ಜಿಲ್ಲಾಧಿಕಾರಿ ಸ್ವಾಗತಕ್ಕ ಸಜ್ಜಾಗುತ್ತಿದೆ ನಲ್ಲೂರು, 20ರಂದು ವಾಸ್ತವ್ಯ ಹೂಡಲಿರುವ ಡಿಸಿ ಕೆ. ಶ್ರೀನಿವಾಸ್

9 CPTN 3
Published on

ಚನ್ನರಾಯಪಟ್ಟಣ: ಗ್ರಾಮೀಣ ಜನರ ಹತ್ತು ಹಲವು ಕುಂದುಕೋರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾ.20ಕ್ಕೆ ನಲ್ಲೂರು ಗ್ರಾಪಂನ ನಲ್ಲೂರು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದಕ್ಕಾಗಿ ಗ್ರಾಮವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಜಿಲ್ಲಾಧಿಕಾರಿ ಅವರು ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮದಲ್ಲಿದ್ದು, ಜನರ ಅಹವಾಲು ಆಲಿಸಲಿದ್ದಾರೆ. ದೇವಹಳ್ಳಿ ತಹಸೀಲ್ದಾರ್ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ್ ಅನಿಲ್ ಆರೋಲಿಕರ್, ಜಿಲ್ಲಾಧಿಕಾರಿ ಅವರ ಆದೇಶ ಮೇರೆಗೆ ಗ್ರಾಪಂ ಮಟ್ಟದಲ್ಲಿ ಜನಪ್ರತಿನಿದಿಗಳ ಸಭೆ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ, ಕುಂದುಕೊರತೆ, ಅಹವಾಲು ಸ್ವೀಕರಿಸಲಾಗುತ್ತಿದೆ ಎಂದರು. ರಾಜಸ್ವ ನಿರೀಕ್ಷಕರಾದ ಆರ್. ಪ್ರಕಾಶ್, ಕೆ. ಜನಾರ್ದನ್, ಗ್ರಾಮ ಲೆಕ್ಕಾಧಿಕಾರಿಗಳಾದ ಡಿ. ಗೌತಮ್, ಅಕ್ಷಯ್, ಸಿ. ವೇಣುಗೋಪಾಲ್, ಎಂ. ಅಶೋಕ್, ಗ್ರಾಮ ಸಹಾಯಕರಾದ ಎಂ. ವೆಂಕಟೇಶ್, ಟಿ. ರವಿ, ಸಂತೋಷ್, ಮಂಜುನಾಥ್, ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್ ಇತರರು ಮನೆ, ಮನೆಗೆ ತೆರಳಿ ಅಹವಾಲು ಸ್ವೀಕರಿಸಿದರು.

ರೈತಾಪಿ ವರ್ಗದವರು ಗ್ರಾಮದಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಸಾಧ್ಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಜಿ. ಲಕ್ಷ್ಮೀನಾರಾಯಣ್ ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆಗೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸುವುದರಿಂದ ಸ್ಥಳದಲ್ಲೇ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ಇಂಥ ಕಾರ್ಯಕ್ರಮಗಳು ಎಲ್ಲ ಹಳ್ಳಿಗಳಲ್ಲಿ ಆಗಬೇಕು. ಚಂದ್ರು, ನಲ್ಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net