ಜಿಲ್ಲೆಯಲ್ಲಿ ಕಾರಹುಣ್ಣಿಮೆ ಸಂಭ್ರಮ ಇಂದು

0406Klb09
Published on

ಕಲಬುರಗಿ: ನಗರ ಮತ್ತು ಜಿಲ್ಲಾದ್ಯಂತ ಕಾರ ಹುಣ್ಣಿಮೆ ಶುಕ್ರವಾರ ಆಚರಿಸಲಾಗುತ್ತದೆ. ಎತ್ತುಗಳನ್ನು ಶೃಂಗರಿಸಲು ವಿವಿಧ ಅಲಂಕಾರಿಕ ವಸ್ತುಗಳ ಖರೀದಿ ಗುರುವಾರ ಜೋರಾಗಿ ನಡೆಯಿತು. ಹಳ್ಳಿಗಳಿಂದ ಆಗಮಿಸಿದ್ದ ರೈತಾಪಿ ವರ್ಗ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಊರ ಮುಂದಿನ ಅಗಸಿಯಲ್ಲಿ ಕರಿ ಹರಿಯುವ ಸ್ಪಧರ್ೆ ಆಯೋಜಿಸುತ್ತಾರೆ. ಎತ್ತುಗಳ ಮೆರವಣಿಗೆ ನಡೆಸಲಾಗುತ್ತದೆ. ಯಾವ ಎತ್ತು ಮೊದಲು ಹೋಗಿ ಕರಿ ಹರಿಯುತ್ತದೆ ಅದಕ್ಕೆ ಬಹುಮಾನ ವಿತರಿಸಲಾಗುತ್ತದೆ. ಇದು ಕೃಷಿಕರ ಹಬ್ಬ, ಎತ್ತುಗಳನ್ನು ಪೂಜಿಸಿ ಕೃಷಿ ಚಟುವಟಿಕೆಗೆ ಅಣಿಯಾಗುವಂತೆ ಸೂಚಿಸುವ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತಿದೆ. ಗ್ರಾಮಗಳಲ್ಲಿ ಹಬ್ಬ ಜೋರಾಗಿ ಆಚರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net