

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಸಹಿತ ಮಳೆಯಾಗಿದೆ. ಕುಶಾಲನಗರ ಹಾಗೂ ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ಜೋರು ಮಳೆಯಾಗಿದೆ. ಎರಡು ದಿನಗಳಿಂದ ಜಿಲ್ಲಾದ್ಯಂತ ಸೂರ್ಯನ ತಾಪ ಹೆಚ್ಚಾಗಿದ್ದು, ಬಿಸಿಲ ಬೇಗೆಯಿಂದ ಜನ ಬಳಲಿದ್ದರು. ಮಳೆ ಬಂದ ನಂತರ ಸ್ವಲ್ಪ ತಂಪಿನ ಅನುಭವ ಆಗುತ್ತಿದ್ದು, ಭಾರಿ ಮಳೆಯ ಕಾರಣ ಸಮೀಪದ ಕಗ್ಗೋಡ್ಲು ಭಗವತಿ ದೇವಸ್ಥಾನದ ಬಳಿ ದೊಡ್ಡ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಬಳಿಕ ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.