

ಚಿತ್ರದುರ್ಗ: ಜಲ್‌ಜೀವನ್ ಮಿಷನ್ ಯೋಜನೆ ಘೋಷಣೆ ಮೊದಲು ದೇಶದ ಅಂದಾಜು 19.33 ಗ್ರಾಮೀಣ ಮನೆಗಳ ಪೈಕಿ,3.23 ಕೋಟಿ ಮ ನೆಗಳಿಗೆ ನಲ್ಲಿ ನೀರಿನ ಸಂಪರ್ಕವಿದ್ದು,ಉಳಿದ 16.09 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿತ್ತು ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಜಿಪಂದಲ್ಲಿ ಗುರುವಾರ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು,ಯೋಜನೆ ಆರಂಭವಾದ ಬ ಳಿಕ 15.16 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜರಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 1685 ಜನ ವಸತಿ,ಅಂದಾ ಜು 19 ಲಕ್ಷ ಜನಸಂಖ್ಯೆ ಇದ್ದು,ಜಿಲ್ಲೆ ಎಲ್ಲ ಜನವಸತಿಗಳಿಗೆ ಇನ್ನೊಂದು ವರ್ಷದೊಳಗಾಗಿ ಜೆಜೆಎಂ ಶುದ್ಧ ನೀರು ಒದಗಿಸ ಲಾಗುವುದು ಎಂದರು.
ಜಿಲ್ಲೆಯಲ್ಲಿ 2800 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಹಾಗೂ 941 ಕೋಟಿ ರೂ.ವೆಚ್ಚದ ಜೆಜೆಎಂ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಜೆಜೆಎಂಯಡಿ ಕೆಲವು ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಪ್ರಸ್ತುತ ಕೊಳವೆಬಾವಿಗಳನ್ನು ನೀರಿ ನ ಮೂಲವಾಗಿ ಅಂದಾಜುಪಟ್ಟಿ ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಜೆಜೆಎಂಗೆ ಯಾವುದೇ ಕಾರಣಕ್ಕೂ ಕೊಳವೆಬಾವಿಗಳನ್ನು ನೀರಿನ ಮೂಲವನ್ನಾಗಿ ನೀವು ಆಯ್ಕೆ ಮಾಡಿಕೊಳ್ಳಬೇಡಿ,ಕೊಳವೆಬಾವಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ,ಚಿತ್ರದುರ್ಗ ಬರಪೀಡಿತ ಹಾಗೂ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆ,ಕೊಳವೆ ಬಾವಿಗಳು ಶಾಶ್ವತ ಪರಿ ಹಾರವಲ್ಲ,ಇದರ ಬದಲಾಗಿ ನೀವು ಮೇಲ್ಮೈ ನೀರಿನ ಮೂಲವನ್ನೇ ಆಶ್ರಯಿಸಬೇಕೆಂದು ಸೂಚಿಸಿದರು.
ಪಾವಗಡ ತಾಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತುಂಗ ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀ ರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ಜಿಲ್ಲೆ ಮೊಳಕಾಲ್ಮೂರು,ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ 560 ಹಳ್ಳಿಗಳಿಗೆ ನೀರು ಸರಬರಾಜಾಗಲಿದೆ, ಹೊಳಲ್ಕೆರೆ ತಾಲೂಕಿನ 215 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ದಿಂದ ನೀರು ಸರಬರಾಜಾಗುತ್ತದೆ,ಈಗಾಗಲೇ ಸಿರಿಗೆರೆ ಭರಮಸಾಗರ ಹಾಗೂ 45 ಹಳ್ಳಿಗಳಿಗೆ ಶಾಂತಿಸಾಗರ ನೀರಿನ ಮೂಲದಿಂದ ನೀ ರು ಸರಬರಾಜಾಗುತ್ತಿದೆ ಎಂದರು.
ಭರಮಸಾಗರದ ಕಾಮಗಾರಿ ಕಳೆದ 3ತಿಂಗಳಿಂದ ಸ್ಥಗಿತವಾಗಿದೆ,ಪೈಪ್ ಅಳವಡಿಸಲೆಂದು ಗುಂಡಿ ತೆಗೆದು ಬಿಟ್ಟಿರುವುದರಿಂದ ಸಾ ರ್ವಜನಿಕರಿಗೆ ಅನಾನುಕೂಲವಾಗುತ್ತಿದೆ,ಇದಕ್ಕೆ ಕಾರಣ ಏನೆಂದು ಸಂಸದರು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಕಾರ‌್ಯಪಾಲಕ ಇಂಜಿನಿಯ ರ್ ಬಸವನಗೌಡಪಾಟೀಲ್,ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಈ ರೀತಿ ಆಗಿದೆ,ಕೂಡಲೇ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದ ರು.
ಜಿಲ್ಲೆಯಲ್ಲಿ ಗುಣಮಟ್ಟದ ಕಾಮಗಾರಿಗಳಾಗುತ್ತಿಲ್ಲ. ಗುಣಮಟ್ಟದ ಪೈಪ್ ಹಾಗೂ ನಲ್ಲಿಗಳನ್ನು ಅಳವಡಿಸುತ್ತಿಲ್ಲವೆಂಬ ಸಾಕಷ್ಟು ದೂರು ಗಳಿವೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಯಾವುದೇ ರಾಜೀ ಇಲ್ಲವೆಂದು ಅಧಿಕಾರಿಗಳಿಗೆ ಸಂಸದರು ತಾಕೀತು ಮಾಡಿದರು. ಜಿಪಂ ಡಿ.ಆರ್.ಮಧು,ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ಎಸ್.ನಾಡರ್ ಮತ್ತಿತರ ಅ ಧಿಕಾರಿಗಳಿದ್ದರು.