ಜಿಲ್ಲೆಯಲ್ಲಿ 28 ಹೊಸ ಸೋಂಕಿತರು ಪತ್ತೆ

carona logo
Published on

ಗದಗ: ಜಿಲ್ಲೆಯಲ್ಲಿ ಭಾನುವಾರ 28 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 583ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿತ್ತು. ಭಾನುವಾರ ಕಡಿಮೆ ಜನರಲ್ಲಿ ಸೋಂಕು ಕಂಡುಬಂದಿದ್ದು, ತುಸು ನಿರಾಳವೆನಿಸಿದೆ.

ಗದಗ ನಗರದ ಸಾಲ ಓಣಿ ನಿವಾಸಿ 15 ವರ್ಷದ ಬಾಲಕಿ, ರೋಣ ತಾಲೂಕಿನ ಬೇವಿನಕಟ್ಟಿ ನಿವಾಸಿ 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ನರಗುಂದ ಅಧ್ಯಾಪಕ ನಗರ ನಿವಾಸಿ 46 ವರ್ಷದ ಪುರುಷನಿಗೆ ಪಿ-44163 ಸಂಪರ್ಕದಿಂದ, ನಗರದ ಮಕಾನ ಗಲ್ಲಿ ನಿವಾಸಿ 40 ವರ್ಷದ ಪುರುಷ ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಗಜೇಂದ್ರಗಡದ ಜವಳಿ ಪ್ಲಾಟ್ ನಿವಾಸಿ 47 ವರ್ಷದ ಪುರುಷನಿಗೆ ಉಸಿರಾಟದ ತೊಂದರೆಯಿಂದಾಗಿ, ಬೆಟಗೇರಿಯ ಹೆಲ್ತ್ ಕ್ಯಾಂಪ್ ಪೊಲೀಸ್ ಕ್ವಾರ್ಟರ್ಸ್ ನಿವಾಸಿ 53 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಸಂಪರ್ಕ ಕುರಿತು ಪತ್ತೆ ಕಾರ್ಯ ನಡೆದಿದೆ. ನಗರದ ರಾಜೀವಗಾಂಧಿ ನಗರದ ನಿವಾಸಿ 20 ವರ್ಷದ ಪುರುಷ ಪ್ರಯಾಣದ ಹಿನ್ನೆಲೆಯಲ್ಲಿ, ಜಿಮ್್ಸ ಬಾಲಕರ ಹಾಸ್ಟೆಲ್ ನಿವಾಸಿ 23 ವರ್ಷದ ಪುರುಷನಿಗೆ ಪಿ-44183 ಸಂಪರ್ಕದಿಂದ, ಹರ್ತಿ ಗ್ರಾಮದ ನಿವಾಸಿ 26 ವರ್ಷದ ಮಹಿಳೆಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಕುರ್ತಕೋಟಿ ನಿವಾಸಿ 17 ವರ್ಷದ ಪುರುಷನಿಗೆ ಪಿ-47615 ಸಂಪರ್ಕದಿಂದ, ನಗರದ ನಂದೀಶ್ವರ ನಗರ ನಿವಾಸಿ 53 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣದಿಂದಾಗಿ, ಮಹೇಂದ್ರಕರ ವೃತ್ತದ ನಿವಾಸಿ 40 ವರ್ಷದ ಪುರುಷನಿಗೆ ಪಿ-51683 ಸಂಪರ್ಕದಿಂದ, 50 ವರ್ಷದ ಮಹಿಳೆಗೆ ಪಿ-44208 ಸಂಪರ್ಕದಿಂದ, ನಗರದ ಕೇಶವ ನಗರ ನಿವಾಸಿ 63 ವರ್ಷದ ಮಹಿಳೆಗೆ ಪಿ-47604 ಸಂಪರ್ಕದಿಂದ, ಬೆಳಗಾವಿ ನಿವಾಸಿ 40 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ನರಗುಂದ ಹೊರಕೇರಿ ಓಣಿ ನಿವಾಸಿಗಳಾದ 20 ವರ್ಷದ ಪುರುಷ ಹಾಗೂ 56 ವರ್ಷದ ಪುರುಷನಿಗೆ ಪಿ-44171 ಸಂಪರ್ಕದಿಂದ, ಕುರ್ತಕೋಟಿ ನಿವಾಸಿಗಳಾದ 37 ವರ್ಷದ ಮಹಿಳೆ, 55 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕಿಗೆ ಪಿ-47615 ಸಂಪರ್ಕದಿಂದ, ನರಗುಂದ ಹೊರಕೇರಿ ನಿವಾಸಿ 25 ವರ್ಷದ ಪುರುಷನಿಗೆ ಪಿ-44171 ಸಂಪರ್ಕದಿಂದ, ಕುರ್ತಕೋಟಿ ನಿವಾಸಿ 53 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ನಗರದ ಎಸ್.ಎಂ. ಕೃಷ್ಣಾ ನಗರದ ನಿವಾಸಿ 25 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ. ನಗರದ ರಾಜೀವ ಗಾಂಧಿನಗರ ನಿವಾಸಿ 45 ವರ್ಷದ ಮಹಿಳೆಗೆ ಪ್ರಯಾಣದ ಹಿನ್ನೆಲೆಯಲ್ಲಿ, ಜಿಮ್್ಸ ಹಾಸ್ಟೆಲ್ ನಿವಾಸಿ 23 ವರ್ಷದ ಮಹಿಳೆಗೆ ಪಿ-38892 ಸಂಪರ್ಕದಿಂದ, ನಗರದ ಮಕಾನ ಗಲ್ಲಿ ನಿವಾಸಿ 18 ವರ್ಷದ ಮಹಿಳೆಗೆ ಪಿ-63649 ಸಂಪರ್ಕದಿಂದ, ಜಿಮ್್ಸ ನಿವಾಸಿಗಳಾದ 23 ವರ್ಷದ ಪುರುಷ ಹಾಗೂ 21 ವರ್ಷದ ಪುರುಷನಿಗೆ ಪಿ-44183 ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಜಿಲ್ಲೆಯ 24 ಪ್ರದೇಶ ಪ್ರತಿಬಂಧಿತ

ಗದಗ: ಕರೊನಾ ಪಾಸಿಟಿವ್ ಬಂದ 24 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಘೊಷಿಸಿದ್ದಾರೆ. ಗದಗ ತಾಲೂಕು ಮುಳಗುಂದ ಪಟ್ಟಣದ ಹಳೇವಾಡಾ ಓಣಿ, ಸೀತಾಲಹರಿ, ನಾಗಾವಿ ಗ್ರಾಮದ ಚೆನ್ನಬಸಪ್ಪ ಅಜ್ಜನಮಠ ಪ್ರದೇಶ, ಹರ್ತಿ ಗ್ರಾಮದ 1ನೇ ವಾರ್ಡ್, ಕಣವಿ ಗ್ರಾಮದ ದೇಶಪಾಂಡೆ ಪ್ರದೇಶ, ಬೆಳದಡಿ ಗ್ರಾಮ ಪಂಚಾಯಿತಿ 6ನೇ ವಾರ್ಡ್, ಕಬಲಾಯತಕಟ್ಟಿ ಗ್ರಾಮ, ನರಗುಂದದ ಹೊರಕೇರಿ ಓಣಿ, ಕೆಂಪಗಸಿ, ಚಿನಿವಾಲಗಟ್ಟಿ ಓಣಿ, ಲಕ್ಷೆ್ಮೕಶ್ವರದ ವಾಯವ್ಯ ಸಾರಿಗೆ ಡಿಪೋ ಸಮೀಪ, ರೋಣದ ಕುರುಬಾಗಲ್ಲಿ, ಶಂಬರಚಾಳ, ಜನತಾ ಪ್ಲಾಟ್, ಗದಗ ಬೆಟಗೇರಿಯ ಕುಂಬಾರ ಓಣಿ, ಜಾಕೀರ್ ಹುಸೇನ್ ಕಾಲನಿ, ಸವಡಿ ಪ್ಲಾಟ್ ಮತ್ತು ನಿಸರ್ಗ ಬಡಾವಣೆ, ವೆಂಕಟೇಶ ಟಾಕೀಜ್ ಹಿಂದುಗಡೆ ಮತ್ತು ಅಣ್ಣಿಗೇರಿ ಗಾರ್ಡನ್ ಹತ್ತಿರದ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶ ಎಂದು ಘೊಷಿಸಲಾಗಿದೆ.

ಸಾಮಾನ್ಯ ವಲಯಗಳು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ವರದಿ ಮೇರೆಗೆ ಜಿಲ್ಲೆಯ ಒಂಬತ್ತು ಕಂಟೇನ್ಮೆಂಟ್ ಪ್ರದೇಶಗಳನ್ನು ಸಾಮಾನ್ಯ ವಲಯವನ್ನಾಗಿ ಪರಿವರ್ತಿಸಲಾಗಿದೆ.ಗದಗ ಬೆಟಗೇರಿಯ ಸಿದ್ದರಾಮೇಶ್ವರನಗರ, ಕಾಗದಕೇರಿ ಓಣಿ, ಗದಗ ತಾಲೂಕು ಬೆಳದಡಿ ಗ್ರಾಮ, ಅಡವಿ ಸೋಮಾಪುರ ದೊಡ್ಡ ತಾಂಡಾ, ಕಳಸಾಪೂರ ಗ್ರಾಮದ ಆದಿತ್ಯ ನಗರ, ಹರ್ತಿ ಗ್ರಾಮದ ಸೋಮರಡ್ಡಿ ಕುಟುಂಬ ಪ್ರದೇಶ, ಲಕ್ಷೆ್ಮೕಶ್ವರದ ಬಸವೇಶ್ವರನಗರ ಹೊಸ ಬಸ್ ನಿಲ್ದಾಣದ ಸಮೀಪ, ಲಕ್ಷೆ್ಮೕಶ್ವರ ತಾಲೂಕು ಗೊಜನೂರು ಗ್ರಾಮದ ಶರೀಫನಗರ, ನರಗುಂದದ ಗುಡ್ಡದಕೇರಿ ಓಣಿ ಪ್ರದೇಶವನ್ನು ಸಾಮಾನ್ಯ ವಲಯವನ್ನಾಗಿ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

ನಾಲ್ಕು ದಿನದಲ್ಲಿ ನಾಲ್ವರು ಸಾವು

ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್​ನಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಸೋಂಕಿತರ ಮೃತಪಟ್ಟಿದ್ದಾರೆ. ಗದಗ-ಬೆಟಗೇರಿ ನಗರದ ಸಿದ್ದಲಿಂಗ ನಗರದ ನಿವಾಸಿ 87 ವರ್ಷದ ವೃದ್ಧೆ ಕಳೆದ ಕೆಲವು ದಿನಗಳಿಂದ ಕೆಮ್ಮು, ಹೊಟ್ಟೆ ನೋವು, ವಾಂತಿಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜು. 16ರಂದು ಮೃತಪಟ್ಟಿದ್ದಾರೆ.

ಗದಗ-ಬೆಟಗೇರಿ ನಗರದ ಟ್ಯಾಗೋರ್ ರಸ್ತೆ ನಿವಾಸಿ 74 ವರ್ಷದ ಪುರುಷ ಹೃದಯ ಸಂಬಂಧಿ ಕಾಯಿಲೆ ಸಂಬಂಧ ಜು. 14ರಂದು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜು. 16ರಂದು ಮೃತಪಟ್ಟಿದ್ದಾರೆ. ಗದಗ-ಬೆಟಗೇರಿ ನಗರದ ಮಹೇಂದ್ರಕರ ವೃತ್ತದ ನಿವಾಸಿ 84 ವರ್ಷದ ಪುರುಷ ರೋಗ ಲಕ್ಷಣಗಳಿಂದ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ, ಶ್ವಾಸಕೋಶ ಹಾಗೂ ಕಿಡ್ನಿ ಸಂಬಂಧಿತ ರೋಗಗಳಿಂದ ಅವರು ಬಳಲುತ್ತಿದ್ದರು. ನಿಮೋನಿಯಾದಿಂದ ಚಿಕಿತ್ಸೆ ಫಲಕಾರಿಯಾಗದೆ ಜು. 17ರಂದು ಮೃತಪಟ್ಟಿದ್ದಾರೆ.

ಗದಗ ನಗರದ ಚಾವಡಿ ಕೂಟ ಹತ್ತಿರದ ನಿವಾಸಿ 40 ವರ್ಷದ ಪುರುಷ ಸಕ್ಕರೆ ಕಾಯಿಲೆ, ಜ್ವರ ಹಾಗೂ ಉಸಿರಾಟ ತೊಂದರೆಯಿಂದಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಗಂಟಲ ದ್ರವದ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅಂದು ಸಂಜೆ ಅವರಿಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕೋವಿಡ್-19 ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net