ಜಿಲ್ಲೆಯ ಇಬ್ಬರು ಶಾಸಕರಿಗೆ ನಿಗಮ,ಮಂಡಳಿ ಭಾಗ್ಯ

ctd 0001
Published on

ಚಿತ್ರದುರ್ಗ:ಜಿಲ್ಲೆಯ ಇಬ್ಬರು ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ದೊರಕಿದೆ. ಹಿರಿಯ ಶಾಸಕ ಹೊಸದುರ್ಗದ ಬಿ.ಜಿ.ಗೋವಿ ಂದಪ್ಪ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರನ್ನಾಗಿ ಹಾಗೂ ಚಳ್ಳಕೆರೆಯ ಶಾಸಕ ಟಿ.ರಘುಮೂರ್ತಿ ಅವ ರನ್ನು ರಾಜ್ಯ ಕೈಗಾರಿಕೆ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಮೂರು ಬಾರಿ ಸತತವಾಗಿ ಗೆದ್ದಿರುವ ರಘುಮೂರ್ತಿ ಅವರು ಕಳೆದ ವಿಧಾನಸಭಾ ಅವಧಿ,ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿದ್ದರು. ಆದರೆ ಈ ಬಾರಿ ಅವರು ತಮ್ಮನ್ನು ಯಾವುದೇ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಾರದೆಂದು ಕೋರಿ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದರು. ನಿಗಮ-ಮಂಡಳಿಗೆ ನೇಮಕ ಸುದ್ದಿ ತಿಳಿದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಇಬ್ಬರು ಶಾಸಕರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net