ಜಿಲ್ಲೆ ಜನರ ಸಮಸ್ಯೆಗೆ ಸ್ಪಂದಿಸುವೆ

ydg02
Published on

ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕು ಸಮಸ್ಯೆಗಳಿಗೆ ಮತ್ತು ಕೇಂದ್ರದಿAದ ಸಿಗಬಹುದಾದ ಯೋಜನೆಗಳನ್ನು ಪ್ರಾಮಾಣಿಕವಾಗಿ ತರಲು ಪ್ರಯತ್ನಿಸುವುದಾಗಿ ಸಂಸದ ಕುಮಾರ ನಾಯಕ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ತಮ್ಮ ಕಚೇರಿಗೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಜನರ ಸಂಪರ್ಕಕ್ಕೆ ಕಚೇರಿ ಆರಂಭಿಸಲಾಗಿದೆ. ಕೂಡಲೇ ಬೇಕಾದ ಸಿಬ್ಬಂದಿ ನೇಮಕ ಮಾಡಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದರು.

ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಜಿ¯್ಲÁ ಕಾಂಗ್ರೆಸ್ ಅಧ್ಯP್ಷÀ ಬಸರೆಡ್ಡಿ ಪಾಟೀಲ್ ಅನಪೂರ ಜತೆ ಜಿಲ್ಲೆಯ ಬೇಡಿಕೆ ಮತ್ತು ಸಮಸ್ಯೆ ಕುರಿತು ಸಂಸದರು ಚರ್ಚಿಸಿದರು. ಕಾಂಗ್ರೆಸ್ ಮುಖಂಡರಾದ ಡಾ.ಭೀಮಣ್ಣ ಮೇಟಿ, ಭೀಮರಾಯ ಠಾಣಗುಂದಿ, ಸುದರ್ಶನ ನಾಯಕ, ಜಿ¯್ಲÁ ಕುರುಬ ಸಮಾಜದ ಅಧ್ಯP್ಷÀ ಮಲ್ಲಣ್ಣ ಐಕೂರ, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯP್ಷÀ ಲಚಮರೆಡ್ಡಿ, ನಗರ ಕಾಂಗ್ರೆಸ್ ಅಧ್ಯP್ಷÀ ಮಲ್ಲಿಕಾರ್ಜುನ ಈಟಿ, ನಿಜಗುಣ ದೋರನಹಳ್ಳಿ, ಭೀಮಾಶಂಕರ, ರಾಜಾ ಮೈನೋದ್ದೀನ್, ಮಾಳಿಂಗರಾಯ, ಪರಶುರಾಮ, ಸಾಬಣ್ಣ ಕ್ಯಾತನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net