ಜಿಲ್ಲಾಸ್ಪತ್ರೆ ಖಾಸಗೀಕರಣ ಬೇಡ- ಆರೋಗ್ಯ ಆಂದೋಲನ ಪ್ರತಿಭಟನೆ

IMG-20230608-WA0034.jpg
Published on

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸಬಾರದು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವತ್ರಿಕ ಆರೋಗ್ಯ ಆಂದೋಲನ ವತಿಯಿಂದ ಜಿಲ್ಲಾಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಆಸ್ಪತ್ರೆಯಲ್ಲಿ ಕೆಲವು ನ್ಯೂನ್ಯತೆಗಳಿವೆ. ಈ ಕಾರಣಕ್ಕೆ ಖಾಸಗೀಕರಣ ಮಾಡುವುದು ಪರಿಹಾರವಲ್ಲ. ಸಮಸ್ಯೆಗಳನ್ನು ಪರಿಹರಿಸಿ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಮುಖಂಡ ಪ್ರಸನ್ನ ಸಾಲಿಗ್ರಾಮ ಹೇಳಿದರು. ದರು.

ಜಬೀನಾಖಾನಂ ಮಾತನಾಡಿ ಚಿಗಟೇರಿ ಆಸ್ಪತ್ರೆ ಬಲಗೊಳ್ಳಲು ಹೆಚ್ಚು ಅನುದಾನ ನೀಡಬೇಕು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊರಗಡೆ ಪರೀಕ್ಷೆಗೆ ಕಳಿಸದೆ, ಆಸ್ಪತ್ರೆಯಲ್ಲಿಯೇ ರೋಗಿಗಳಿಗೆ ಎಲ್ಲಾ ಪರೀಕ್ಷೆಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾ ಅಧೀಕ್ಷಕ ಡಾ. ಸುಭಾಷ್ ಹಡಗಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೆ.ಬಿ. ಓಬಳೇಶ, ನಿಶಾ, ಮನೋಹರ್ ಯಲವಟ್ಟಿ, ರಾಜೇಶ್, ಆಶಾ, ಶಾಂತಮ್ಮ, ಗೊಪಾಲ್ ದಾಬ್ಡೆ, ಎಂ.ಕರಿಬಸಪ್ಪ, ಡಾ.ಪವಾರ್, ನೂರ್ ಫಾತೀಮಾ, ಹಸೀನಾ, ಫಾತಿಮಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net