

ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ರಂಜಾನ್(ಈದುಲ್ ಫಿತ್ರ್) ಹಬ್ಬವನ್ನು ಶ್ರದ್ಧೆ ಭಕ್ತಿಯೊಂದಿಗೆ ಆಚರಿಸಲಾಯಿತು. ಬೆಳಗ್ಗೆ ಈದ್ಗಾ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರರ‍್ಥನೆ ಜರುಗಿತು. ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂತು. ಮುಸ್ಲಿಮರು ದಿನವಿಡೀ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.
ಕಲಬುರಗಿ, ಅಜಲಪುರ, ಸೇಡಂ, ಚಿತ್ತಾಪುರ, ಮಳಖೇಡ, ಕರಜಗಿ, ಜೇರ‍್ಗಿ, ಕಮಲಾಪುರ, ಆಳಂದ, ಕಾಳಗಿ, ಚಿಂಚೋಳಿ, ಶಹಾಬಾದ್ ಸೇರಿ ಎಲ್ಲೆಡೆ ಬೆಳಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ಹೊಸ ಬಟ್ಟೆ ತೊಟ್ಟು ಸುಗಂಧ ದ್ರವ್ಯ(ಅತ್ತರ್) ಲೇಪಿಸಿಕೊಂಡಿದ್ದರಿಂದ ಇಡೀ ಪರಿಸರ ಸುವಾಸನೆ ಭರಿತವಾಗಿತ್ತು. ಅಲ್ಲಾಹುಗೆ ನೆನದು ಸಾಮೂಹಿಕ ಪ್ರರ‍್ಥನೆ ನಂತರ ರ‍್ಜರಿ ಭೋಜನದ ರುಚಿ ನೋಡಿ, ಪರಸ್ಪರ ಆಲಂಗಿಸಿಕೊಂಡು ಈದ್ ಮುಬಾರಕ್ ಹೇಳಿದರು.
ನಗರದ ರಾಜಾಪುರದಲ್ಲಿನ ಈದ್ಗಾದಲ್ಲಿ, ಧರಿಯಾಪುರ ಕೋಟನೂರ ಬಡಾವಣೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರರ‍್ಥನೆ ಸಲ್ಲಿಸಿದರು. ಈದ್ಗಾ ಇಮಾಮ್ ಅವರು ಈದ್ ಸಂದೇಶ ನೀಡುವ ಜತೆಗೆ ಸಾಮೂಹಿಕ ಪ್ರರ‍್ಥನೆ ನಡೆಸಿಕೊಟ್ಟರು.
ನಗರದ ವಿವಿಧೆಡೆಯಿಂದ ಬೆಳಗ್ಗೆ ೯ರಿಂದಲೇ ಸಮಾಜದ ಜನತೆ ಈದ್ಗಾದತ್ತ ಹೆಜ್ಜೆ ಹಾಕಿದರು. ಭಾರಿ ಜನಸ್ತೋಮ ಸೇರುವ ಹಿನ್ನಲೆಯಲ್ಲಿ ಈದ್ಗಾ ಎದುರಿನ ಮುಖ್ಯ ರಸ್ತೆಯಲ್ಲಿ ಪ್ರರ‍್ಥನೆ ಮುಗಿಯುವವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಬೈಕ್ ಮತ್ತು ವಾಹನಗಳ ಸಾಲು ಕಂಡಿತು. ಪ್ರರ‍್ಥನೆ ನಂತರ ಜನತೆ ವಾಪಸಾಗುವ ವೇಳೆ ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡರು. ಪ್ರರ‍್ಥನೆ ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ಆಲಿಂಗನದ ಮೂಲಕ ಶುಭಕೋರಿದರು. ಪುಟ್ಟ ಪುಟ್ಟ ಮಕ್ಕಳು ಸಹ ಸಾಂಪ್ರದಾಯಿಕ ಧಿರಿಸಿನೊಂದಿಗೆ ಸಾಮೂಹಿಕ ಪ್ರರ‍್ಥನೆಯಲ್ಲಿ ಭಾಗವಹಿಸಿದ್ದು, ಗಮನ ಸೆಳೆಯಿತು.
ಸುರ್ಕುಂಬಾ, ಸಿಹಿತಿನಿಸು: ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಮರ ಮನೆಯಲ್ಲಿ ರಂಜಾನ್ ವಿಶೇಷವಾದ ಸುರ್ಕುಂಬಾ ಸೇರಿ ವಿವಿಧ ಭ$್ಯಗಳನ್ನು ಸಿದ್ಧಪಡಿಸಿ, ಸೇವಿಸಿದರು. ಅನ್ಯರ‍್ಮದ ಆತ್ಮಿಯರು, ಸ್ನೇಹಿತರನ್ನು ಮನೆಗೆ ಕರೆಸಿ ಸುರ್ಕುಂಬಾ ಸೇರಿ ವಿವಿಧ ಭ$್ಯಗಳನ್ನು ನೀಡಿ, ಉಪಚರಿಸಿದರು.