

ಗದಗ: ಜಿಲ್ಲೆಯಲ್ಲಿ ಬುಧವಾರ 195 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 192 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಕ್ಕಲಗೇರಿ ಓಣಿ, ಸಾಯಿಬಾಬಾ ದೇವಸ್ಥಾನದ ಹತ್ತಿರ, ವಿಶ್ವೇಶ್ವರಯ್ಯ ನಗರ, ಟರ್ನಲ್ ಪೇಟೆ, ಹಮಾಲರ ಪ್ಲಾಟ್, ರಂಗಪ್ಪಜ್ಜನ ಮಠದ ಹತ್ತಿರ, ಶಹಪುರಪೇಟೆ, ಜೆ.ಟಿ. ಕಾಲೇಜ್ ರೋಡ್, ಪಂಚಾಕ್ಷರಿ ನಗರ, ಅಬ್ಬಿಗೇರಿ ಕಾಂಪೌಂಡ್, ಶಿರೋಳ ಆಸ್ಪತ್ರೆ ಹತ್ತಿರ, ಟ್ಯಾಗೋರ್ ರಸ್ತೆ, ಕಳಸಾಪುರ ರಸ್ತೆ, ಎಸ್.ಎಂ.ಕೆ. ನಗರ, ಸೇವಾಲಾಲ್ ನಗರ, ಹುಡ್ಕೋ ಕಾಲನಿ, ಸವೋದಯ ಕಾಲನಿ, ಜಿಮ್್ಸ, ಅಮರೇಶ್ವರ ನಗರ, ಸಂಭಾಪುರ ರಸ್ತೆ, ಮಾನ್ವಿ ಚಾಳ, ಗಂಜಿ ಬಸವೇಶ್ವರ ವೃತ್ತ, ಧನಲಕ್ಷಿ್ಮ ಬಟ್ಟೆ ಅಂಗಡಿ ಪಕ್ಕ, ಸಾಯಿ ನಗರ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ರಾಧಾ ಕೃಷ್ಣ ನಗರ, ಹುಬ್ಬಳ್ಳಿ ರಸ್ತೆ, ತೇಜ ನಗರ, ವಿವೇಕಾನಂದ ನಗರ, ಬಾಲಾಜಿ ಕ್ಲಿನಿಕ್ ಹತ್ತಿರ, ವೀರೇಶ್ವರ ನಗರ, ಯಲಿಗಾರ ಪ್ಲಾಟ್, ಗದಗ ತಾಲೂಕಿನ ಲಕ್ಕುಂಡಿ, ಅಸುಂಡಿ, ಕಳಸಾಪುರ, ಮಲ್ಲಸಮುದ್ರ, ಹೊಸಳ್ಳಿ, ಸೊರಟೂರ, ಅಡವಿಸೋಮಾಪುರ, ಕುರ್ತಕೋಟಿ, ದುಂದೂರ, ಹುಲಕೋಟಿ, ಹರ್ತಿ. ಮುಂಡರಗಿ ಪಟ್ಟಣದ ನೇಕಾರ ಓಣಿ, ಅಂಬೇಡ್ಕರ್ ನಗರ, ಚೌಡಿ ಹತ್ತಿರ, ಮುಂಡರಗಿ ತಾಲೂಕಿನ ಡಂಬಳ, ಕಲಕೇರಿ, ಚುರ್ಚಿಹಾಳ, ಡೋಣಿ ತಾಂಡಾ, ಬೆನ್ನಿಹಳ್ಳಿ, ಮಕ್ತುಂಪುರ, ಅತ್ತಿಕಟ್ಟಿ. ನರಗುಂದ ಪಟ್ಟಣದ ಕಸಬಾ ಒಣಿ, ಜನತಾ ಪ್ಲಾಟ್, ಟಿ.ಎಂ.ಸಿ. ರಸ್ತೆ, ನರಗುಂದ ಗಡ, ವಿದ್ಯಾಗಿರಿ, ವಿನಾಯಕ ನಗರ, ಅಲಿಬಾವಿ, ಕೆಳಕೇರಿ, ನರಗುಂದ ತಾಲೂಕಿನ ಬೆನಕೊಪ್ಪ. ರೋಣ ಪಟ್ಟಣದ ಕೆವಿಜಿ ಬ್ಯಾಂಕ್ ಹತ್ತಿರ, ವೀರಭದ್ರೇಶ್ವರ ದೇವಸ್ಥಾನದ ಹತ್ತಿರ, ನರೇಗಲ್ ಪೊಲೀಸ್ ಕ್ವಾರ್ಟರ್ಸ್, ಶಿವಪೇಟೆ, ರೋಣ ತಾಲೂಕಿನ ಮಾರನಬಸರಿ, ಬೆಳವಣಕಿ, ಜಕ್ಕಲಿ, ಸೂಡಿ, ರಾಜೂರ, ಅಬ್ಬಿಗೇರಿ, ಹುನಗುಂಡಿ, ಹಿರೇಹಾಳ, ಮುಶಿಗೇರಿ, ಹೊಳೆಆಲೂರ, ಸೂಡಿ, ಯಾವಗಲ್, ಗಜೇಂದ್ರಗಡ ಪಟ್ಟಣದ ಕೆ.ಎಚ್.ಡಿ.ಸಿ.ಕಾಲನಿ, ನಾಲಬಂದ ಓಣಿ, ಪತ್ತಾರ ಓಣಿ. ಶಿರಹಟ್ಟಿ ಪಟ್ಟಣದ ವಿಜಯನಗರ, ಸೋಮೇಶ್ವರ ನಗರ, ತಂಗೋಡಾ, ಶಿರಹಟ್ಟಿ ತಾಲೂಕಿನ ಕುಸಲಾಪುರ, ಬನ್ನಿಕೊಪ್ಪ, ಬಾಲೆಹೊಸೂರ, ಹರದಗಟ್ಟಿ, ಗೋನಾಳ, ಬೆಳ್ಳಟ್ಟಿ, ಕಡಕೋಳ, ಜಲ್ಲಿಗೇರಿ, ಹೊಳೆಇಟಗಿ, ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿ, ಬಸಾಪುರ ಓಣಿ, ಮುಕ್ತಿ ನಗರ, ಇಂದಿರಾ ನಗರ, ಬಸ್ತಿಬಣ, ಅಂಬೇಡ್ಕರ್ ನಗರದಲ್ಲಿ ಸೋಂಕು ಪತ್ತೆಯಾಗಿದೆ.
ಮುಂಡರಗಿ ತಾಲೂಕಿನ ಜಂತ್ಲಿ ಶಿರೂರಿನ 65 ವರ್ಷದ ಪುರುಷ, ಶಿರಹಟ್ಟಿ ತಾಲೂಕಿನ 45 ವರ್ಷದ ಪುರುಷ ಮತ್ತು ಗದಗ ತಾಲೂಕಿನ ಅಸುಂಡಿ ಗ್ರಾಮದ 70 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಸೋಂಕಿನಿಂದ ವೈದ್ಯಾಧಿಕಾರಿ ಸಾವು
ಮುಂಡರಗಿ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಬಸವರಾಜ ಕೆ. ಅವರು ಬುಧವಾರ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನವರಾದ ಡಾ.ಬಸವರಾಜ ಕೆ. ಅವರಿಗೆ ಆ. 9ರಂದು ಕರೊನಾ ಸೋಂಕಿರುವುದು ಪತ್ತೆಯಾಗಿತ್ತು. ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ. 17ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ. ಡಾ. ಬಸವರಾಜ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಸಚಿವ ಸಿ.ಸಿ.ಪಾಟೀಲರು ತಿಳಿಸಿದ್ದರು. ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಡಾ. ಬಸವರಾಜ ಅವರು ತಮ್ಮ ಸಿಬ್ಬಂದಿಯೊಂದಿಗೆ ನಿರಂತರವಾಗಿ ಪರಿಶ್ರಮಪಟ್ಟಿದ್ದನ್ನು ಸ್ಮರಿಸಬಹುದು.
ಸಂತಾಪ: ಭಗವಂತ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ಜಿಲ್ಲಾಡಳಿತ ಸಂತಾಪ ಸೂಚಿಸಿದೆ.
ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ
ಮುಂಡರಗಿ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಲಭ್ಯವಿದ್ದು ರೋಗಿಗಳು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ಕುಮಾರಸ್ವಾಮಿ ಹಿರೇಮಠ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿದ್ದ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗಿದ್ದು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದರು. ಹೀಗಾಗಿ, ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಡಾ. ಕುಮಾರಸ್ವಾಮಿ ಅವರು, ‘ಆಸ್ಪತ್ರೆ ಸುಧಾರಣೆ ಹಾಗೂ ಅದರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಟ್ಟಣದ ಎಲ್ಲ ಮುಖಂಡರು ಅಗತ್ಯ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಲಹೆಯನ್ನು ನಾವು ಸ್ವೀಕರಿಸುತ್ತೇವೆ. ವೆಂಟಿಲೇಟರ್ ಅನ್ನು ಜಿಲ್ಲಾಸ್ಪತ್ರೆಗೆ ರವಾನಿಸಿಲ್ಲ. ಕರೊನಾ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದ ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆಸ್ಪತ್ರೆಯ 50 ಹಾಸಿಗೆಗಳಿಗೆ 50 ಆಕ್ಸಿಜನ್ ಪಾಯಿಂಟ್ ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಏಕಕಾಲದಲ್ಲಿಯೇ 50 ರೋಗಿಗಳಿಗೂ ಆಕ್ಸಿಜನ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು 10 ದಿನದೊಳಗೆ ಆಕ್ಸಿಜನ್ ಪಾಯಿಂಟ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು. ಕರೊನಾ ಲಕ್ಷಣ ರಹಿತ ರೋಗಿಗಳಿಗೆ ಇಲ್ಲಿಯೇ ಅಗತ್ಯ ಚಿಕಿತ್ಸೆ ಹಾಗೂ ಔಷಧೋಪಚಾರ ಮಾಡಲಾಗುತ್ತದೆ. ಲಕ್ಷಣಗಳುಳ್ಳ ಕರೊನಾ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ಸದಾ ಮೂರು ಆಂಬುಲೆನ್ಸ್ಗಳು ಸಿದ್ಧವಾಗಿರುತ್ತವೆ ಎಂದರು.
ತಾಲೂಕಿನಾದ್ಯಂತ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲಿವೆ. ವೈದ್ಯರು ಹಾಗೂ ಸಿಬ್ಬಂದಿಗೆ ಹೆಚ್ಚು ಒತ್ತಡ ಬೀಳುತ್ತಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ವೈದ್ಯರು, ಶುಶ್ರೂಷಕಿಯರು, ಲ್ಯಾಬ್ ತಂತ್ರಜ್ಞರಿಗೆ ಕರೊನಾ ಪಾಸಿಟಿವ್ ಬಂದಿದೆ. ದೇಶದೆಲ್ಲೆಡೆ ಕರೊನಾ ಬಂದಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರೂ ಸರ್ಕಾರಿ ಆಸ್ಪತ್ರೆಗಳು ಸದಾ ಪ್ರಾರಂಭವಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತಹ ಕೆಲಸ ಮಾಡುತ್ತಿವೆ. ಜನರು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎಲ್ಲ ವಾರ್ಡ್ಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಊಟ ಹಾಗೂ ಉಪಾಹಾರ ಪೂರೈಸಲಾಗುತ್ತಿದೆ. ಆಸ್ಪತ್ರೆಯಲ್ಲಿ ದಿನನಿತ್ಯ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಶಿವಾನಂದ ಪೂಜಾರ, ವಸಂತ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.