ಜಿಲ್ಲಾಮಟ್ಟದ ‌ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಚಾಲನೆ

IMAG6277_1.jpg
Published on

ಚಿತ್ರದುರ್ಗ: ರಾಷ್ಟ್ರೀಯ ‌ಮತದಾರರ ದಿನಾಚರಣೆ ಅಂಗವಾಗಿ ಜಿಪಂ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ

ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಡಿಸಿ ಆರ್.ವಿನೋತ್ ಪ್ರಿಯಾ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ,ಜಿಲ್ಲೆಯಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಜಿಲ್ಲಾದ್ಯಂತ ಶೇ. ೧೦೦ ಪ್ರಮಾಣದಲ್ಲಿ ಮತದಾರ ನೋಂದಣಿ ಆಗ ಬೇಕೆಂದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ , ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ ಸುಭದ್ರ ಪ್ರಜಾಪ್ರಭುತ್ವ ಕ್ಕೆ‌ಕಡ್ಡಾಯ ಮತದಾನಕ್ಕೆ ಸಲಹೆ ನೀಡಿದರು.

ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮೊದಲಾದ ಅಧಿಕಾರಿಗಳಿದ್ದರು.

ಪ್ರೌಢಶಾಲೆ, ಪಿಯು ಹಾಗೂ ಪದವಿಯ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net