ಜಿಲ್ಲೆಯಲ್ಲಿ 30 ಮಂದಿಗೆ ಕರೊನಾ ಸೋಂಕು

H25 Anchatageri 1
Published on

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 30 ಕರೊನಾ (ಕೋವಿಡ್) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ವೈರಾಣುವಿನ ಕರಾಳ ಸಾಮ್ರಾಜ್ಯ ವಿಸ್ತಾರವಾಗುತ್ತಲೇ ಇದೆ. ಜಿಲ್ಲೆಯ ಜನರು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷೆ ಕ್ರಮ ಕೈಗೊಳ್ಳುವ, ಸ್ವಯಂ ಲಾಕ್​ಡೌನ್ ಅನುಸರಿಸುವ ಅನಿವಾರ್ಯತೆಯನ್ನು ಸದ್ಯದ ಪರಿಸ್ಥಿತಿ ಸಾರಿ ಹೇಳುತ್ತಿದೆ.

30ರಲ್ಲಿ 20 ಪ್ರಕರಣಗಳು ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಪತ್ತೆಯಾಗಿದ್ದರೆ, 4 ಪ್ರಕರಣಗಳು ಸಂಪರ್ಕದಿಂದ ಪತ್ತೆಯಾಗಿದೆ. ಉಳಿದಂತೆ ಪಶ್ಚಿಮ ಬಂಗಾಳದಿಂದ ಆಗಮಿಸಿದ ಹಾಗೂ ದಾವಣಗೆರೆ ಪ್ರಯಾಣದ ಹಿನ್ನೆಲೆ ಹೊಂದಿದ ತಲಾ ಒಬ್ಬರು ಹಾಗೂ ಸಂಪರ್ಕ ಪತ್ತೆಯಾಗದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಹಳೇಹುಬ್ಬಳ್ಳಿ ಜಂಗ್ಲಿಪೇಟೆಯ 19 ವರ್ಷದ ಯುವಕ, ನವನಗರದ ಆಟೋಮೊಬೈಲ್ ಸರ್ವೀಸ್ ಸೆಂಟರ್ ಒಂದರ ಉದ್ಯೋಗಿ 21 ವರ್ಷದ ಯುವಕ, ಹುಬ್ಬಳ್ಳಿ ಭವಾನಿ ಪಾರ್ಕ್ ಅಕ್ಕಮಹಾದೇವಿ ಲೇಔಟ್​ನ 31 ವರ್ಷದ ಮಹಿಳೆ, ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ 25 ವರ್ಷದ ಮಹಿಳೆ, ಹುಬ್ಬಳ್ಳಿ ಗಣೇಶಪೇಟೆ ಶೆಟ್ಟರ್ ಓಣಿಯ 17 ವರ್ಷದ ಬಾಲಕ, ಹಳೇಹುಬ್ಬಳ್ಳಿ ಜಂಗ್ಲಿಪೇಟೆ ಬಸವಣ್ಣ ದೇವಸ್ಥಾನ ಬಳಿಯ 42 ವರ್ಷದ ಪುರುಷ, ಸದರಸೋಫಾದ 26 ವರ್ಷದ ಪುರುಷ, ಹುಬ್ಬಳ್ಳಿ ಗಣೇಶಪೇಟೆ ಬಿಂದರಗಿ ಓಣಿಯ 54 ವರ್ಷದ ಪುರುಷ, ಕುಲಕರ್ಣಿ ಹಕ್ಕಲದ 48 ವರ್ಷದ ಪುರುಷ, ಕಮರಿಪೇಟೆ 4ನೇ ಕ್ರಾಸ್​ನ 25 ವರ್ಷದ ಯುವಕ, ನಾರಾಯಣಸೋಫಾ ಕೋಲೆಕಾರ್ ಪ್ಲಾಟ್​ನ 43 ವರ್ಷದ ಪುರುಷ, ಉಣಕಲ್ ಕಲ್ಮೇಶ್ವರ ದೇವಸ್ಥಾನ ಬಳಿಯ 23 ವರ್ಷದ ಯುವಕ, ಹಳೇಹುಬ್ಬಳ್ಳಿ ಅಲ್ತಾಫ್​ನಗರ ಕೊನೆ ಕ್ರಾಸ್​ನ 23 ವರ್ಷದ ಮಹಿಳೆ, ಕೌಲ್​ಪೇಟನ 7 ವರ್ಷದ ಬಾಲಕ, ಕಮರಿಪೇಟೆ ನ್ಯೂ ಇಂಗ್ಲಿಷ್ ಶಾಲೆ ಬಳಿಯ 46 ವರ್ಷದ ಮಹಿಳೆ, ಹುಬ್ಬಳ್ಳಿ ಶಿಮ್ಲಾ ನಗರದ 25 ವರ್ಷದ ಮಹಿಳೆ, ಧಾರವಾಡ ನಗರ ಪೊಲೀಸ್ ಠಾಣೆ ಹಿಂಭಾದ ಪೊಲೀಸ್ ಕ್ವಾರ್ಟ್​ಸ್ನ 9 ವರ್ಷದ ಬಾಲಕ, ಹುಬ್ಬಳ್ಳಿ ಶಿಮ್ಲಾನಗರದ 19 ವರ್ಷದ ಪುರುಷ, ಹುಬ್ಬಳ್ಳಿ ಅಂಚಟಗೇರಿ ಓಣಿಯ 42 ವರ್ಷದ ಪುರುಷ, ಕಿರೇಸೂರ ಸಿದ್ಧಲಿಂಗೇಶ್ವರ ಓಣಿಯ 65 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜೂ. 21ರಂದು ಸೋಂಕು ದೃಢಪಟ್ಟಿದ್ದ ರಾಯನಾಳ ಓಂ ವೃತ್ತದ ನಿವಾಸಿ, 18 ವರ್ಷದ ಯುವಕನ ಸಂಪರ್ಕ ಹೊಂದಿದ್ದ ಅಂಚಟಗೇರಿಯ ಶಿವಳ್ಳಿ ಓಣಿಯ 27 ವರ್ಷದ ಪುರುಷ, ರಾಯನಾಳ ಓಂ ವೃತ್ತದ 20 ವರ್ಷದ ಮಹಿಳೆ, ಜೂ. 23ರಂದು ಸೋಂಕು ದೃಢಪಟ್ಟಿದ್ದ ಪ್ರಕರಣಗಳ ಪೈಕಿ ಧಾರವಾಡದ ಮಿಚಿಗನ್ ಕಾಂಪೌಂಡ್ ಲೋಬೋ ಅಪಾರ್ಟ್​ವೆುಂಟ್​ನ 55 ವರ್ಷದ ಪುರುಷನ ಸಂಪರ್ಕ ಹೊಂದಿದ್ದ ಅದೇ ಅಪಾರ್ಟ್​ವೆುಂಟ್​ನ 53 ವರ್ಷದ ಮಹಿಳೆ ಹಾಗೂ ಅಂಚಟಗೇರಿಯ 57 ವರ್ಷದ ಪುರುಷನೊಂದಿಗೆ ಸಂಪರ್ಕ ಹೊಂದಿದ್ದ ಅಂಚಟಗೇರಿ ಗಾಣಿಗೇರ ಓಣಿಯ 42 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಪಶ್ಚಿಮ ಬಂಗಾಳದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ (ದಂತವೈದ್ಯಕೀಯ ವಿದ್ಯಾರ್ಥಿನಿ) 23 ವರ್ಷದ ಮಹಿಳೆ, ದಾವಣಗೆರೆ ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿ ಗಿರಣಿ ಚಾಳ 5ನೇ ಕ್ರಾಸ್​ನ 30 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಳೇಹುಬ್ಬಳ್ಳಿ ಬೀರಬಂದ್ ಓಣಿಯ 24 ವರ್ಷದ ಮಹಿಳೆ, ಧಾರವಾಡ ಜನ್ನತ ನಗರದ 7 ವರ್ಷದ ಬಾಲಕ, ಹುಬ್ಬಳ್ಳಿ ಪಡದಯ್ಯನ ಹಕ್ಕಲದ 63 ವರ್ಷದ ಮಹಿಳೆ ಹಾಗೂ 61 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net