

ಬೀದರ್: ಸತತ ನಾಲ್ಕನೇ ದಿನವೂ ಜಿಲ್ಲಾದ್ಯಂತ ಮಳೆ ಮುಂದುವರಿದಿದೆ. ಬುಧವಾರ ಬೆಳಗ್ಗೆ ವಿರಾಮ ನೀಡಿದ ನಂತರ ಮಧ್ಯಾಹ್ನ ಮಳೆ ಜೋರಾಗಿ ಬಿದ್ದಿದ್ದು, ಗುರುವಾರವು ಮುಂದುವರಿದೆ.
ಜುಲೈನಲ್ಲಿ ವ್ಯಾಪಕ ಮಳೆಯಾಗಿತ್ತು. ಒಂದು ತಿಂಗಳು ವಿರಾಮದ ನಂತರ ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಈಗಾಗಲೇ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಕೆರೆಗಳು ಭರ್ತಿಯಾಗಿವೆ. ಇದೀಗ ಮತ್ತೆ ಮಳೆ ಜೋರಾಗಿ ಬರುತ್ತಿರುವುದರಿಂದ ಪ್ರವಾಹ ಜತೆಗೆ ಇನ್ನಷ್ಟು ಬೆಳೆ, ಆಸ್ತಿಪಾಸ್ತಿ ಹಾನಿಗೀಡಾಗುವ ಅಪಾಯ ಎದುರಾಗಿದೆ. ಎಲ್ಲೆಡೆ ಕಾರ್ಮೋಡ ಕವಿದ ಕಾರಣ ಮತ್ತಷ್ಟು ಸುರಿಯುವ ಸಾಧ್ಯತೆ ಇದೆ. ಮಳೆಯು ನಗರದಲ್ಲಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಅನೇಕ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಜನ ಪರಿತಪಿಸುವಂತಾಗಿದೆ.