ಜಿಲ್ಲೆಯ 8 ಗ್ರಾ. ಪಂ.ಗಳಿಗೆ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ

ಜಿಲ್ಲೆಯ 8 ಗ್ರಾ. ಪಂ.ಗಳಿಗೆ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ
Published on

ಹಾಸನ: ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ಜಿಲ್ಲೆಯ 8 ಗ್ರಾಮ ಪಂಚಾಯಿತಿಗಳನ್ನು 2023-24ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಪುರಸ್ಕಾರಕ್ಕೆ ತಾಲೂಕಿಗೆ ಒಂದು ಗ್ರಾಮ ಪಂಚಾಯಿತಿಯಂತೆ ಆಯ್ಕೆ ಮಾಡಲಾಗಿದ್ದು, ಅದರಂತೆ ಹಾಸನ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ, ಬೇಲೂರು ತಾಲೂಕಿನ ಇಬ್ಬೀಡು, ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ, ಹೊಳೆನರಸೀಪುರ ತಾಲೂಕಿನ ಕಟ್ಟಿಬೆಳಗುಲಿ, ಸಕಲೇಶಪುರ ತಾಲೂಕಿನ ಹಾನುಬಾಳು, ಆಲೂರು ತಾಲೂಕಿನ ಹಂಚೂರು, ಅರಕಲಗೂಡು ತಾಲೂಕಿನ ಕಾಳೇನಹಳ್ಳಿ, ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮ ಪಂಚಾಯಿತಿಗಳಿಗೆ ಗಾಂಧಿಗ್ರಾಮ ಪುರಸ್ಕಾರ ದೊರೆತಿದೆ.
ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲೆಂದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಧಿಕಾರಿಗಳ ಶಿಫಾರಸ್ಸನ್ನು ಜಿಲ್ಲಾ ಪರಿಶೀಲನಾ ಮತ್ತು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ಆಯ್ಕೆಗೊಳಿಸಲಾಗಿದೆ. ಬೇಲೂರು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ 442 ಅಂಕಗಳನ್ನು ಪಡೆದುಕೊಂಡಿದೆ. ಈ ಗ್ರಾಮ ಪಂಚಾಯಿತಿ 2022-23ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿತ್ತು, ಈ ಬಾರಿ ಪುನರ್ ಆಯ್ಕೆ ಆಗಿದೆ. ಅದೇ ರೀತಿ ಹಾಸನ ನಿಟ್ಟೂರು 395 ಅಂಕ ಪಡೆದುಕೊಂಡು ಮರು ಆಯ್ಕೆಯಾಗಿದೆ. ಉಳಿದಂತೆ ಕಲ್ಕೆರೆ 320, ಕಟ್ಟಿಬೆಳಗುಲಿ 256, ಹಾನುಬಾಳು 416, ಹಂಚೂರು- 362, ಕಾಳೇನಹಳ್ಳಿ- 271, ಜಾವಗಲ್ ಗ್ರಾಮ ಪಂಚಾಯಿತಿ 338 ಅಂಕ ಪಡೆದುಕೊಂಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net