ಜಿಲ್ಲೆಗೆ ಪಿಜಿ ಸೆಂಟರ್ ಮಂಜೂರು ಮಾಡುವೆ

Published on

ಯಾದಗಿರಿ: ನಾನು ಆಯ್ಕೆಯಾದರೆ ಯಾದಗಿರಿ ಜಿಲ್ಲೆಗೊಂದು ಗುಲಬರ್ಗ ವಿವಿ ಅಥವಾ ರಾಯಚೂರು ವಿವಿಯಿಂದ ಪಿ.ಜಿ.ಸೆಂಟರ್ ಮಂಜೂರು ಮಾಡಿಸುವುದಾಗಿ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ಭರವಸೆ ನೀಡಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಾಗಿ ೧೩ ವರ್ಷವಾದರೂ ಇಲ್ಲೊಂದು ಪಿಜಿ ಸೆಂಟರ್ ಮಾಡಲು ಪದವೀಧರ ಕ್ಷೇತ್ರದಿಂದ ಸದಸ್ಯರು ಮನಸ್ಸು ಮಾಡದಿರುವುದು ನಾಚಿಕೆಗೇಡು ಎಂದರು. ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ತಯಾರಿಗೆ ಈ ಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸರ್ಕಾರದಿಂದಲೇ ಕೊಚಿಂಗ್ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡುವುದಾಗಿ ಹೇಳಿದರು. ನಾನು ನಾಲ್ಕು ಬಾರಿ ಕ್ಷೇತ್ರವನ್ನು ಸುತ್ತಾಡಿ ಮತದಾರರನ್ನು ಭೇಟಿ ಮಾಡಿದ್ದೇನೆ. ಎಲ್ಲಡೆ ಉತ್ತಮ ಸ್ಪಂದನೆ ಇದ್ದು, ಈ ಕಾರಣಕ್ಕಾಗಿ ತಾವು ಗೆಲ್ಲುವ ವಿಶ್ವಾಸ ಹೊಂದಿದ್ದಾಗಿ ಪ್ರತಾಪರೆಡ್ಡಿ ಹೇಳಿದರು.


ಕಾಂಗ್ರೆಸ್ ಅಭ್ಯರ್ಥಿ ಕಳೆದ ಆರು ವರ್ಷಗಳಲ್ಲಿ ಹುಮನಾಬಾದ್ ಬಿಟ್ಟು ಕದಲಲೇ ಇಲ್ಲ. ತಮ್ಮ ಸ್ವಂತ ಜಿಲ್ಲೆಯಲ್ಲು ತಿರುಗಾಡಿ ಪದವೀಧರ ಸಮಸ್ಯೆಗೆ ಸ್ಪಂಧಿಸಿಲ್ಲ. ಇನ್ನೂ ಬೇರೆ ಜಿಲ್ಗಲೆಳಿಗೆ ಭೇಟಿ ಕೊಡುವುದು ದೂರದ ಮಾತು.

ಬಿಜೆಪಿ ಅಭ್ಯರ್ಥಿ ಕೆಲಸಕ್ಕಿಂತ ಮಾತೆ ಜಾಸ್ತಿ ಆಡುತ್ತಾರೆ. ಹಿಂದೆ ಅವರಿಗೂ ಪದವೀಧರರು ಅಧಿಕಾರ ನೀಡಿದ್ದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಾಕ್ಷರು ಆಗಿದ್ದರು. ಶಿಕ್ಕಷರ ನೇಮಕಾತಿ ಸೇರಿ ಯಾವುದೆ ಕೆಲಸ ಸಮರ್ಪಕವಾಗಿ ಮಾಡಲೇ ಇಲ್ಲ. ನನಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿ ಕೈಕೊಟ್ಟಿದ್ದಾರೆ ಎಂದು ಆರೋಪಿಸಿದರು. ಡಾ.ಸಿದ್ದರಾಜï ರೆಡ್ಡಿ, ಶಾಂತರೆಡ್ಡಿ ಚೌಧರಿ ಮುದನೂರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net