ್ 1930ಗೆ ಕರೆ ಮಾಡಿ ದೂರು ನೀಡಬಹುದು.
ಸೈಬರ್ ಅಪರಾಧದ ಕುರಿತು ಜಾಗೃತಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮೂಲಕ ಸೈಬರ್ ಅಪರಾಧಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ವಂಚನೆಗೆ ಒಳಗಾಗುವ ವಿಧಾನಗಳು, ಜಿಲ್ಲೆಯಲ್ಲಿ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿರುವವರ ಕುರಿತು ಮಾಹಿತಿ ನೀಡಿ ಜನರಿಗೆ ತಿಳಿಸಲು ಸೆನ್ ಡಿವೈಎಸ್ಪಿ ಪವನ್‌ಕುಮಾರ್ ಕೋರಿದ್ದಾರೆ.
ಸೈಬರ್ ಅಪರಾಧಗಳ ಪ್ರಮುಖ ಅಸವೇ ಆಸೆ ಹುಟ್ಟಿಸುವುದು. ಸುಲಭವಾಗಿ ಹಣ, ಗ್‌ಟಿ ಸಿಗುವ ಆಮೀಷರಿಗೆ ಸಾರ್ವಜನಿಕರು ಒಳಗಾಗಬಾರದು. ಹಣ ಹೂಡಿಕೆ ಮಾಡುವುದು, ಲಿಂಕ್ ಓಪನ್ ಮಾಡದೆ ಜಾಗರೂಕರಾಗಿ ಇರಬೇಕು. ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ