

ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಸವಾರಿ ಮುಂದುವರಿಯುವ ಲಕ್ಷಣಗಳು ದಟ್ಟವಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 8 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಗಂಟಲು ದ್ರವ ಪರೀಕ್ಷೆಯಲ್ಲಿ ಸಂಪರ್ಕಿತ ವ್ಯಕ್ತಿಗಳಲ್ಲಿ ನೆಗೆಟಿವ್ ವರದಿ ಬಂದಿದ್ದರೂ 14 ದಿನದ ಕ್ವಾರಂಟೈನ್ ಬಳಿಕ ನಡೆಸುವ ಮತ್ತೊಂದು ಕರೊನಾ ಟೆಸ್ಟ್ನಲ್ಲಿ ಪಾಸಿಟಿವ್ ಬರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಿದೆ.
ಸೀಲ್ಡೌನ್ ಲಾಕ್ಡೌನ್: ಕೇಂದ್ರ ಸರ್ಕಾರ ಲಾಕ್ಡೌನ್ ೋಷಣೆ ಮಾಡುತ್ತಿದ್ದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಕೇಂದ್ರದ ೋಷಣೆಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಗ್ರಾಮೀಣ ಭಾಗದ ಜನರು ಸ್ವಯಂಪ್ರೇರಿತವಾಗಿ ಲಾಕ್ಡೌನ್ ಪಾಲನೆಗೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಲಾಕ್ಡೌನ್ ೋಷಣೆ ಮಾಡಿರುವ ಗ್ರಾಮಗಳ ನೆರೆಹೊರೆ ಗ್ರಾಮಗಳಲ್ಲೂ ಜನ ಸ್ವಯಂಪ್ರೇರಿತವಾಗಿ ಲಾಕ್ಡೌನ್ ಅನುಸರಣೆಗೆ ಮುಂದಾಗುತ್ತಿದ್ದಾರೆ.
ಮತ್ತೆ ಆತಂಕ: ಮೊಟ್ಟಮೊದಲು ಗ್ರಾಮಾಂತರ ಜಿಲ್ಲೆಯಲ್ಲಿ ಪತ್ತೆಯಾದ ಐದೂ ಕರೊನಾ ಸೋಂಕಿತ ವ್ಯಕ್ತಿಗಳು ಚಿಕಿತ್ಸೆ ಪಡೆದು ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕಾಡಿದ್ದ ಕರೊನಾತಂಕ ದೂರವಾಗಿತ್ತು. ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳ ಮೂಲಕ ಜಿಲ್ಲಾಡಳಿತ ಕರೊನಾ ಕಟ್ಟ್ಟಿಹಾಕುವಲ್ಲಿ ಯಶ ಕಂಡಿತ್ತು. ಇದೀಗ ಹೊರರಾಜ್ಯ ಹಾಗೂ ಜಿಲ್ಲೆಗಳ ಸೋಂಕಿತ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಕರೊನಾ ಗ್ರ್ಾ ಏರಿಕೆ ಕಾಣುತ್ತಿರುವುದು ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಕಾಣಿಸಿಕೊಂಡಿದೆ.
ಮತ್ತೆ 3 ಪ್ರಕರಣ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 3 ಕರೊನಾ ಪ್ರಕರಣ ದೃಢಪಟ್ಟಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಜಿಲ್ಲಾಡಳಿತ ಇದನ್ನು ದೃಢೀಕರಿಸಿಲ್ಲ. ಈಗಾಗಲೇ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿನ ವ್ಯಕ್ತಿಗಳಲ್ಲಿ ಕೋವಿಡ್-19 ಪತ್ತೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಧಿಕೃತ ವರದಿ ಬಳಿಕ ಜಿಲ್ಲೆಯಲ್ಲಿ ಕರೊನಾ ಸವಾರಿಯ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾದಿಂದ ಇಲ್ತೊರೆ ಸಂಪೂರ್ಣ ಸ್ತಬ್ಧ: ಕುಂದಾಣ ಹೋಬಳಿ ಇಲ್ತೊರೆ ಗ್ರಾಮದ ಸೋಂಕಿತ (ಪಿ-2550) ವ್ಯಕ್ತಿ ವಾಸವಾಗಿದ್ದ ಮನೆಯ 1 ಕಿ.ಮೀ ವ್ಯಾಪ್ತಿಯಲ್ಲಿ ಸಂಪೂರ್ಣ ಸೀಲ್ಡೌನ್ ೋಷಿಸಲಾಗಿದೆ. ಈ ಭಾಗದಲ್ಲಿ ಎರಡು ಮನೆಗಳಿದ್ದು ಈ ಮನೆಯಲ್ಲಿರವವರನ್ನು ಹೊಂ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಆಹಾರ ಪದಾರ್ಥ ಮತ್ತಿತರ ಅವಶ್ಯ ವಸ್ತುಗಳನ್ನು ಕನ್ನಮಂಗಲ ಗ್ರಾಮ ಪಂಚಾಯಿತಿ ಒದಗಿಸುತ್ತಿದೆ.
ಇಲ್ತೊರೆ ಗ್ರಾಮದಲ್ಲಿ ಸಂಪೂರ್ಣ ಲಾಕ್ಡೌನ್ ೋಷಿಸಿದ್ದು, ಪ್ರತಿ ಮನೆಯ ಪ್ರತಿ ವ್ಯಕ್ತಿಯನ್ನು ಆರೋಗ್ಯ ಇಲಾಖೆ ತಪಾಸಣೆ ನಡೆಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಗ್ರಾಮದಲ್ಲಿ 218 ಮನೆಗಳಿದ್ದು 884 ಜನಸಂಖ್ಯೆ ಇದೆ.
ಗ್ರಾಮಸ್ಥರು ವದಂತಿಗಳಿಗೆ ಕಿವಿಕೊಡಬಾರದು ಎಂದು ಗ್ರಾಪಂ ಅದ್ಯಕ್ಷ ಚನ್ನಕೇಶವ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೆ ಮಾಹಿತಿ ಇದ್ದರೂ ಗ್ರಾಪಂ ವತಿಯಿಂದ ತಿಳಿಸಲಾಗುವುದು, ಅನಗತ್ಯ ಅತಂಕಕ್ಕೊಳಗಾಗಬಾರದು ಎಂದು ತಿಳಿಸಿದ್ದಾರೆ.