ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತಾಯ ; ವಾಟಾಳ್ ನಾಗರಾಜ್ ಪ್ರತಿಭಟನೆ

23raju12
Published on



ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.


ನಗರದ ಜಿಲ್ಲಾಡಳಿತ ಭವನದ ಎದುರು ಜಿಲ್ಲೆ ಸಮಗ್ರ ಅಭಿವೃದ್ಧಿ ಆಗಲೇಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಳಿದ ಗಡಿಪ್ರದೇಶವಾದ ಜಿಲ್ಲೆಯಲ್ಲಿ ಒಂದು ಸಚಿವ ಸಂಪುಟ ಸಭೆ ಕರೆಯಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಚಿಂತನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.


ಜಿಲ್ಲೆಗೆ ಆಯವ್ಯಯದಲ್ಲಿ ನಯಾಪೈಸೆ ನೀಡಿಲ್ಲ. ಇದನ್ನು ಶಾಸನಸಭೆಯಲ್ಲಿ ಯಾರು ಕೇಳುವವರಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 27 ಜನ ಮೃತಪಟ್ಟರು. ಅದನ್ನು ಯಾರು ಕೇಳುವವರಿಲ್ಲ. ಆಸ್ಪತ್ರೆ ದಿಕ್ಕೆಟ್ಟು ಹೋಗಿದೆ. ಬಡವರ ಸ್ಥಿತಿ ಚಿಂತಾಜನಕವಾಗಿದೆಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಅಜಯ್, ಶಿವಲಿಂಗಮೂರ್ತಿ, ಚಾ.ರಂ.ಶ್ರೀನಿವಾಸಗೌಡ, ಪಾರ್ಥಸಾರಥಿ, ಬಿ.ವಿ.ರೇವಣ್ಣಸ್ವಾಮಿ, ನಿಜಧ್ವನಿ ಗೋವಿಂದರಾಜು, ವರದನಾಯಕ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net