ಜಿಲ್ಲೆಯ ಹಲವೆಡೆ ಸ್ವಾತಂತ್ರ್ಯ ಸಂಭ್ರಮ

4
Published on

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಮಂಗಳವಾರ ಸಡಗರದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳಲ್ಲಿ ಚಿಣ್ಣರು ಕಂಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇಶ ಭಕ್ತಿ ಮೂಡಿಸುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ವ್ಯಕ್ತವಾಯಿತು. ಒಟ್ಟಾರೆ ಸಂಭ್ರಮ ಜೋರಾಗಿತ್ತು.

ಮುರುಘಾ ಮಠದಲ್ಲಿ: ಶ್ರೀ ಬಸವಪ್ರಭು ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ವ್ಯವಸ್ಥಾಪಕ ಆರ್.ಲಿಂಗರಾಜು, ಪರಮೇಶ್ವರಸ್ವಾಮಿ, ತಿಪ್ಪೇಸ್ವಾಮಿ, ರವಿವರ್ಮ ಇತರರಿದ್ದರು.

ಬಿಜೆಪಿ ಕಚೇರಿ: ಜಿಲ್ಲಾಧ್ಯಕ್ಷ ಎ.ಮುರಳಿ ಧ್ವಜಾರೋಹಣ ನೆರವೇರಿಸಿದರು. ಎಂಎಲ್ಸಿ ಕೆ.ಎಸ್.ನವೀನ್, ಪದಾಧಿಕಾರಿಗಳಾದ ವೆಂಕಟೇಶ್ ಯಾದವ್, ನವೀನ್ ಚಾಲುಕ್ಯ, ಕಲ್ಲೇಶಯ್ಯ ಇತರರಿದ್ದರು.

ಮದಕರಿನಾಯಕ ವಿದ್ಯಾಸಂಸ್ಥೆ: ಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಧ್ವಜಾರೋಹಣ ನೆರವೇರಿಸಿದರು. ಆಡಳಿತಾಧಿಕಾರಿ ಎಸ್.ಸಾಗರ್, ಸಂಸ್ಥೆಯ ಕಾರ್ಯದರ್ಶಿ ವೈ.ಬಿ.ದಿವ್ಯಾ, ಸರಸ್ವತಿ, ಝಾನ್ಸಿಲಕ್ಷ್ಮಿ ಇತರರಿದ್ದರು.

ಮೇದಾರ ಗುರುಪೀಠದ ನವೀನ್ ಪ್ರೌಢಶಾಲೆ: ಶ್ರೀ ಇಮ್ಮಡಿ ಬಸವಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕ ಪ್ರಸನ್ನಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಭೀಮಣ್ಣರೆಡ್ಡಿ, ಮಾಲಿನಿ, ರಘು, ರಾಮಣ್ಣ, ಜಗದೀಶ್, ರಾಘವೇಂದ್ರ, ಬಸವರಾಜ್ ಇದ್ದರು.

ವಾರ್ತಾ ಇಲಾಖೆ: ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಧ್ವಜಾರೋಹಣ ನೇರವೇರಿಸಿದರು. ಸಿಬ್ಬಂದಿ ವೆಂಕಟೇಶ್, ವೇಣುಗೋಪಾಲ್, ಎಂ.ಜೆ.ಬೋರೇಶ್, ಚಂದ್ರಶೇಖರ್, ತಿಮ್ಮ್ಮಾಶೆಟ್ಟಿ, ಅಂಜನ್‌ಮೂರ್ತಿ, ಎನ್.ಕರುಣಾಕರ, ಎನ್.ಆರ್.ರವಿಚಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಬಿ.ಗೌಡಿಗೆರೆ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಪ್ರಹ್ಲಾದ್ ಇತರರಿದ್ದರು.

ಕಾಂಗ್ರೆಸ್ ಕಚೇರಿ:ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮುದಸೀರ್ ನವಾಜ್ ಇತರರಿದ್ದರು.

ಡಯಟ್: ಪ್ರಾಚಾರ್ಯ ಎಂ.ನಾಸಿರುದ್ದೀನ್ ಧ್ವಜಾರೋಹಣ ನೆರವೇರಿಸಿದರು. ತಾಂತ್ರಿಕ ಸಹಾಯಕ ಕೆ.ಆರ್.ಲಿಂಗರಾಜು, ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶಪ್ಪ, ಈ.ಹಾಲಮೂರ್ತಿ, ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಎಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಎನ್.ರಾಘವೇಂದ್ರ, ಸಿ.ಎಸ್.ಲೀಲಾವತಿ, ಯು.ಸಿದ್ದೇಶಿ, ವಿ.ಕನಕಮ್ಮ, ಬಿ.ಎಸ್.ನಿತ್ಯಾನಂದ, ಎನ್.ಮಂಜುನಾಥ್ ಇದ್ದರು.

ಎಸ್‌ಜೆಎಂ: ಪ್ರಾಚಾರ್ಯ ಡಾ.ಪಿ.ಬಿ.ಭರತ್, ವಿವಿಧ ಇಲಾಖೆ ಮುಖ್ಯಸ್ಥರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಕೆ.ಬಿ.ಸಿದ್ಧೇಶ್, ಡಾ.ಜೆ.ಎಂ.ಶ್ರೀಶೈಲ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ, ಡಾ.ಈ.ನಿರಂಜನ್ ಇದ್ದರು.

ಜೆ.ಎನ್.ಕೋಟೆ ಗ್ರಾಮ: ಆಯುಷ್ ವೈದ್ಯಾಧಿಕಾರಿ ವಿಜಯಲಕ್ಷ್ಮಿ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಅನ್ನಪೂರ್ಣ, ಗ್ರಾಪಂ ಸದಸ್ಯರಾದ ಎಸ್.ಶಿವಮೂರ್ತಿ, ಎಂ.ಶಿವಣ್ಣ, ಮುಖಂಡರಾದ ಗುರುಸಿದ್ದಪ್ಪ, ತಿಪ್ಪೇಸ್ವಾಮಿ, ಗಿರಿಯಪ್ಪ, ಪಾಲಯ್ಯ, ರವಿ ಕೆ.ಅಂಬೇಕರ್ ಇದ್ದರು.

ಎಸ್‌ಜೆಎಂ ಪಾಲಿಟೆಕ್ನಿಕ್: ಪ್ರಾಚಾರ್ಯ ಎಸ್.ವಿ.ರವಿಶಂಕರ್, ಪ್ರಾಧ್ಯಾಪಕ ಸಿ.ಜಿ.ರೇವಣಸಿದ್ದಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಮಮ್ತಾಜ್ ಬೇಗಂ, ಎಸ್.ಚನ್ನಕೇಶವ, ಮೋಹನ್, ಅಧೀಕ್ಷಕ ಸಿ.ಎನ್.ಮೋಹನ್ ಇದ್ದರು.

ಭಾರತ್ ಸೇವಾದಳ ಕಚೇರಿ: ಜಿಲ್ಲಾಧ್ಯಕ್ಷ ಎಸ್.ಕೆ.ಬಸವರಾಜನ್ ಧ್ವಜಾರೋಹಣ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್, ಉಪಾಧ್ಯಕ್ಷ ಮಲಕಪ್ಪ, ಪದಾಧಿಕಾರಿಗಳಾದ ಭಾಗ್ಯಶೇಖರ್, ಡಾ.ಶಿವಣ್ಣ, ದಗ್ಗೆ ಶಿವಪ್ರಕಾಶ್, ಲಕ್ಷ್ಮಿಕಾಂತ್, ಗಣೇಶ್, ಮಲ್ಲಿಕಾರ್ಜುನಪ್ಪ, ಲವಕುಮಾರ್, ಹೇಮಾವತಿ, ಬಸವಣ್ಣೆಪ್ಪ ಪತ್ರಿ ಇದ್ದರು.

ಪದ್ಮಾವತಿ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜ್: ಪ್ರಾಂಶುಪಾಲ ಟಿ.ವೆಂಕಟೇಶ್‌ರೆಡ್ಡಿ, ಉಪನ್ಯಾಸಕರಾದ ಯಾಕುಬ್, ಸುಷ್ಮಾ, ಕಲ್ಪನಾ, ಗಂಗಾ, ಸಹನಾ, ರೇವಣ್ಣ, ತೊಡರನಾಳ್ ವಿಜಯ್, ಶಶಿಕಲಾ, ಆಶಾ, ಗಂಗಮ್ಮ, ಶೇಷಪ್ಪ ಇದ್ದರು.

ಎಚ್.ಡಿ.ಪುರ: ಗ್ರಾಪಂ ಅಧ್ಯಕ್ಷ ದಿವಾಕರ್, ಎಸ್‌ಎಲ್‌ಎನ್ ಟ್ರಸ್ಟ್‌ನ ಅಧ್ಯಕ್ಷ ಎಚ್.ಡಿ.ರಂಗಯ್ಯ, ಎಸ್‌ಎಲ್‌ಎನ್‌ಆರ್‌ಎಚ್‌ಎಸ್ ಶಾಲೆಯ ಅಧ್ಯಕ್ಷ ಜಿ.ಎಸ್.ಯತೀಶ್, ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ, ಆರೋಗ್ಯ ಕೇಂದ್ರದ ಜ್ಯೋತಿ ಇತರರಿದ್ದರು.

ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆ: ಗ್ರಾಪಂ ಮಾಜಿ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ, ಮುಖ್ಯಶಿಕ್ಷಕ ಡಿ.ಸಿದ್ಧಪ್ಪ, ಶಾಲಾ ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾ.ಪಂ.ಸದಸ್ಯರಾದ ಚಿತ್ರಲಿಂಗಪ್ಪ, ಸಹ ಶಿಕ್ಷಕರಾದ ಟಿ.ಪಿ.ಉಮೇಶ್, ರೇಷ್ಮಾ, ತಿಮ್ಮಕ್ಕ, ಶಾರದಮ್ಮ ಇದ್ದರು.

ಹಿರಿಯೂರು ಕಾಂಗ್ರೆಸ್ ಕಚೇರಿ: ಬ್ಲಾಕ್ ಅಧ್ಯಕ್ಷ ಖಾದಿ ರಮೇಶ್, ಡಾ.ಜೆ.ಆರ್.ಸುಜಾತಾ, ಶಿವಕುಮಾರ್, ಜ್ಞಾನೇಶ್, ಈರಲಿಂಗೇಗೌಡ ಇದ್ದರು.
ಸಿರಿಗೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್ ಧ್ವಜಾರೋಣ ಮಾಡಿದರು. ಉಪಾಧ್ಯಕ್ಷರಾದ ಮಾದೇವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net