ಜಿಲ್ಲೆಯ ವಿವಿಧೆಡೆ ರಕ್ಷಾಬಂಧನ ಆಚರಣೆ

Rakshabandhan
Published on

ಚಿತ್ರದುರ್ಗ: ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಬರುವ ರಕ್ಷಾ ಬಂಧನ ಹಬ್ಬವನ್ನು ಕೋಟೆನಗರಿ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ವಿಶೇಷವಾಗಿ ಆಚರಿಸಲಾಯಿತು.

ಪರಸ್ಪರ ಪ್ರೀತಿ, ಕಾಳಜಿ, ಜವಾಬ್ದಾರಿ, ಸಂಬಂಧ ಗಟ್ಟಿಗೊಳಿಸುವ ಈ ಹಬ್ಬದಲ್ಲಿ ಸಹೋದರಿಯರು ಸಹೋದರರನ್ನು ಮನೆ ದೇವರ ಮುಂಭಾಗ ಕೂರಿಸಿ ತಿಲಕವಿಟ್ಟು, ಆರತಿ ಬೆಳಗಿದ ನಂತರ ರಾಖಿ ಕಟ್ಟಿದರು. ಅನೇಕರು ಉಡುಗೊರೆಯನ್ನು ಕೂಡ ಪಡೆದುಕೊಂಡರು.

ಸಹೋದರನಿಗೆ ಏಳ್ಗೆಯಾಗಬೇಕು. ಅವರ ಇಷ್ಟಾರ್ಥಗಳೆಲ್ಲವನ್ನು ದೇವರು ದಯಪಾಲಿಸಬೇಕು ಎಂದು ಪ್ರಾರ್ಥಿಸಿಕೊಂಡರು. ನಗರದ ಪಾರ್ಶ್ವನಾಥ ವಿದ್ಯಾಸಂಸ್ಥೆ, ಭಾವಸಾರ ಕ್ಷತ್ರಿಯ ಸಮಾಜ ಮಹಿಳಾ ಮಂಡಳಿ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ರಕ್ಷಾ ಬಂಧನ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net