ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಶಿಕಾಂತ ನಾಮಪತ್ರ

0307KLB01
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದರು. ತಮ್ಮ ಪೆನಾಲ್‌ನ ಇತರ ಸ್ಪರ್ಧಾರ್ಥಿಗಳೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ನಂತರ ಮಾತನಾಡಿ, ವೀರಶೈವ ಲಿಂಗಾಯತ ಸಮಾಜವನ್ನು ಬಲಿಷ್ಠಗೊಳಿಸುವ ಉದ್ದೇಶದೊಂದಿಗೆ ಸ್ಪರ್ಧೆಗೆ ಇಳಿದಿದ್ದೇನೆ. ನಮ್ಮ ಮನೆತನವೂ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಎಲ್ಲ ಮುಖಂಡರು, ಒಳಪಂಗಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಸಮಾಜದ ಅಭಿವೃದ್ಧಿಗೆ ದುಡಿಯಲು ಸ್ಪರ್ಧಿಸುತ್ತಿದ್ದೇನೆ ಎಂದರು.
ಸಮಾಜದ ಮುಖಂಡರು, ಜನಪ್ರತಿನಿಧಿಗಳು, ಉದ್ಯಮಿಗಳು, ಸಾಧಕರ ಸಹಕಾರದೊಂದಿಗೆ ಕಲಬುರಗಿ ನಗರ ಮತ್ತು ಎಲ್ಲ ತಾಲೂಕುಗಳಲ್ಲಿ ಸಮಾಜದ ಸಮುದಾಯ ಭವನ ಮತ್ತು ವಸತಿ ನಿಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇನೆ. ನನಗೆ ಮುಖಂಡರು, ಮಹಾಸಭೆಯ ಸದಸ್ಯರು ಬೆಂಬಲಿಸಿ, ಆಶೀರ್ವದಿಸುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ಹೇಳಿದರು.

ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ್, ಎಂ.ಎಸ್.ಪಾಟೀಲ್, ಶರಣು ಪಪ್ಪಾ, ಶ್ರೀಶೈಲ ಘೂಳಿ, ಪ್ರಶಾಂತ ಗುಡ್ಡಾ, ಶರಣು ಭುಸನೂರ, ಶೀಲಾ ಮುತ್ತಿನ್, ದಿನೇಶ ಪಾಟೀಲ್, ಸಂಗಮೇಶ ನಾಗನಳ್ಳಿ, ಮಂಜು ರಡ್ಡಿ, ವೀರು ಪಾಟೀಲ್ ರಾಯಕೋಡ, ವಿಶ್ವನಾಥ ಪಾಟೀಲ್, ರವಿಚಂದ್ರ ಪಾಟೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net