ಜಿಲ್ಲಾಧಿಕಾರಿಗೆ ಚಿಗಟೇರಿ ಆಸ್ಪತ್ರೆ ಡಿ ದರ್ಜೆ ನೌಕರರ ಮನವಿ

IMG-20230828-WA0037.jpg
Published on

ದಾವಣಗೆರೆ: ರಾಯಚೂರು ಮೂಲದ ಏಜೆನ್ಸಿಯಿಂದ ಲೋಪ ಆಗದಿದ್ದರೂ ವಿನಾಕಾರಣ ಆರೋಪ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಹನುಮಂತಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿಗಟೇರಿ ಜಿಲ್ಲಾಸ್ಪತ್ರೆ ಡಿ ದರ್ಜೆ ನೌಕರರು ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರಿಗೆ ಮನವಿಪತ್ರ ಸಲ್ಲಿಸಿದರು.

ಈಗಿರುವ ಏಜೆನ್ಸಿಯವರು ನಮಗೆ ಪಾರದರ್ಶಕವಾಗಿ ಸಂಬಳ ನೀಡುವುದಲ್ಲದೆ, ಪಿಎಫ್, ಇಎಸ್‌ಐ ಇನ್ನಿತರೆ ಸೌಲಭ್ಯ ನೀಡುತ್ತ ಬಂದಿದ್ದಾರೆ. ಏಜೆನ್ಸಿ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ಗುತ್ತಿಗೆ ವಹಿಸಿಕೊಡುವ ಹುನ್ನಾರದಿಂದ ಹನುಮಂತಪ್ಪ ಆರೋಪ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ದೂರಿದರು.

ದುರುದ್ದೇಶದ ಆರೋಪದಿಂದಾಗಿ ಏಜೆನ್ಸಿ ರದ್ದಾದಲ್ಲಿ ನಮಗೆ ನಿರುದ್ಯೋಗ ಕಾಡಲಿದೆ. ಜೀವನ ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಕಾರ್ಮಿಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹನುಮಂತಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಚ್.ಡಿ.ಸುರೇಂದ್ರ, ರತ್ನಮ್ಮ, ಉಮೇಶ, ನಿಂಗರಾಜ್, ಪಿ. ನವೀನ್, ಎಚ್. ದೇವರಾಜ್, ರೇಣುಕಮ್ಮ, ಮಣಿಕಂಠ, ಎಚ್. ಕರಿಬಸಪ್ಪ ಹಾಗೂ ಇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net