ಜಿಲ್ಲೆಯ ಹಲವೆಡೆ ನರಸಿಂಹ ಸ್ವಾಮಿ ಜಯಂತಿ

Lakshmi Narasimha Swamy
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.43039668, 0.42425013);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;
Published on

ಚಿತ್ರದುರ್ಗ: ಜಿಲ್ಲೆಯ ಹಲವು ದೇಗುಲಗಳಲ್ಲಿ ನರಸಿಂಹ ಸ್ವಾಮಿ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.

ನಗರದ ಹಳೆ ಮಾರುಕಟ್ಟೆ ತ್ಯಾಗರಾಜ ಬೀದಿಯಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದಲ್ಲಿ ಬೆಳಗ್ಗೆ 6.30ರ ನಂತರ ಸ್ವಾಮಿಯ ಮೂರ್ತಿಗೆ 48 ಲೀಟರ್‌ನಷ್ಟು ಪಂಚಾಮೃತ ಅಭಿಷೇಕ, ನರಸಿಂಹ ಪಾರಾಯಣ, ವಾಯುಸ್ತುತಿ, ಅಲಂಕಾರ ಸೇವೆ ನಡೆಯಿತು.

ಬೆಳಗ್ಗೆ 10.30ಕ್ಕೆ ಸ್ವಾಮಿಯ ಪಲ್ಲಕ್ಕಿ ಉತ್ಸವ, ನರಸಿಂಹ ಪ್ರವಚನ, ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ನೂರಾರು ಭಕ್ತರು ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net