ಜಿಲ್ಲೆಗೆ ಮಾಡಿದ ದ್ರೋಹ

Siddaveerappa
Published on

ಚಿತ್ರದುರ್ಗ: ಸಮಗ್ರ ನೀರಾವರಿಯಾಗದೆ ಜಿಲ್ಲೆ ಅಭಿವೃದ್ಧಿ ಆಗದು. ಆದರೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಮೀಸಲಿರಿಸಿ ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡುವ ಕಾಳಜಿ ಅಧಿಕಾರದಲ್ಲಿ ಇರುವವರಿಗೆ ಇಲ್ಲದಂತಾಗಿದೆ. ಚಿತ್ರದುರ್ಗವನ್ನು ಸಿಎಂ ಸಿದ್ದರಾಮಯ್ಯ ಕಡೆಗಣಿಸಿದ್ದಾರೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ದೂರಿದರು.

ಕೇಂದ್ರ ನಂಬಿಕೊಂಡು ಯೋಜನೆ ರೂಪಿಸಿಲ್ಲ. ಕನಿಷ್ಠ 1 ಸಾವಿರ ಅಥವಾ 500 ಕೋಟಿ ರೂ. ಮೀಸಲಿಡಲು ಮುಂದಾಗಿಲ್ಲ. ಇದಕ್ಕಾಗಿ ನಿಗದಿಪಡಿಸಿದ್ದ ಅನುದಾನವನ್ನು ಬೇರೆ ಯೋಜನೆಗೆ ಬಳಸಲಾಗಿದೆ. ಇದರಿಂದಾಗಿ ತಡವಾಗುತ್ತಿದೆ. 4 ದಶಕಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. 13 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಬೆಲೆ ಕೊಡದೆ, ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಈ ಬಜೆಟ್‌ನಿಂದ ಜಿಲ್ಲೆಗೆ ಯಾವ ಪ್ರಯೋಜನವಿಲ್ಲ. ಇದೊಂದು ಜನವಿರೋಧಿ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net