

ಗದಗ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 18 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40 ವರ್ಷದ ಪುರುಷನ (ಪಿ-9729) ಸಂಪರ್ಕದಿಂದ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರ ನಿವಾಸಿಗಳಾದ 36 ವರ್ಷದ ಪುರುಷ ಹಾಗೂ 25 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ಜೂನ್ 28 ರಂದು ಮಹಾರಾಷ್ಟ್ರದಿಂದ ಆಗಮಿಸಿದ ಜಿಲ್ಲೆಯ ಮುಂಡರಗಿ ತಾಲೂಕಿನ ಮೇಂವುಡಿಯ ನಿವಾಸಿಗಳಾದ ಐವರಲ್ಲಿ ಸೋಂಕು ದೃಢವಾಗಿದೆ. 38 ವರ್ಷದ ಪುರುಷ, 35 ವರ್ಷದ ಮಹಿಳೆ, 16 ವರ್ಷದ ಯುವತಿ, 16 ವರ್ಷದ ಯುವಕ ಮತ್ತು 9 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಲಕ್ಷ್ಮೇಶ್ವರದ 39 ವರ್ಷದ ಪುರುಷನ (ಪಿ-11230) ಸಂಪರ್ಕದಿಂದ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಹತ್ತಿರದ ಹೂಲಗೇರಿ ಬಣದ 6 ನಿವಾಸಿಗಳಿಗೆ ಸೋಂಕು ದೃಢವಾಗಿದೆ. 32 ವರ್ಷದ ಮಹಿಳೆ, 14 ವರ್ಷದ ಯುವಕ, 25 ವರ್ಷದ ಪುರುಷ, 39 ವರ್ಷದ ಪುರುಷ, 12 ವರ್ಷದ ಯುವತಿ, 7 ವರ್ಷದ ಬಾಲಕಿಗೆ ಸೋಂಕು ತಗುಲಿದೆ.
ಗದಗ ತಾಲೂಕಿನ ಹೊಂಬಳ ಗ್ರಾಮದ ದೊಡ್ಡ ಓಣಿ ನಿವಾಸಿ 70 ವರ್ಷದ ವೃದ್ಧೆಗೆ ಹಾಗೂ ಬೆಂಗಳೂರಿನಿಂದ ಆಗಮಿಸಿದ ರೋಣ ಪಟ್ಟಣದ ಡಿಪೌಲ್ ಶಾಲೆ ಹತ್ತಿರದ ನಿವಾಸಿ 36 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ನರಗುಂದ ಪಟ್ಟಣದ ಗಾಡಿ ಓಣಿಯ 42 ವರ್ಷದ ಪುರುಷನ (ಪಿ-18279) ಸಂಪರ್ಕದಿಂದಾಗಿ ಅದೇ ಪ್ರದೇಶದ 30 ವರ್ಷದ ಮಹಿಳೆ, 38 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ನರಗುಂದ ಪಟ್ಟಣದ ಗಾಡಿ ಓಣಿಯ 39 ವರ್ಷದ ಪುರುಷನ (ಪಿ-15320) ಸಂಪರ್ಕದಿಂದ ಹೊರಕೇರಿ ಓಣಿಯ 26 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.
ಕ್ವಾರಂಟೈನ್ನಲ್ಲಿದ್ದ ಐವರಿಗೆ ವೈರಸ್
ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಐವರು ಹಾಗೂ ಪಟ್ಟಣದ ಇಬ್ಬರಿಗೆ ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದ ಮೇವುಂಡಿ ಗ್ರಾಮದ ಐವರನ್ನು ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಡಂಬಳ ಗ್ರಾಮದ ಆರೋಗ್ಯ ಇಲಾಖೆಯ ಸೋಂಕಿತ ಸಿಬ್ಬಂದಿ ಸಂಪರ್ಕದಲ್ಲಿದ್ದ ಪಟ್ಟಣದ ಅಂಬಾಭವಾನಿ ನಗರದ ಇಬ್ಬರಿಗೆ ಸೋಂಕು ದೃಢವಾಗಿದೆ. ಸೋಂಕಿತರು ವಾಸವಿದ್ದ ಪ್ರದೇಶದಲ್ಲಿ ಸಂಚಾರ ಬಂದ್ ಮಾಡಲಾಗಿದೆ.
29 ಸೋಂಕಿತರು ಗುಣ: ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಮುರಾರ್ಜಿ ವಸತಿ ಶಾಲೆಯಲ್ಲಿ ತೆರೆಯಲಾದ ಕರೊನಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದ ಪಟ್ಟಣದ 29 ಜನರು ಗುಣಹೊಂದಿ ಸೋಮವಾರ ತಮ್ಮ ಮನೆಗಳಿಗೆ ತೆರಳಿದರು. ಪಟ್ಟಣದಲ್ಲಿ ಜೂ.25ರಂದು ಒಂದೇ ದಿನ 29ಜನರು ಕರೊನಾ ಸೋಂಕಿತರು ಪತ್ತೆಯಾಗಿದ್ದರು. 10 ದಿನ ಹಿರೇವಡ್ಡಟ್ಟಿಯ ಮುರಾರ್ಜಿ ವಸತಿ ಶಾಲೆಯ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಪಡೆದವರೆಲ್ಲ ಈಗ ಗುಣ ಹೊಂದಿ ಮನೆಗೆ ತೆರಳಿದ್ದಾರೆ. ಅವರೆಲ್ಲರಿಗೂ 14 ದಿನ ಹೋಂ ಕ್ವಾರಂಟೈನ್ ಆಗಲು ಸೂಚಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜ ಕೆ. ತಿಳಿಸಿದರು. ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಡಾ.ಎಸ್.ಎಸ್. ಪಾಟೀಲ, ಡಾ.ಎಂ.ಕೆ. ಗುಂಡಳ್ಳಿ, ಡಾ.ಜಯಕುಮಾರ ಬ್ಯಾಳಿ, ಡಾ.ನಂದಾ ಶಾಸ್ತ್ರಿ, ಎನ್.ಬಿ.ಅಳವಂಡಿ, ಎಸ್.ಎಸ್. ಸರ್ವದೆ ಇದ್ದರು.