ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

Mandaknalli Dist Level Sports Photo
Published on

ಬೀದರ್: ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಹಜರತ್ ಮುಬಾರಕ್ ಶಹೀದ್ ದರ್ಗಾದ ಜಾತ್ರೆ ಅಂಗವಾಗಿ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ವಾಲಿವಾಲ್ ಪಂದ್ಯಾವಳಿ ಹಾಗೂ ಓಟದ ಸ್ಪರ್ಧೆ ನಡೆದವು.
ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ ಹಾಗೂ ಎಂ.ಡಿ. ಅಸ್ಲಂ ಅವರ ನೇತೃತ್ವದಲ್ಲಿ ನಡೆದ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಶೀನಾಥ ಗೌರಶೆಟ್ಟಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಬಸವರಾಜ, ಮಾಜಿ ಅಧ್ಯಕ್ಷ ರಿಯಾಜುದ್ದಿನ್ ಚಿಂಚೋಳಿಕರ್, ಗ್ರಾಮ ಪಂಚಾಯಿತಿ ಸದಸ್ಯ ಸಂಜುಕುಮಾರ ಬಾಪುರ, ಪ್ರಮುಖರಾದ ರಮೇಶ ಶಟಗೊಂಡ, ಎಂ.ಡಿ. ಇಲಿಯಾಸ್, ಚಂದ್ರಕಾಂತ ಗುಡುಸಾಬ್, ಮೊಯಿಜ್, ಅಲಿ, ಅಖಿಲ್, ಮಹಮ್ಮದ್ ಇರ್ಫಾನ್, ಬಸವರಾಜ, ಸುಲೇಮಾನ್, ಎಂ.ಡಿ. ಖಾಜಾ, ಎಂ.ಡಿ. ಇಸ್ಮಾಯಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net