

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳಿಂದ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.
ಟಿಎಚ್‌ಒ ಕಚೇರಿ: ಟಿಎಚ್‌ಒ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಇತರರಿದ್ದರು.
ಕವಾಡಿಗರಹಟ್ಟಿ ಸರ್ಕಾರಿ ಶಾಲೆ: ತಾಲೂಕಿನ ಕವಾಡಿಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಿಡಿಪಿಐ ಮಂಜುನಾಥ್ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ಸಿಆರ್‌ಪಿ ಅಜಯ್ಕುಮಾರ್, ಮುಖ್ಯ ಶಿಕ್ಷಕ ರುದ್ರಮುನಿ, ಶಿಕ್ಷಕರಾದ ತಿಪ್ಪೇಸ್ವಾಮಿ, ಸರಸ್ವತಿ ಇತರರಿದ್ದರು.
ಕಾಂಗ್ರೆಸ್ ಕಚೇರಿ: ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ, ಕಾನೂನು ಮಾನವ ಹಾಗೂ ಮಾಹಿತಿ ಹಕ್ಕು ವಿಭಾಗದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು. ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ವಿವಿಧ ವಿಭಾಗದ ಪದಾಧಿಕಾರಿಗಳಾದ ಶಿವಣ್ಣ, ಶಶಾಂಕ, ಎನ್.ಡಿ.ಕುಮಾರ್, ಡಿ.ಎನ್.ಮೈಲಾರಪ್ಪ, ಜಮೀರ್ ಅಹ್ಮದ್, ರವಿಕುಮಾರ್, ಗಂಗಾಧರಪ್ಪ, ರಾಜಪ್ಪ, ಚಿದಾನಂದಮೂರ್ತಿ, ಬಿಸನ್ನಹಳ್ಳಿ ಜಯಪ್ಪ, ಚಂದ್ರಣ್ಣ, ಮುದಾಸಿರ್ ನವಾಜ್, ಲಕ್ಷ್ಮೀಕಾಂತ್, ಖಾಸಿಂ ಆಲಿ, ಸ್ವಾಮಿ, ತಕ್ಕಡಿ ಸುರೇಶ್, ಕಲಿಂವುಲ್ಲಾ ಇತರರಿದ್ದರು.
ಅಂತ್ಯೋದಯ: ಮೆದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತ್ಯೋದಯ ಕಲ್ಚರಲ್ ಫೌಂಡೇಶನ್‌ನಿಂದ ಸಂವಿಧಾನ ದಿನ ಆಚರಿಸಲಾಯಿತು. ಲೇಖಕ ಎಚ್.ಆನಂದಕುಮಾರ್, ಉಪನ್ಯಾಸಕ ಡಾ.ನವೀನ್ ಮಸ್ಕಲ್, ಫೌಂಡೇಶನ್ ಅಧ್ಯಕ್ಷ ಡಿ.ಒ.ಮುರಾರ್ಜಿ, ಚುಟುಕು ಸಾಹಿತಿ ನವೀನ್, ಶಿಕ್ಷಕಿ ಜಯಶೀಲಮ್ಮ, ಕಲಾವಿದ ಜಯಣ್ಣ, ಪ್ರಭಾರ ಮುಖ್ಯ ಶಿಕ್ಷಕ ಗಿರೀಶ್, ಭಟ್ರಹಳ್ಳಿ ಧನಂಜಯ, ಶಿಕ್ಷಕ ಪಿ.ನವೀನ್, ಗಾಯಕ ಡಿ.ಬಿ.ನಿಂಗರಾಜ್ ಇತರರಿದ್ದರು.
ಎಸ್‌ಜೆಎಂ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ, ಪ್ರಜಾ ಸೇವಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸಂವಿಧಾನ ದಿನ ಆಚರಿಸಲಾಯಿತು. ತಾಪಂ ಇಒ ವೈ.ರವಿಕುಮಾರ್, ಆಹಾರ ಮತ್ತು ನಾಗರಿಕ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಉಪಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ, ಪ್ರಾಚಾರ್ಯ ಡಾ.ಪಿ.ಬಿ.ಭರತ್, ಶ್ರೀನಿವಾಸ್ ಮಳಲಿ, ಡಾ.ನಿರಂಜನ್, ದಿವ್ಯಾ, ರುಚಿತಾ ಇತರರಿದ್ದರು.