ಜಿಲ್ಲಾದ್ಯಂತ ಮತ್ತಷ್ಟು ಜೂಜುಕೋರರ ಬಂಧನ

GAMBLING
Published on

ಚಿತ್ರದುರ್ಗ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಮತ್ತಷ್ಟು ಜೂಜುಕೋರರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರದವರೆಗೆ ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗ ವ್ಯಾಪ್ತಿಯ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ, 108 ಪ್ರಕ ರಣಗಳನ್ನು ದಾಖಲಿಸಿ, 575 ಆರೋಪಿಗಳನ್ನು ಬಂಧಿಸಿದ್ದರು. ಅವರಿಂದ 7.40 ಲಕ್ಷ ರೂ.ವಶಪಡಿಸಿಕೊಂಡಿದ್ದರು. ಈಗ ಈ ಪ್ರಕರಣಗಳ ಸಂಖ್ಯೆ 108ರಿಂದ 154ಕ್ಕೆ, ಆರೋಪಿಗಳ ಸಂಖ್ಯೆ 575ರಿಂದ 850 ಕ್ಕೆ ಹಾಗೂ ವಶಪಡಿಸಿಕೊಂಡಿರುವ ಮೊತ್ತ 7.40 ಲಕ್ಷ ರೂ. ಗಳಿಂದ 10.80 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.

ಬಾಕ್ಸ್.

(ಮಾರ್ಚ್ 29ರಿಂದ 31ವರೆಗೆ)

ಪೊಲೀಸ್ ಉಪವಿಭಾಗ-ಪ್ರಕರಣಗಳು-ಬಂಧಿತ ಆರೋಪಿಗಳು-ವಶಕ್ಕೆ ಪಡೆದ ಮೊತ್ತ(ಲಕ್ಷ ರೂ.)

ಚಿತ್ರದುರ್ಗ-47-246-3.94

ಹಿರಿಯೂರು-56-329-5.12

ಚಳ್ಳಕೆರೆ-51-275-1.73

--------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net