ಜಿಲ್ಲಾಧಿಕಾರಿ ಬಳಿ ಓಬಣ್ಣಹಳ್ಳಿ ಜನರ ಅಳಲು

CTD OBANANAHALLI DC MANAVI
Published on

ಚಿತ್ರದುರ್ಗ: ಮನೆಗಳು ಜಲಾವೃತಗೊಂಡಿದ್ದರೂ ಇಲ್ಲಿಯವರೆಗೂ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ತಾಲೂಕು ಓಬಣ್ಣಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಡಿಸಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಅವರ ಬಳಿ ತಮ್ಮ ಸಮಸ್ಯೆ ಹೇಳಿದರು. ಈಚೆಗೆ ಸುರಿದ ಮಳೆಯಿಂದಾಗಿ ಗುಡ್ಡದಿಂದ ಹರಿದ ನೀರಿನಿಂದಾಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ಹಾನಿಯಾಗಿದೆ. ನಿಲ್ಲಲು ನೆಲೆ ಇಲ್ಲವಾಗಿದೆ. ಪ್ರಕೃತಿ ವಿಕೋಪದಿಂದಾಗಿ ಬದುಕು ಆತಂತ್ರವಾಗಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ತಿಪ್ಪೇಸ್ವಾಮಿ, ಕರಿಯಪ್ಪ, ಚಂದ್ರಮ,್ಮ ನಾಗಮ್ಮ, ಶಿವಣ್ಣ, ಓಂಕಾರಪ್ಪ, ಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net