

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಸಂಘ-ಸಂಸ್ಥೆ, ಬಸ್, ರೈಲ್ವೆ, ಆಟೋ ನಿಲ್ದಾಣ, ಆಸ್ಪತ್ರೆಗಳು, ವಿವಿಧ ಪಕ್ಷಗಳ ಕಚೇರಿ ಒಳಗೊಂಡು ವಿವಿಧೆಡೆ 77ನೇ ಸ್ವಾತಂತ್ರೊೃೀತ್ಸವ ಸಮಾರಂಭವನ್ನು ಮಂಗಳವಾರ ಸಡಗರದಿಂದ ಆಚರಿಸಲಾಯಿತು.
ಸ್ವಾತಂತ್ರೃ ಹೋರಾಟಗಾರರ ವೇಷಭೂಷಣಗಳಲ್ಲಿ ಚಿಣ್ಣರು ಕಂಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇಶ ಭಕ್ತಿ ಮೂಡಿಸುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ವ್ಯಕ್ತವಾಯಿತು. ಒಟ್ಟಾರೆ ಸಂಭ್ರಮ ಜೋರಾಗಿತ್ತು.
ಮುರುಘಾ ಮಠದಲ್ಲಿ:
ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ವ್ಯವಸ್ಥಾಪಕ ಆರ್.ಲಿಂಗರಾಜು, ಪರಮೇಶ್ವರಸ್ವಾಮಿ, ತಿಪ್ಪೇಸ್ವಾಮಿ, ರವಿವರ್ಮ ಇತರರಿದ್ದರು.
ಬಿಜೆಪಿ ಕಚೇರಿ: ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎ.ಮುರಳಿ ಧ್ವಜಾರೋಹಣ ನೆರವೇರಿಸಿದರು. ಎಂಎಲ್ಸಿ ಕೆ.ಎಸ್.ನವೀನ್, ಪದಾಧಿಕಾರಿಗಳಾದ ವೆಂಕಟೇಶ್‌ಯಾದವ್, ನವೀನ್ ಚಾಲುಕ್ಯ, ಕಲ್ಲೇಶಯ್ಯ ಇತರರಿದ್ದರು.
ಮದಕರಿನಾಯಕ ವಿದ್ಯಾಸಂಸ್ಥೆ:
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರೃ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಧ್ವಜಾರೋಹಣ ನೆರವೇರಿಸಿದರು. ಆಡಳಿತಾಧಿಕಾರಿ ಎಸ್.ಸಾಗರ್, ಸಂಸ್ಥೆಯ ಕಾರ್ಯದರ್ಶಿ ವೈ.ಬಿ. ದಿವ್ಯಾ ಸರಸ್ವತಿ, ಝಾನ್ಸಿಲಕ್ಷ್ಮಿ ಇತರರಿದ್ದರು.
ಮೇದಾರ ಗುರುಪೀಠ: ಮೇದಾರ ಕೇತೇಶ್ವರ ಮಠದ ಆವರಣದ ನವೀನ್ ಪ್ರೌಢಶಾಲೆಯಲ್ಲಿ ಸ್ವಾತಂತ್ರೊೃೀತ್ಸವದ ಅಂಗವಾಗಿ ಇಮ್ಮಡಿ ಬಸವಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಕ ಭೀಮಣ್ಣರೆಡ್ಡಿ, ರಘು, ರಾಮಣ್ಣ, ಜಗದೀಶ್, ರಾಘವೇಂದ್ರ, ಬಸವರಾಜ್, ಮಾಲಿನಿ, ಮುಖ್ಯಶಿಕ್ಷಕ ಪ್ರಸನ್ನಕುಮಾರ್ ಇತರರಿದ್ದರು.
ವಾರ್ತಾ ಇಲಾಖೆ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಧ್ವಜಾರೋಹಣ ನೇರವೇರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಬಿ. ಗೌಡಿಗೆರೆ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಪ್ರಹ್ಲಾದ್, ಸಿಬ್ಬಂದಿಗಳಾದ ವೆಂಕಟೇಶ್, ವೇಣುಗೋಪಾಲ್, ಎಂ.ಜೆ.ಬೋರೇಶ್, ಚಂದ್ರಶೇಖರ್, ತಿಮ್ಮ್ಮಾಶೆಟ್ಟಿ, ಅಂಜನ್‌ಮೂರ್ತಿ, ಅಪ್ರೆಂಟಿಸ್‌ಗಳಾದ ಎನ್.ಕರುಣಾಕರ, ಎನ್.ಆರ್.ರವಿಚಂದ್ರ ಇತರರಿದ್ದರು.
ಕಾಂಗ್ರೆಸ್ ಕಚೇರಿ:
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮುದಸೀರ್ ನವಾಜ್ ಇತರರಿದ್ದರು.
ಡಯಟ್:
ಡಯಟ್‌ನಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಧ್ವಜಾರೋಹಣ ನೆರವೇರಿಸಿದರು. ತಾಂತ್ರಿಕ ಸಹಾಯಕ ಕೆ.ಆರ್.ಲಿಂಗರಾಜು, ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶಪ್ಪ, ಈ.ಹಾಲಮೂರ್ತಿ, ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಎಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಎನ್.ರಾಘವೇಂದ್ರ, ಸಿ.ಎಸ್.ಲೀಲಾವತಿ, ಯು.ಸಿದ್ದೇಶಿ, ವಿ.ಕನಕಮ್ಮ, ಬಿ.ಎಸ್.ನಿತ್ಯಾನಂದ, ಎನ್.ಮಂಜುನಾಥ್ ಇತರರಿದ್ದರು.
ಎಸ್‌ಜೆಎಂ:
ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಾಚಾರ್ಯ ಡಾ.ಪಿ.ಬಿ.ಭರತ್, ವಿವಿಧ ಇಲಾಖೆ ಮುಖ್ಯಸ್ಥರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಕೆ.ಬಿ.ಸಿದ್ಧೇಶ್, ಡಾ.ಜೆ.ಎಂ.ಶ್ರೀಶೈಲ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ, ಡಾ.ಈ.ನಿರಂಜನ್ ಇತರರಿದ್ದರು.
ಜೆ.ಎನ್.ಕೋಟೆ:
ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ ಆಯುಷ್ ಆಯುರ್ವೇದ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಪಶು ಸಂಗೋಪನೆ ಇಲಾಖೆಯಿಂದ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು. ಆಯುಷ್ ವೈದ್ಯಾಧಿಕಾರಿ ವಿಜಯಲಕ್ಷ್ಮಿ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಅನ್ನಪೂರ್ಣ, ಗ್ರಾಪಂ ಸದಸ್ಯರಾದ ಎಸ್.ಶಿವಮೂರ್ತಿ, ಎಂ.ಶಿವಣ್ಣ, ಮುಖಂಡರಾದ ಗುರುಸಿದ್ಧಪ್ಪ, ತಿಪ್ಪೇಸ್ವಾಮಿ, ಗಿರಿಯಪ್ಪ, ಪಾಲಯ್ಯ, ಆಯುಷ್ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಇತರರಿದ್ದರು.
ಎಸ್‌ಜೆಎಂ ಪಾಲಿಟೆಕ್ನಿಕ್:
ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾತಂತ್ರ್ಯ ಮಹೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ಎಸ್.ವಿ.ರವಿಶಂಕರ್, ಪ್ರಾಧ್ಯಾಪಕ ಸಿ.ಜಿ.ರೇವಣಸಿದ್ದಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಮಮ್ತಾಜ್ ಬೇಗಂ, ಎಸ್.ಚನ್ನಕೇಶವ, ಮೋಹನ್, ಅಧೀಕ್ಷಕ ಸಿ.ಎನ್.ಮೋಹನ್ ಇತರರಿದ್ದರು.
ಭಾರತ್ ಸೇವಾದಳ ಕಚೇರಿ:
ಕಚೇರಿಯಲ್ಲಿ ಸೇವಾದಳದ ಜಿಲ್ಲಾ ಅಧ್ಯಕ್ಷ ಎಸ್.ಕೆ.ಬಸವರಾಜನ್ ಧ್ವಜಾರೋಹಣ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್, ಉಪಾಧ್ಯಕ್ಷ ಮಲಕಪ್ಪ, ಪದಾಧಿಕಾರಿಗಳಾದ ಭಾಗ್ಯಶೇಖರ್, ಡಾ.ಶಿವಣ್ಣ, ದಗ್ಗೆ ಶಿವಪ್ರಕಾಶ್, ಲಕ್ಷ್ಮಿಕಾಂತ್, ಗಣೇಶ್, ಮಲ್ಲಿಕಾರ್ಜುನಪ್ಪ, ಲವಕುಮಾರ್, ಹೇಮಾವತಿ, ಬಸವಣ್ಣೆಪ್ಪ ಪತ್ರಿ ಇತರರಿದ್ದರು.
ಚಳ್ಳಕೆರೆ ರಸ್ತೆಯ ಪದ್ಮಾವತಿ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲ ಟಿ.ವೆಂಕಟೇಶ್‌ರೆಡ್ಡಿ, ಉಪನ್ಯಾಸಕರಾದ ಯಾಕುಬ್, ಸುಷ್ಮಾ, ಕಲ್ಪನಾ, ಗಂಗಾ, ಸಹನಾ, ರೇವಣ್ಣ, ತೊಡರನಾಳ್ ವಿಜಯ್, ಶಶಿಕಲಾ, ಆಶಾ, ಗಂಗಮ್ಮ, ಶೇಷಪ್ಪ ಇತರರಿದ್ದರು.
ಎಚ್.ಡಿ.ಪುರ:
ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರ ಗ್ರಾಮದಲ್ಲಿ ಸ್ವಾತಂತ್ರೃ ದಿನಾಚರಣೆ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ದಿವಾಕರ್, ಎಸ್‌ಎಲ್‌ಎನ್ ಟ್ರಸ್ಟ್‌ನ ಅಧ್ಯಕ್ಷ ಎಚ್.ಡಿ.ರಂಗಯ್ಯ, ಎಸ್‌ಎಲ್‌ಎನ್‌ಆರ್‌ಎಚ್‌ಎಸ್ ಶಾಲೆಯ ಅಧ್ಯಕ್ಷ ಜಿ.ಎಸ್.ಯತೀಶ್, ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ, ಆರೋಗ್ಯ ಕೇಂದ್ರದ ಜ್ಯೋತಿ ಇತರರಿದ್ದರು.
ಅಮೃತಾಪುರ: ಹೊಳಲ್ಕೆರೆ ತಾಲೂಕಿನ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ, ಮುಖ್ಯಶಿಕ್ಷಕ ಡಿ.ಸಿದ್ಧಪ್ಪ, ಶಾಲಾ ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾ.ಪಂ.ಸದಸ್ಯರಾದ ಚಿತ್ರಲಿಂಗಪ್ಪ, ಸಹ ಶಿಕ್ಷಕರಾದ ಟಿ.ಪಿ.ಉಮೇಶ್, ರೇಷ್ಮಾ, ತಿಮ್ಮಕ್ಕ, ಶಾರದಮ್ಮ ಇತರರಿದ್ದರು.