

ಬಳ್ಳಾರಿ : ಜಿಲ್ಲೆಯ ವಿವಿಧಡೆ ಸೋಮವಾರ ತಡರಾತ್ರಿ ಮಳೆಯಾಗಿದೆ. ನಗರವೂ ಸೇರಿ ಜಿಲ್ಲಾದ್ಯಂತ ಗುಡುಗು ಬಿರುಗಾಳಿ ಸಹಿತಿ ಮಳೆ ಸುರಿದ ಪರಿಣಾಮ ಹಳ್ಳ ಕೊಳ್ಳ ತುಂಬಿ ಹರಿದವು. ತಡರಾತ್ರಿ ಆರಂಭವಾದ ಮಳೆ ಬೆಳಗಿನಜಾವದವರೆಗೆ ಎಡಬಿಡದೆ ಸುರಿದ್ದರಿಂದ ಕೆಲ ಮನೆಗಳು ಕುಸಿತಗೊಂಡಿವೆ. ತಾಲೂಕಿನ ಗುಡುದೂರು, ಕೊರ‌್ಲಗುಂದಿ, ಮೋಕಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಭಸದ ಮಳೆ ಸುರಿದಿದ್ದು, ಭತ್ತದ ಗದ್ದೆಗಳು, ಮೆಣಸಿಕಾಯಿ ನಾಟಿ ಮಾಡಿದ ಜಮೀನುಗಳು ಜಲಾವೃತವಾಗಿವೆ. ಗುಡುಗು ಮಿಂಚು ಸಹಿತ ಮಿಂಚು ಅಬ್ಬರ ಮಳೆಯಿಂದಾಗಿ ನೂರರು ಎಕರೆ ಜಮೀನು ಜಲಾವೃತವಾಗಿವೆ. ಅಲ್ಲದೆ, ರಸ್ತೆಗಳ ಮೇಲೆ ನೀರು ಹರಿದು ಕೆಲ ಕಡೆ ಸಂಪರ್ಕ ಕಡಿತವಾಗಿದೆ. ಇನ್ನೂ, ರಸ್ತೆಗಳು ಹಾಳಾಗಿ, ಕೊಚ್ಚಿಕೊಂಡು ಹೋಗಿವೆ. ತಾಲೂಕಿನ ಚಾನಾಳ್ ಹಳ್ಳ ತುಂಬಿ ಹರಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿ ಸಾರ್ವಜನಿಕರಿಗೆ ಸಂಚಾರಿಸಲು ಪರದಾಡುವಂತೆಯಿತು.