ಜಿಲ್ಲಾದ್ಯಂತ ಸ್ಕಂದ ಮಾತಾ ದೇವಿ ಆರಾಧನೆ

Kanive Maramma Devi
Published on

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಐದನೇ ದಿನ ಗುರುವಾರ ಸ್ಕಂದ ಮಾತಾ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಪೂಜೆ, ವಿಶೇಷಾಲಂಕಾರ ಸೇವೆ, ಪ್ರಾರ್ಥನೆ ಜರುಗಿತು.

ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಅಧಿದೇವತೆ ಏಕನಾಥೇಶ್ವರಿ, ಬನ್ನಿ ಮಹಾಕಾಳಿ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಕಾಳಿಕಾದೇವಿ, ಲಕ್ಷ್ಮೀಸಾಗರ ಗೇಟ್ ಬಳಿಯ ತುಳಜಾ ಭವಾನಿ, ಬುದ್ಧನಗರದ ರೇಣುಕಾ ಯಲ್ಲಮ್ಮ ಸೇರಿ ಹಲವು ದೇಗುಲಗಳಲ್ಲಿ ದೇವಿ ಮೂರ್ತಿಯನ್ನು ಪುಷ್ಪ, ಇತರ ವಸ್ತುಗಳಿಂದ ಹಾಗೂ ಜೆಸಿಆರ್ ಬಡಾವಣೆಯ ಗಣಪತಿ ದೇಗುಲದಲ್ಲಿ ಅನ್ನಪೂರ್ಣೇಶ್ವರಿ ರೂಪದಲ್ಲಿ ದೇವಿ ಮೂರ್ತಿ ಅಲಂಕರಿಸಲಾಗಿತ್ತು.

ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಈಡೇರಿಕೆ, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿಕೊಂಡರು. ಜೋಗಿಮಟ್ಟಿ ರಸ್ತೆಯ ಹವ್ಯಾಸಿ ಚಿತ್ರಕಲಾವಿದ ಮಹಾಂತೇಶ್ ತ್ರಿವಿಕ್ರಮ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ದೇವಿ ಮೂರ್ತಿಗೆ ಸ್ಪಂದ ಮಾತೆ ಮಾದರಿಯಲ್ಲಿ ಅಲಂಕರಿಸಿದ್ದರು. ಇದು ಕೆಲವರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net