

ತುಮಕೂರು : ಜಿಲ್ಲಾಸ್ಪತ್ರೆಯ ಎಂಆರ್‌ಐ ಸ್ಕಾೃನಿಂಗ್ ಸೆಂಟರ್ ಕಳೆದ ಹದಿನೈದು ದಿನದಿಂದ ಕೆಟ್ಟಿದೆ. ಕರೊನಾದಿಂದ ಚೇತರಿಸಿಕೊಂಡ ನಂತರ ಬ್ಲ್ಯಾಕ್‌ಂಗಸ್ ಪತ್ತೆಗೆ ಅಗತ್ಯವಾಗಿರುವ ಎಂಆರ್‌ಐ ಸ್ಕಾೃನಿಂಗ್ ಮಾಡಿಸಲು ಖಾಸಗಿ ಲ್ಯಾಬ್‌ಗಳಲ್ಲಿ 6 ಸಾವಿರ ರೂ. ಪಡೆಯುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ದುಬಾರಿ ಯಂತ್ರವಿದ್ದರೂ ಉಪಯೋಗಕ್ಕೆ ಬರದಂತಾಗಿದೆ. ತಾಂತ್ರಿಕ ದೋಷದ ನೆಪಮಾಡಿಕೊಂಡು ರೋಗಿಗಳನ್ನು ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸುತ್ತಿರುವುದರ ಹಿಂದೆ ದಂಧೆಯ ಅನುಮಾನ ಕೂಡ ಇದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಎಂಆರ್‌ಐ ಸ್ಲ್ಯಾನ್ ಸೇವೆ ಉಚಿತವಾಗಿ ನೀಡಲಾಗುತ್ತಿತ್ತು, ಇತ್ತೀಚೆಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಹೆಚ್ಚಾದಾಗ ಎಂಆರ್‌ಐ ಸ್ಕಾೃನ್‌ಗೆ ಬೇಡಿಕೆ ಹೆಚ್ಚಾಗಿದ್ದು ಕಳೆದ 15 ದಿನದಿಂದ ಯಂತ್ರ ಸ್ತಬ್ಧವಾಗಿದೆ. ಕ್ರಸ್ನಾ ಡಯಾಗ್ನೋಸ್ಟಿಕ್ ಪ್ರೈ ಲಿ., ಜಿಲ್ಲಾಸ್ಪತ್ರೆಯಲ್ಲಿರುವ ಸ್ಕಾೃನಿಂಗ್ ಸೆಂಟರ್ ಸಹಯೋಗ ವಹಿಸಿಕೊಂಡು ಕಳೆದಷ್ಟು ದಿನದಿಂದ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು ಬಡವರಿಗೆ ಹೊರೆಯಾಗಿದೆ. ಸ್ಕಾೃನ್ ಅಗತ್ಯವಿರುವ ರೋಗಿಗೆ ಖಾಸಗಿ ಲ್ಯಾಬ್‌ನಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದ್ದರೂ ಈ ಬಗ್ಗೆ ಸಿಬ್ಬಂದಿ ಬಾಯಿಬಿಡುತ್ತಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾೃನಿಂಗ್ ಯಂತ್ರ ನಿಂತು 15 ದಿನಗಳಾಗಿವೆ, ಕರೊನಾದಿಂದ ಚೇತರಿಸಿಕೊಂಡಿದ್ದ ನಾನು ಹೆಚ್ಚಿನ ಪರೀಕ್ಷೆ ಅಗತ್ಯವಿದ್ದ ಕಾರಣಕ್ಕೆ ಖಾಸಗಿ ಲ್ಯಾಬ್‌ನಲ್ಲಿ 6000 ಕೊಟ್ಟು ಪರೀಕ್ಷೆ ಮಾಡಿಸಿಕೊಂಡೆ, ಸರ್ಕಾರದ ಲ್ಯಾಬ್‌ನಲ್ಲಿ ಉಚಿತವಾಗಿ ಆಗಬಹುದಾಗಿದ್ದ ಪರೀಕ್ಷೆ ಅಷ್ಟೊಂದು ಹಣಕೊಟ್ಟಿದ್ದು ನಮ್ಮ ಸಂಕಷ್ಟ ಮತ್ತಷ್ಟು ಹೆಚ್ಚಿಸಿತು. ಮಂಜುನಾಥ್ ತುಮಕೂರು ಎಂಆರ್‌ಐ ಸ್ಕಾೃನಿಂಗ್ ಯಂತ್ರವನ್ನು ತಾಂತ್ರಿಕ ಕಾರಣದಿಂದ ಸ್ಥಗಿತ ಮಾಡಲಾಗಿದೆ, ರಿಪೇರಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಎಂಆರ್‌ಐ ಸ್ಕಾೃನಿಂಗ್ ಅಗತ್ಯವಿರುವ ರೋಗಿಗಳಿಗೆ ಸರ್ಕಾರವೇ ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುತ್ತಿದ್ದು, ಜನರು ಸದುಪಯೋಗ ಪಡೆಯಬೇಕು. ಡಾ.ಸುರೇಶ್‌ಬಾಬು, ಜಿಲ್ಲಾ ಶಸಚಿಕಿತ್ಸಕ