ಜಿಲ್ಲೆಯ ರೌಡಿಶೀಟರ್ಸ್‌ಗೆ ಶಾಕ್ ನೀಡಿದ ಪೊಲೀಸರು

CTD SP RANJIT KUMAR BANDARU=----------
Published on

ಚಿತ್ರದುರ್ಗ: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿರುವ ರೌಡಿ ಶೀಟರ್ಸ್‌ ಮನೆಗಳಿಗೆ ಪೊಲೀಸರು ಬುಧವಾರ ರಾತ್ರಿ ಹಠಾತ್ ಭೇಟಿ ನೀಡಿದ ರೌಡಿ ಪಟ್ಟಿ ಯಲ್ಲಿರುವ ಅಸಾಮಿಗಳಿಗೆ ಶಾಕ್ ನೀಡಿದರು. ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ವಿಶೇಷ ಕಾರ‌್ಯಾಚರಣೆ ನಡೆಸಿದರು.

ಅವರ ಮನೆಗಳಲ್ಲಿ ತಪಾಸಣೆ ನಡೆಸಿದರು. ಏಕಾಏಕಿ ಮನೆ ಬಾಗಿಲಿಗೆ ಬಂದಂಥ ಪೊಲೀಸರನ್ನು ನೋಡಿ ವಿಚಲಿತರಾದ ಅಸಾಮಿಗಳಿಗೆ, ಇನ್ನು ಮುಂದೆ ಈ ರೀತಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ.

ಕಾನೂನುಬಾಹಿರ ಮತ್ತು ರೌಡಿಸಂ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಸಿಕೊಳ್ಳದಿರಿ ಎಂದು ಎಚ್ಚರಿಕೆ ನೀಡಿದರ‌್ಲಲದೇ, ಗೌರವದ ಜೀವನ ನಡೆಸುವಂತೆ ಸಲಹೆ ನೀಡಿದರು. ಜಿಲ್ಲೆಯ ಮೂರು ಡಿವೈಎಸ್‌ಪಿಗಳು 18 ರೌಡಿಗಳ ಮನೆ, ಸಿಪಿಐ ಮತ್ತು ಪಿಐಗಳು 70 ಹಾಗೂ ಪಿಎಸ್‌ಐ ಗಳು 142 ರೌಡಿಶೀಟರ್ಸ್‌ಗಳ ಮನೆಗಳಿಗೆ ಭೇಟಿ ತಿಳಿಸಿದ್ದಾರೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net