ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ

honnur prakash
Published on

ಚಾಮರಾಜನಗರ: ಜಿಲ್ಲೆಯ ರೈತರು ಬೆಳೆದ ಎಳನೀರು ಮತ್ತು ತೆಂಗಿನಕಾಯಿ ಹೊರ ರಾಜ್ಯಗಳಿಗೆ ರ‌್ತಾಗುತ್ತಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.

ತೆಂಗಿನಲ್ಲಿ 25-30 ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಆದರೆ ನಾವು ತೆಂಗನ್ನು ಬೆಳೆದು ಬೇರೆ ಕಡೆಗಳಿಂದ ತೆಂಗಿನ ಉಪ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದೇವೆ. ಬೇರೆ ಕಡೆಗೆ ಎಳನೀರು, ತೆಂಗಿನಕಾಯಿ ಮಾರಾಟ ಮಾಡುವುದರಿಂದ ಉತ್ತಮ ಬೆಲೆ ಸಿಗುವುದಿಲ್ಲ. ಆದರೇ ತೆಂಗಿನ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಸರ್ಕಾರ ಮನಸ್ಸು ಮಾಡಿ ತೆಂಗಿನ ಮೌಲ್ಯವರ್ಧನೆಗಾಗಿ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಬೇಕು. ಈ ಮೂಲಕ ತೆಂಗು ಬೆಳೆಗಾರರ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net