ಜಿಲ್ಲೆಯಲ್ಲಿ ಚುರುಕಾದ ವರುಣ

KARWAR RAIN 23
Published on

ಕಾರವಾರ: ಜಿಲ್ಲೆಯಲ್ಲಿ ಮಳೆ ಚುರುಕಾಗಿದೆ. ಕರಾವಳಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಬಂದು ಹೋಗಿದೆ.

ಅಂಕೋಲಾದಲ್ಲಿ 22 ಮಿಮೀ, ಭಟ್ಕಳ-29, ಹೊನ್ನಾವರ-28, ಕಾರವಾರ-25.7, ಕುಮಟಾ-41.4, ಮುಂಡಗೋಡ-9.4, ಸಿದ್ದಾಪುರ-1.2, ಶಿರಸಿ-0.5 ಮಿಮೀ ಮಳೆಯಾಗಿದೆ. ಕಾರವಾರದಲ್ಲಿ ಶುಕ್ರವಾರ ಇಡೀ ದಿನ ಮಳೆಯಾಯಿತು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿವಿಧೆಡೆ ಸರ್ವೀಸ್ ರಸ್ತೆಗಳಲ್ಲಿ ನೀರು ತುಂಬಿ ನಿಂತು ಸಮಸ್ಯೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net