

ಹಾಸನ: ಜಿಲ್ಲೆಯಲ್ಲಿ ಬಿ.ಎಸ್.ಪಿ ಪಕ್ಷ ಸದೃಢವಾಗಿದ್ದು, ಇದನ್ನು ಸಹಿಸಿಕೊಳ್ಳದೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಪಕ್ಷದ ಮೇಲೆ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬೇಲೂರು ಕ್ಷೇತ್ರದ ಅಭ್ಯರ್ಥಿ ಗಂಗಾಧರ್ ಬಹುಜನ್ ಆರೋಪಿಸಿದರು
ಜಿಲ್ಲೆಯಲ್ಲಿ ಮೂರು ಪಕ್ಷಗಳು ಕೂಡ ಹಣಬಲ ಮತ್ತು ತೋರಬಲದಿಂದ ಚುನಾವಣೆ ಮಾಡುತ್ತಿದ್ದಾರೆ. ಇದಲ್ಲದೆ ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಿ ಪ್ರಜಾಪ್ರಭುತ್ವದಲ್ಲಿ ಮಾರಕವಾದಂತ ಚುನಾವಣೆ ನಡೆಸುತ್ತಿದ್ದಾರೆ. ಕೇವಲ ಹಣ, ಹೆಂಡದ ಮೂಲಕ ಮತದಾರರನ್ನು ಖರೀದಿಸುವ ಭರಾಟೆ ಬಲು ಜೋರಾಗಿ ನಡೆಯುತ್ತಿದೆ ಸುದ್ದಿಗೋಷ್ಠೀಯಲ್ಲಿ ದೂರಿದರು.
ಸೋಲಿನ ಭಯದಿಂದ ವಿರೋಗಳು ಕೆಲವು ಪಕ್ಷಗಳೊಂದಿಗೆ ಪಿಎಸ್‌ಪಿ ಅಭ್ಯರ್ಥಿಗಳು ರಾಜಿ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಅಪಪ್ರಚಾರ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೆ ಅವಕಾಶ ನೀಡಬಾರದು. ಈ ಪಕ್ಷಗಳು ಜನತೆಗೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ ನೀಡುತ್ತಿವೆ. ಮುಗ್ದ ಮತದಾರರಿಗೆ ಹಲವು ಆಮಿಷೆಗಳನ್ನು ಒಡ್ಡಿ ಅಡ್ಡದಾರಿಯಲ್ಲಿ ಅಕಾರಕ್ಕೆ ಬರಲು ಹವಣಿಸುತ್ತಿವೆ. ಇಂತಹ ಪ್ರಜಾಪ್ರಭುತ್ವದ ವಿರೋಗಳನ್ನು ದೂರವಿಡಲು ಜಿಲ್ಲೆಯ ಪ್ರಜ್ಞಾವಂತ ಮತದಾರರು ಈ ಬಾರಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಅರಕಲಗೂಡು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಅತ್ನಿ ಹರೀಶ್ ಮಾತನಾಡಿ, ನಾವು ತತ್ವ-ಸಿದ್ಧಾಂತ ಇಟ್ಟುಕೊಂಡು ಹಲವು ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳ ಮುಖಂಡರು ನಮಗೆ ಬೆಂಬಲಿಸುವಂತೆ ಕೇಳಿದ್ದು ಸತ್ಯ.ಆದರೆ, ಅವರಿಗೆ ಬೆಂಬಲ ಕೊಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನೆ. ನಮ್ಮ ಬಳಿ ಇರುವವರು ನಿಷ್ಠಾವಂತ ಕಾರ್ಯಕರ್ತರು. ಬೆಳಗ್ಗೆ ಅವರ ಮನೆಯಿಂದಲೇ ಉಪಹಾರ ತಿಂದು ಬರುತ್ತಾರೆ. ಮಧ್ಯಾಹ್ನ ಹೇಗೊ ಕಷ್ಟಪಟ್ಟು ಹಣ ಹೊಂದಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮಲ್ಲಿ ಕರಪತ್ರಗಳ ಮುದ್ರಣಕ್ಕೂ ಹಣ ಹೊಂದಿಸುವುದು ಕಷ್ಟವಾಗಿದೆ. ಹೇಗೊ ಅಭಿಮಾನಿಗಳು ಮತ್ತು ವ್ಯಾಪ್ತಿಯ ಜನರ ಬೆಂಬಲದಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಬಿಎಸ್‌ಪಿ ಸಕಲೇಶಪುರದ ಅಭ್ಯರ್ಥಿ ಶಿವಮ್ಮ, ಮುಖಂಡರಾದ ಸುರೇಂದ್ರ ಹಾಗೂ ಮನುಕುಮಾರ್ ಇತರರು ಹಾಜರಿದ್ದರು.