ಜಿಲ್ಲೆಯ 23740 ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆಗೆ ಕ್ರಮ

captain dr k rajendra
Published on

ಬಾಗಲಕೋಟೆ: ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಹಾಗೂ ಸಾರ್ವಜನಿಕ ವಿತರಣಾ ಪದ್ದತಿ ಅಡಿಯಲ್ಲಿ ಒಳಪಡದ ಕಾರ್ಮಿಕರಿಗೆ ಆತ್ಮ ನಿರ್ಭಯ ಯೋಜನೆಯಡಿ ಜಿಲ್ಲೆಯಲ್ಲಿರುವ 23740 ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

ಮೇ ಮತ್ತು ಜೂನ್ ಎರಡು ಮಾಹೆಗಳಿಗೆ ಪ್ರತಿ ಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲು ಆದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಈ ವಿಶೇಷ ಯೋಜನೆಯ ಅಕ್ಕಿಯನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವಧಿಯೊಳಗಾಗಿ ಬಳಕೆ ಮಾಡುವ ಕುರಿತು ಆದೇಶಿಸಿದ್ದು, ಆಹಾರಧಾನ್ಯ ವಿತರಣೆಗೆ ಮರು ಹಂಚಿಕೆ ಮಾಡಲಾಗಿರುತ್ತದೆ. ಈ ಯೋಜನೆಯಡಿ ಬರುವ ಲಾನುಭವಿಗಳ ಆಧಾರ ಸಂಖ್ಯೆಯನ್ನು ಪಡೆದು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಪ್ರತಿ ಆಧಾರ ಸಂಖ್ಯೆಯ ಮುಖಾಂತರ ಪರಿಶೀಲಿಸ ಅವರ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ನಂತರ ಸದರಿ ಓಟಿಪಿಯನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಮೇ ಮಾಹೆಯ ಪಡಿತರವನ್ನು ಮೇ 31 ವರೆಗೂ ವಿತರಿಸಬೇಕು. ಜೂನ್ ತಿಂಗಳ ಪಡಿತರವನ್ನು ಜೂನ್ 1 ರಿಂದ 10 ವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಬೇಕು. ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ. ವಲಸೆ ಕಾರ್ಮಿಕರು ಸ್ವಂತ ಮನೆ ಹೊಂದಿರತಕ್ಕದಲ್ಲ. ಆದಾಯ ತೆರಿಗೆ ಪಾವತಿಸದೇ ಇರುವವರು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪಡಿತರ ವಿತರಣೆಯ ನ್ಯಾಯಬೆಲೆ ಅಂಗಡಿ ವಿವರ
ವಲಸೆ ಕಾರ್ಮಿಕರು ಈ ಕೆಳಕೆ ತಿಳಿಸಿದ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯ ಪಡೆಯಬಹುದಾಗಿದೆ. ನ್ಯಾಯಬೆಲೆ ಅಂಗಡಿಗಳ ವಿವರ ಇಂತಿದೆ. ಬಾಗಲಕೋಟೆ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (8884508686), ಬಿ.ಎಂ.ಕೋಟಿ, ನವನಗರ (9591504972), ಜನತಾ ಭಜಾರ, ನವನಗರ (9886217199), ಬಾದಾಮಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಬಾದಾಮಿ (9483852571), ಕಂಜುಮರ್ಸ ಕೋ.ಆ.ಸೊ ಗುಳೇದಗುಡ್ಡ (8050379534), ಪಿ.ಕೆ.ಪಿ.ಎಸ್ ಕೆರೂರ (9739080665), ಎಲ್.ಬಿ.ನಾಯ್ಕರ, ಕುಳಗೇರಿ (9902004385), ಬೀಳಗಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಬೀಳಗಿ (7019682890).
ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655), ಶಾಖಾಂಬರಿ ಕಂ.ಕೋ.ಆ.ಸೋ ಇಳಕಲ್ಲ (9972696150), ಎಸ್.ಎಸ್.ಕಣ್ಣೂರ, ಅಮೀನಗಡ (9880663777), ಶಾಖಾಂಬರಿ ಕೋ.ಆ.ಸೋ, ಕಮತಗಿ (9986262884), ಜಮಖಂಡಿ ತಾಲೂಕಿನ ಎಂ.ಆರ್.ವಾಣಿ ಜಮಖಂಡಿ (9036908875), ದಿ ನೇಕಾರ ಸೋ, ಬನಹಟ್ಟಿ (7795399681), ಟಿ.ಎ.ಪಿ.ಸಿ.ಎಂ.ಎಸ್ ತೇರದಾಳ (9901279627), ಉಮಾದೇವಿ ದಯಾಳ, ಸಾವಳಗಿ (9164786744), ಮುಧೋಳ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಮುಧೋಳ (8197917500), ಚನ್ನಗಿರೇಶ್ವರ ಸೋ, ಮಹಾಲಿಂಗಪುರ (7019709925), ಪ್ರಭು ಬೋಳಿಶೆಟ್ಟಿ, ಲೋಕಾಪುರ (9902743218).

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net