ಜಿಲ್ಲೆಯ ಮುಂದುವರೆದ ಮಳೆ ಜನಜೀವನ ಅಸ್ತವ್ಯಸ್ತ

ಜಿಲ್ಲೆಯ ಮುಂದುವರೆದ ಮಳೆ ಜನಜೀವನ ಅಸ್ತವ್ಯಸ್ತ
Published on

ಹಾಸನ: ಜಿಲ್ಲೆಯ ವಿವಿಧೆಡೆ ಭಾನುವಾರವು ಮಳೆ ಮುಂದುವರೆದಿದ್ದು, ಸಕಲೇಶಪುರ, ಆಲೂರು, ಹಾಸನ ಸೇರಿದಂತೆ ಇತರೆ ಹಲವುಕಡೆ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬೆಳಗ್ಗೆಯಿಂದಲೂ ಕೂಡ ಮೋಡ ಮುಸುಕಿನ ವಾತಾವರಣವಿದ್ದು,ಮಧ್ಯಾಹ್ನ ಮಳೆಯಿಂದ ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅರ್ಧ ಗಂಟೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಎಡೆಬಿಡದೆ ವರ್ಷಧಾರೆ ಸುರಿಯುತ್ತು.
ಜಿಲ್ಲೆಯಲ್ಲಿ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಮಲೆನಾಡು ಭಾಗದಲ್ಲಿ ಮತ್ತೆ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರೆ, ಮಳೆ ಕೊರತೆಯಿಂದ ಬೆಳೆ ಒಣಗಿ ಕಂಗಾಲಾಗಿದ್ದ ಅರೆಮಲೆನಾಡು ಭಾಗದ ರೈತರು ಉತ್ತಮ ಮಳೆಯಾಗುತ್ತಿರುವುದರಿಂದ ಸಂತಸಗೊಂಡಿದ್ದಾರೆ.
ಇನ್ನೂ ಮೂರ್ನಾಲ್ಕು ದಿನ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net