

ಚಾಮರಾಜನಗರ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ ಚಾಮರಾಜನಗರ ಕುಸಿತ ಕಂಡಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಾಲೆಗಳು ವಿಲವಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಜಿಲ್ಲೆಯ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಋ ಲಿತಾಂಶ ಮೇ.2 ರಂದು ಪ್ರಕಟವಾಗಿದ್ದು, ರಾಜ್ಯದಲ್ಲಿ ಚಾಮರಾಜನಗರ 27ನೇ ಸ್ಥಾನವನ್ನು ಪಡೆದುಕೊಂಡಿತ್ತು. 2022-23 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ 7 ನೇ ಸ್ಥಾನವನ್ನು ಪಡೆದುಕೊಂಡಿದ್ದ ಚಾಮರಾಜನಗರ ಮುಂದಿನ ವರ್ಷಗಳಲ್ಲಿ ಟಾಪ್ 5ರ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಭರವಸೆ ಮೂಡಿಸಿತ್ತು. ಆದರೇ 2023-24 ನೇ ಸಾಲಿನಲ್ಲಿ 24 ನೇ ಸ್ಥಾನ ಹಾಗೂ ಪ್ರಸ್ತುತ 27ನೇ ಸ್ಥಾನವನ್ನು ಪಡೆದುಕೊಂಡಿದ್ದು, ಲಿತಾಂಶ ಕುಸಿತ ಕಂಡಿರುವುದರ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟುಕೊಂಡಿದೆ. ಜಿಲ್ಲೆಯಲ್ಲಿ ಉಂಟಾಗಿರುವ ಶಿಕ್ಷಕರ ಕೊರತೆ, ಕೆಲವು ಕಾಡಂಚಿನ ಗ್ರಾಮಗಳಲ್ಲಿ ಅತಿಥಿ ಶಿಕ್ಷಕರ ಕೊರತೆ, ಕೋವಿಡ್ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ನಡೆದಿದ್ದ ಆಲ್‌ಲೈನ್ ಶಿಕ್ಷಣ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾದ ಕಾಳಜಿ ವಹಿಸದೇ ಇರುವುದು, ವಿಷಯಾವಾರು ಶಿಕ್ಷಕರು ದೊರೆಯದೇ ಇರುವುದು ಹಾಗೂ ಇನ್ನಿತರೆ ಹಲವಾರು ಸಮಸ್ಯೆಗಳಿಂದ ಈ ಸಾಲಿನ ಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಶಿಕ್ಷಣ ಇಲಾಖೆ ಇಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಲವಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಗಾಗಿ ಈ ವಾರದ ಲೌಡಸ್ಪೀಕರ್‌ನಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
*ವಿಷಯವಾರು ಶಿಕ್ಷಕರ ಕೊರತೆ
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರಿದಿರುವ ವಿದ್ಯಾರ್ಥಿಗಳು ಕೋವಿಡ್ ಕೊನೆಯ ಹಂತದವರಾಗಿದ್ದಾರೆ. ಶಾಲೆಗಳಲ್ಲಿ ಕಲಿಯಲು ಸಾಧ್ಯವಾಗದೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆದವರಾಗಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಗಣನೀಯ ಪ್ರಮಾಣದ ಶಿಕ್ಷಕರ ಕೊರತೆ ಎದುರಾಗಿದೆ. ವಿಷಯಾವಾರು ಖಾಯಂ ಶಿಕ್ಷಕರು ಇಲ್ಲದೇ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತಿರುವ ಪರಿಣಾಮ ಫಲಿತಾಂಶ ಕುಸಿತವಾಗಿದೆ.
ಟಿ.ಆರ್.ಸ್ವಾಮಿ, ತಾಲೂಕು ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ
*ಅಭ್ಯಾಸದ ಪ್ರವೃತ್ತಿ ಕಡಿಮೆಯಾಗಿದೆ
ಶಾಲೆಗಳಲ್ಲಿ ಎಲ್ಲಾ ಪಾಠಗಳನ್ನು ಪೂರ್ಣಗೊಳಿಸಿದ್ದರೂ, ಆಯಾ ದಿನದ ಪಾಠಗಳನ್ನು ಅಂದೇ ಅಭ್ಯಾಸ ಮಾಡುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿರುವುದು ಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಗ್ರಾಮಾಂತರ ಪ್ರದೇಶಗಳ ಶಾಲೆಗಳಿಗೆ ಸಕಾಲದಲ್ಲಿ ಅಗತ್ಯ ಪ್ರಮಾಣದ ಶಿಕ್ಷಕರ ನಿಯೋಜನೆ ಮಾಡದೆ ಇರುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ. ಇದು ಲಿತಾಂಶದ ಮೇಲೆ ಪರಿಣಾಮವನ್ನು ಬೀರಿದೆ.
ಹರ್ಷಿಣಿ, ಅಧಿಕ ಅಂಕಗಳಿಸಿದ ವಿದ್ಯಾರ್ಥಿ, ಗುಂಡ್ಲುಪೇಟೆ
*ಸಭೆಗಳಿಗೆ ಬಾರದ ಪಾಲಕರು
ಹನೂರು ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಕೊರತೆ ಇರುವ ಕಾರಣ ಸಮರ್ಪಕ ಪಾಠ ಪ್ರವಚನಕ್ಕೆ ತೊಡಕಾಗಿದೆ. ಹಲವಾರು ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನಿಯೋಜನೆ ಮಾಡದಿರುವುದು ಹಾಗೂ ಶಾಲೆಯಲ್ಲಿ ನಡೆಯುವ ಸಭೆಗಳಿಗೆ ಪಾಲಕರು ಆಗಮಿಸದಿರುವುದು ಎಸ್‌ಎಸ್‌ಎಲ್ಸಿ ಫಲಿತಾಂಶ ಕ್ಷೀಣಿಸಿರುವುದಕ್ಕೆ ಕಾರಣವಾಗಿದೆ. ಆದ್ದರಿಂದ ಶಿಕ್ಷಕರ ಕೊರತೆ ನೀಗಿದರಷ್ಟೆ ಫಲಿತಾಂಶವನ್ನು ಸುಧಾರಿಸಲು ಸಾಧ್ಯ.
ಬಿ.ಶಿವಶಂಕರ್, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೊರಟ್ಟಿ ಹೊಸೂರು, ಹನೂರು
*ಅತಿಥಿ ಶಿಕ್ಷಕರು ಸಿಗುತ್ತಿಲ್ಲ
ಹನೂರು ಶೈಕ್ಷಣಿಕ ವಲಯದ 18 ಸರ್ಕಾರಿ ಶಾಲೆಗಳ ಪೈಕಿ 9 ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಹಾಗೆಯೇ ಅನುದಾನಿತ ಶಾಲೆಗಳಲ್ಲೂ ಇದೆ ಸಮಸ್ಯೆ ಇದೆ. ಇದು ಲಿತಾಂಶದ ಮೇಲೆ ಪ್ರಭಾವವನ್ನು ಬೀರಿದೆ. ಈ ಭಾಗದ ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಕಾಡಂಚಿನ ಶಾಲೆಗಳಿಗೆ ಅತಿಥಿ ಶಿಕ್ಷಕರು ಕೂಡ ಸಿಗುತ್ತಿಲ್ಲ. ಇದರಿಂದ ಎಸ್‌ಎಸ್‌ಎಲ್ಸಿ ಫಲಿತಾಂಶ ಕುಸಿಯಲು ಮುಖ್ಯ ಕಾರಣವಾಗಿದೆ.
ಅಶೋಕ್, ಶಿಕ್ಷಣ ಸಂಯೋಜಕ, ಹನೂರು
*ಕೋವಿಡ್ ಎೆಕ್ಟ್
ಕೋವಿಡ್ ಸಮಯದಲ್ಲಿ ನಡೆಸಲಾಗಿದ್ದ ಆನ್‌ಲೈನ್ ತರಗತಿಗಳು, ಕಳೆದ ವರ್ಷ ಸೇರಿದಂತೆ ಈ ಸಾಲಿನ ಲಿತಾಂಶದ ಮೇಲೆ ಪ್ರಭಾವವನ್ನು ಬೀರಿದೆ. ಕೋವಿಡ್ ಎೆಕ್ಟ್‌ನಿಂದ ಜಿಲ್ಲೆಯ ಫಲಿತಾಂಶವು ಕುಸಿತ ಕಂಡಿದೆ. ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಶಿಕ್ಷಕರನ್ನು ನೇಮಕ ಮಾಡುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಉತ್ತಮ ಶೈಕ್ಷಣಿಕ ವ್ಯವಸ್ಥೆ ನೀಡುವ ಜತೆಗೆ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿದರೆ ಮಾತ್ರ ಅವರಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ.
ಎಸ್.ಪ್ರಕಾಶ್, ಅಧ್ಯಕ್ಷ, ಎಸ್‌ಡಿಎಂಸಿ, ಮುಡಿಗುಂಡ ಆದರ್ಶ ವಿದ್ಯಾಲಯ, ಕೊಳ್ಳೇಗಾಲ
*ಮಕ್ಕಳಿಗೆ ಕೌನ್ಸಿಲಿಂಗ್ ಮಾಡಬೇಕಿತ್ತು
ವಿಷಯವಾರು ಶಿಕ್ಷಕರ ಕೊರತೆ ಉಂಟಾಗಿರುವುದು ಲಿತಾಂಶ ಕುಸಿತಕ್ಕೆ ಕಾರಣವಾಗಿದೆ. ಸರ್ಕಾರ ಫಲಿತಾಂಶ ಉತ್ತಮವಾಗಿರಬೇಕೆಂಬ ಟಾರ್ಗೆಟ್ ನೀಡುತ್ತದೆ. ಆದರೆ, ಅಗತ್ಯವಿರುವ ಶಿಕ್ಷಕರನ್ನು ತುಂಬಲಾಗಿಲ್ಲ. ಹಲವಾರು ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಹುದ್ದೆ ಪ್ರಭಾರವಾಗಿದೆ ಇವೆಲ್ಲೆವೂ ಫಲಿತಾಂಶ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿಯೇ ಮಕ್ಕಳ ಸಾಮರ್ಥ್ಯವನ್ನು ತಿಳಿದು ಕೌನ್ಸಿಲಿಂಗ್ ಮಾಡಬೇಕಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಮಸ್ಯೆಯನ್ನು ತಿಳಿದು ಸರಿಪಡಿಸಿದರೆ ಫಲಿತಾಂಶ ಹೆಚ್ಚಾಗುತ್ತಿತ್ತು.
ಸಿದ್ದಮಾದಯ್ಯ, ನಿವೃತ್ತ ಉಪ ಪ್ರಾಂಶುಪಾಲ. ಎಸ್‌ವಿಕೆ ಪ್ರೌಢಶಾಲೆ, ಕೊಳ್ಳೇಗಾಲ
*ಮರುಪರೀಕ್ಷೆಯಲ್ಲಿ ವಿಶೇಷ ತರಗತಿ
ತಾಲೂಕಿನಲ್ಲಿ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ವಿಶೇಷ ತರಗತಿಗಳನ್ನು ಕೈಗೊಂಡು ಉತ್ತೀರ್ಣ ಮಾಡುವ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
ಮಾರಯ್ಯ, ಕ್ಷೇತ್ರ ಶಿಕ್ಷಣಧಿಕಾರಿ, ಯಳಂದೂರು