ಜಿಲ್ಲೆಯ ಮೂವರಿಗೆ ಭಾರಿ ಗೆಲುವು

2708klb11
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿದ್ದ ಸಂತೋಷ ಪಾಟೀಲ್ ಶ್ರೀನಿವಾಸ ಸರಡಗಿ, ರಾಜಶೇಖರ ಸೀರಿ, ಶಶಿಕಾಂತ ಪಾಟೀಲ್ ಗೆಲುವು ಸಾಧಿಸಿದ್ದಾರೆ.
ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ೨೭ ಸ್ಥಾನಕ್ಕೆ ಆ.೨೫ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತದಾನ ನಡೆದಿತ್ತು. ೩೧ ಜಿಲ್ಲೆಯ ೩೧,೧೪೫ ಮತಗಳಲ್ಲಿ ೧೮,೦೧೬ ಮತ ಚಲಾವಣೆ ಆಗಿದ್ದವು. ಶಶಿಕಾಂತ ಪಾಟೀಲ್ ೧೧,೪೮೨, ಸಂತೋಷ ಪಾಟೀಲ್ ೧೧,೩೨೧, ರಾಜಶೇಖರ ಸಿರಿ ೧೧,೧೭೨ ಮತ ಪಡೆದು, ಜಯ ಸಾಧಿಸಿದರು.
ಗೆಲುವಿನ ಹಿನ್ನೆಲೆ ಮಹಾಸಭೆ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ಜಗತ್ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.
ನಾಗಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ಖೇಮಜಿ, ಶಿವಾನಂದ ಪಾಟೀಲ್ ಮರತೂರ, ವೈಜನಾಥ ತಡಕಲ್, ಭೀಮಾಶಂಕರ ಮೇಟೆಕಾರ, ಶಾಂತಕುಮಾರ ದುಧನಿ, ಉದಯಕುಮಾರ ಜೇವರ್ಗಿ, ಜ್ಯೋತಿ ಮರಗೋಳ, ರಾಜಕುಮಾರ ಪಾಟೀಲ್, ಆನಂದ ಪಾಟೀಲ್, ರವಿಕುಮಾರ ಪಾಟೀಲ್, ಈರಣಗೌಡ, ಶರಣಗೌಡ ಪಾಟೀಲ್, ಸಿದ್ದು ಬಾಳಿ, ನೀಲಕಂಠ ಪಾಟೀಲ್, ಸಂಗನಗೌಡ ಗುಳ್ಯಾಳ, ನೀಲಕಂಟ ಅವಂಟಿ, ಮಲ್ಲಣಗೌಡ ನೇದಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net