ಜಿಲ್ಲೆಯ ಗಡಿಯಲ್ಲಿ ಬಿಗಿ ಬಂದೋಬಸ್ತ್

23HLY-1(A)
Published on

ಹಳಿಯಾಳ: ನೆರೆಯ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕರೊನಾ ಸೋಂಕಿತರು ಇರುವುದರಿಂದ ಉತ್ತರ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕಲಘಟಗಿ ತಾಲೂಕಿನ ಅಂಚಿನಲ್ಲಿರುವ ಕಾವಲವಾಡ ಗ್ರಾಮದ ಬಳಿ, ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮಾವಿನಕೊಪ್ಪ ಬಳಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅಳ್ನಾವರ ತಾಲೂಕಿನ ಗಡಿಯ ಬಳಿಯಿರುವ ಅರ್ಲವಾಡ ಕ್ರಾಸ್​ನ ಚೆಕ್ ಪೋಸ್ಟ್​ನಲ್ಲಿ ಪರಿಶೀಲನೆಯನ್ನು ಬಿಗಿ ಮಾಡಿದ್ದಾರೆ. ಹಳಿಯಾಳ ತಾಲೂಕಿಗೆ ಸಂಪರ್ಕ ಕಲ್ಪಿಸುವಂತಹ ಎಲ್ಲ ಕವಲು ದಾರಿಗಳನ್ನು, ಕಳ್ಳ ಮಾರ್ಗಗಳನ್ನು ಕಾಲುದಾರಿಗಳನ್ನು ಮುಚ್ಚಲಾಗಿದೆ.

ಪೊಲೀಸ್, ಅರಣ್ಯ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ತಂಡವು ಈ ಚೆಕ್ ಪೋಸ್ಟ್​ಗಳಲ್ಲಿ ಸರದಿಯಲ್ಲಿ ಕಾವಲು ಕಾಯುತ್ತಿದೆ. ಅಳ್ನಾವರದಿಂದ ಹಳಿಯಾಳಕ್ಕೆ ಬರಲು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಅರಣ್ಯ, ತಟ್ಟಿಹಳ್ಳ ಮಾರ್ಗವಾಗಿ ಸಾಕಷ್ಟು ಕಳ್ಳ ರಸ್ತೆಗಳಿದ್ದು, ಅವುಗಳ ಮೂಲಕ ಬೆಳಗಾವಿ,ಧಾರವಾಡದಿಂದ ಆಗಮಿಸುವ ಬೈಕ್ ಸವಾರರು ಹಳಿಯಾಳ ತಾಲೂಕಿನಲ್ಲಿ ನುಸಳಲಾರಂಭಿಸಿದ್ದರಿಂದ ಈ ಮಾರ್ಗಗಳನ್ನು ಮುಚ್ಚಲು ಯೋಜಿಸಲಾಗುತ್ತಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net